Karnataka news paper

ಆನ್‌ಲೈನ್‌ನಲ್ಲಿ ಹಣ ಗಳಿಸಲು ಹೊಸ ಮಾರ್ಗ ಪರಿಚಯಿಸಿದ ಯೂಟ್ಯೂಬ್‌!


ಯೂಟ್ಯೂಬ್‌

ಹೌದು, ಯೂಟ್ಯೂಬ್‌ನಲ್ಲಿ ಕಂಟೆಂಟ್‌ ಕ್ರಿಯೆಟರ್ಸ್‌ ಹೆಚ್ಚು ಹಣವನ್ನು ಗಳಿಸಲು ಯೂಟ್ಯೂಬ್‌ ಸಹಾಯ ಮಾಡಲು ಮುಂದಾಗಿದೆ. ಕಂಟೆಂಟ್‌ ಕ್ರಿಯೆಟರ್ಸ್‌ಗಳ ಚಾನಲ್‌ಗಳಿಗೆ ಹೊಸ ಆಲೋಚನೆಗಳನ್ನು ಕ್ರಿಯೆಟ್‌ ಮಾಡಲು ಸಹಾಯ ಮಾಡುವ ಹೊಸ ಮಾರ್ಗಗಳನ್ನು ಯೂಟ್ಯೂಬ್‌ ಬಹಿರಂಗಪಡಿಸಿದೆ. ಹಾಗಾದ್ರೆ ಯೂಟ್ಯೂಬ್‌ ಬಹಿರಂಗಪಡಿಸಿರುವ ಹೊಸ ಮಾರ್ಗ ಯಾವುದು> ಇದರಿಂದ ಯೂಟ್ಯೂಬ್‌ನಲ್ಲಿ ಹೆಚ್ಚಿನ ಹಣಗಳಿಸುವುದಕ್ಕೆ ಹೇಗೆ ಸಹಾಯವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಯೂಟ್ಯೂಬ್‌

ಯೂಟ್ಯೂಬ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿರುವ ಕಂಟೆಂಟ್‌ ಕ್ರಿಯೆಟರ್ಸ್‌ಗಳಿಗೆ ಹೊಸ ಮಾರ್ಗಗಳನ್ನು ಪರಿಚಯಿಸಿದೆ. ಜನರು ಶಾರ್ಟ್‌-ಫಾರ್ಮ್ ವೀಡಿಯೋ ವೀಕ್ಷಿಸಲು ಇಷ್ಟಪಡುತ್ತಾರೆ. ಇದರಿಂದ ಹೆಚ್ಚಿನ ಜನರನ್ನು ಆಕರ್ಷಿಸಲು ರಚನೆಕಾರರಿಗೆ ಅವಕಾಶವನ್ನು ನೀಡಲು ಉತ್ತಮ ಟೂಲ್‌ಗಳನ್ನು ನೀಡುವುದಕ್ಕೆ ಪ್ಲಾನ್‌ ಮಾಡಿರುವುದಾಗಿ ಯೂಟ್ಯೂಬ್‌ ಹೇಳಿದೆ. ಶಾರ್ಟ್‌ ವೀಡಿಯೋಗಳನ್ನು ಮಾಡುವಾಗ ಈ ಟೂಲ್‌ಗಳನ್ನು ಬಳಸಿ ಸೂಕ್ತವಾದ ಎಫೆಕ್ಟ್‌ ನೀಡುವುದರ ಮೂಲಕ ಜನರನ್ನು ಆಕರ್ಷಿಸಬಹುದು ಎನ್ನುವುದು ಯೂಟ್ಯೂಬ್‌ ಚಿಂತನೆಯಾಗಿದೆ.

ಯೂಟ್ಯೂಬ್

ಇನ್ನು ಯೂಟ್ಯೂಬ್ ಈಗ ಹೊಸ ವೀಡಿಯೊ ಎಫೆಕ್ಟ್‌ಗಳನ್ನು ಮತ್ತು ಶಾರ್ಟ್ಸ್‌ಗಾಗಿ ಎಡಿಟಿಂಗ್ ಟೂಲ್ಸ್‌ಗಳನ್ನು ಸೇರಿಸಲು ಯೋಜಿಸುತ್ತಿದೆ. ಆದ್ದರಿಂದ, ಕ್ರಿಯೆಟರ್ಸ್‌ ಶೀಘ್ರದಲ್ಲೇ ಉತ್ತಮವಾದ ಶಾರ್ಟ್‌ ವೀಡಿಯೊಗಳನ್ನು ಕ್ರಿಯೆಟ್‌ ಮಾಡಲು ಸಾಧ್ಯವಾಗಲಿದೆ. ಅಲ್ಲದೆ ಶಾರ್ಟ್ ಅನ್ನು ಕ್ರಿಯೆಟ್‌ ಮಾಡುವ ಮೂಲಕ ವೈಯಕ್ತಿಕ ಕಾಮೆಂಟ್‌ಗಳಿಗೆ ಪ್ರತ್ಯುತ್ತರ ನೀಡುವ ಸಾಮರ್ಥ್ಯವನ್ನು ಸಹ ಇದು ಪರಿಚಯಿಸುತ್ತದೆ. ಇದರಿಂದ ಹೆಚ್ಚಿನ ಜನರು ನಿಮ್ಮೊಂದಿಗೆ ಕಮ್ಯೂನಿಕೆಶನ್‌ ಹೊಂದುವುದಕ್ಕೆ ಸಾಧ್ಯವಾಗಲಿದೆ. ನೀವು ಪೋಸ್ಟ್ ಮಾಡಿದ ರೀಲ್‌ನಲ್ಲಿ ಬಳಕೆದಾರರು ಕಾಮೆಂಟ್ ಮಾಡಿದರೆ, ನಂತರ ನೀವು ವೀಡಿಯೊದೊಂದಿಗೆ ಆ ವ್ಯಕ್ತಿಗೆ ರಿಪ್ಲೇ ನೀಡಬಹುದು.

ಯೂಟ್ಯೂಬ್

ಇದಲ್ಲದೆ ಯೂಟ್ಯೂಬ್ ತನ್ನ ಇತ್ತೀಚಿನ ಬ್ಲಾಗ್ ಪೋಸ್ಟ್‌ನಲ್ಲಿ ಶೀಘ್ರದಲ್ಲೇ ಕ್ರಿಯೆಟರ್ಸ್‌ಗೆ ಹಣಗಳಿಸಲು ಹೊಸ ಮಾರ್ಗಗಳನ್ನು ಸೇರಿಸುತ್ತದೆ ಎಂದು ಹೇಳಿದೆ. ಇದರಲ್ಲಿ ಒಂದು ಬ್ರ್ಯಾಂಡ್‌ಕನೆಕ್ಟ್ ಮೂಲಕ ಬ್ರ್ಯಾಂಡೆಡ್ ವಿಷಯವನ್ನು ನಿರ್ಮಿಸುವ ಮಾರ್ಗವನ್ನು ಒಳಗೊಂಡಿದೆ. ಇದು ಸೂಪರ್ ಚಾಟ್ ಅನ್ನು ಶಾರ್ಟ್ಸ್‌ಗೆ ಸಂಯೋಜಿಸುತ್ತದೆ. ಶಾರ್ಟ್‌ನಿಂದ ಶಾಪಿಂಗ್ ಮಾಡುವ ಸಾಮರ್ಥ್ಯವನ್ನು ತರುತ್ತದೆ. ಇದರಿಂದ ಶಾಪಿಂಗ್ ಮಾಡಬಹುದಾದ ವೀಡಿಯೊಗಳು ಮತ್ತು ಲೈವ್ ಶಾಪಿಂಗ್ ಹೊರತುಪಡಿಸಿ, ಯೂಟ್ಯೂಬ್‌ನಲ್ಲಿ ಶಾಪಿಂಗ್‌ ಅನುಭವ ಹಂಚಿಕೊಳ್ಳಲು ಅವಕಾಶ ನೀಡಲಿದೆ

ಯೂಟ್ಯೂಬ್‌

ಇನ್ನು ಯೂಟ್ಯೂಬ್‌ನಲ್ಲಿ ಹಣಗಳಿಸಬೇಕಾದರೆ ಯಾವ ವಿಷಯವು ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಖು ಎಂದು ಯೂಟ್ಯೂಬ್‌ ಹೇಳಿದೆ. ಇದನ್ನು ಕ್ರಿಯೆಟರ್ಸ್‌ಗೆ ಅರ್ಥಮಾಡಿಸುವ ಉದ್ದೇಶದಿಂದ ಯೂಟ್ಯೂಬ್‌ ಸ್ಟುಡಿಯೋ ಅಪ್ಲಿಕೇಶನ್‌ಗೆ ಹೊಸ ಇನ್‌ಸೈಟ್ಸ್‌ ಅನ್ನು ಸೇರಿಸುತ್ತಿದೆ. ಇದು ವೀಕ್ಷಕರು ತಮ್ಮ ವಿಷಯದೊಂದಿಗೆ ಹೇಗೆ ಸಂವಹನ ನಡೆಸುತ್ತಿದ್ದಾರೆ ಎಂಬುದನ್ನು ಕ್ರಿಯೆಟರ್ಸ್‌ ಅರ್ಥಮಾಡಿಕೊಳ್ಳಲು ಸಹಾಯ ಮಾಡಲಿದೆ. ಇದರಿಂದ ವಿಕ್ಷಕರ ಆಸಕ್ತಿಗೆ ತಕ್ಕಂತೆ ಹೊಸ ಆಲೋಚನೆಗಳನ್ನು ಕ್ರಿಯೆಟ್‌ ಮಾಡಲು ಕ್ರಿಯೆಟರ್ಸ್‌ಗೆ ಸಹಾಯವಾಗಲಿದೆ.

ಯೂಟ್ಯೂಬ್‌

ಇದಲ್ಲದೆ ಯೂಟ್ಯೂಬ್‌ ಈ ವರ್ಷ ಹೆಚ್ಚುವರಿಯಾಗಿ ಹೊಸ ಫೀಚರ್ಸ್‌ ಅನ್ನು ಲಾಂಚ್‌ ಮಾಡಲು ಪ್ಲಾನ್‌ ರೂಪಿಸಿದೆ. ಈ ಫೀಚರ್ಸ್‌ ಕ್ರಿಯೆಟರ್ಸ್‌ಗಳನ್ನು ಒಟ್ಟಿಗೆ ಲೈವ್ ಮಾಡಲು ಅನುಮತಿಸುತ್ತದೆ. ಇದು ಕ್ರಿಯೆಟರ್ಸ್‌ಗಳ ನಡುವೆ ಹೊಸ ಸಂವಾದಾತ್ಮಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇನ್ನು ಸಾಮಾನ್ಯ ಬಳಕೆದಾರರು ಶೀಘ್ರದಲ್ಲೇ ಯೂಟ್ಯೂಬ್‌ನಲ್ಲಿ ನಲ್ಲಿ “ಗಿಫ್ಟ್ ಮೆಂಬರ್ಸ್‌” ಎಂಬ ಫೀಚರ್ಸ್‌ ಅನ್ನು ಪಡೆಯಲಿದ್ದಾರೆ. ಇದು ಲೈವ್‌ಸ್ಟ್ರೀಮ್‌ನಲ್ಲಿ ಮತ್ತೊಂದು ವೀಕ್ಷಕರಿಗೆ ಚಾನಲ್ ಸದಸ್ಯತ್ವವನ್ನು ಖರೀದಿಸುವ ಸಾಮರ್ಥ್ಯವನ್ನು ನೀಡಲಿದೆ.



Read more…

[wpas_products keywords=”smartphones under 15000 6gb ram”]