Karnataka news paper

ಧರ್ಮವನ್ನು ಮನೆಯೊಳಗೆ ‌ಇಟ್ಟು ಬರಬೇಕು: ಯುವ ಕಾಂಗ್ರೆಸ್ ವಕ್ತಾರೆ ಸುರೈಯ್ಯ ಅಂಜುಮ್


Online Desk

ಬೆಂಗಳೂರು: ಧರ್ಮಕ್ಕಿಂತ ದೇಶ ಮುಖ್ಯ. ಹಿಜಾಬ್ ಮುಸ್ಲಿಂ ಧರ್ಮದ ಪ್ರತೀಕ ಅದರ ಬಗ್ಗೆ ನಮ್ಮಗೆ ಹೆಮ್ಮೆ ಇದೆ. ಆದರೆ ಹಿಜಾಬ್ ತೆಗೆದಿಟ್ಟು ತರಗತಿಗೆ ಹಾಜರಾಗಬೇಕು ಎಂದು ಯುವ ಕಾಂಗ್ರೆಸ್ ವಕ್ತಾರೆ ಸುರೈಯ್ಯ ಅಂಜುಮ್ ಹೇಳಿದ್ದಾರೆ. 

ದೇಶದ ಸಂವಿಧಾನ ಹಿಜಾಬ್ ಧರಿಸುವುದಕ್ಕೆ ಅವಕಾಶ ಕೊಟ್ಟಿದೆ. ನಮ್ಮ ಧರ್ಮದ ಆಚರಣೆ ಮುಕ್ತ ಅವಕಾಶ ಕೊಟ್ಟಿದೆ. ಸಂವಿಧಾನ ಕೊಟ್ಟ ಅವಕಾಶವನ್ನು ದುರುಪಯೋಗಪಡಿಸಿವುದು ಸರಿಯಲ್ಲ. ಧರ್ಮವನ್ನು ಮನೆಯೊಳಗೆ ‌ಇಟ್ಟು ಬರಬೇಕು. ಮನೆಯಿಂದ ಹೊರಗೆ ಬಂದಾಗ ನಾವು ಮೊದಲು‌ ಭಾರತೀಯರು. ದೇಶವನ್ನು ಪ್ರೀತಿ, ಧರ್ಮದ ಆಚರಣೆ ಮಾಡಬೇಕು ಎಂದು ಅಂಜುಮ್ ಹೇಳಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಲೈವ್ ಗೆ ಬಂದು ಮಾತನಾಡಿರುವ ಅಂಜುಮ್ ಶಿಕ್ಷಣಕ್ಕಿಂತ ಬೇರೆ ದೊಡ್ಡ ಧರ್ಮ ಇಲ್ಲ. ಧರ್ಮಕ್ಕಿಂತಲೂ ಮುಖ್ಯ ನನ್ನ ದೇಶ ಎಂದು ಹೇಳಿದ್ದು ವಿಡಿಯೋ ಇದೀಗ ವೈರಲ್ ಆಗಿದೆ. 



Read more

[wpas_products keywords=”deal of the day”]