The New Indian Express
ಕಾರವಾರ: ದೈನಂದಿನ ಕೆಲಸ ಮುಗಿಸಿ ಸ್ನಾನ ಮಾಡಲು ಕಾಳಿ ನದಿಗೆ ಇಳಿದಿದ್ದ ಯುವಕನನ್ನು ಮೊಸಳೆ ಎಳೆದೊಯ್ದಿರುವ ಘಟನೆ ದಾಂಡೇಲಿ ಬಳಿಯ ಕಾಳಿ ನದಿಯಲ್ಲಿ ನಡೆದಿದೆ. ದಾಂಡೇಲಿಯ ಪಟೇಲ್ ನಗರದ ಹರ್ಷದ್ ಖಾನ್ ರಾಯಚೂರು (22) ಮೊಸಳೆ ದಾಳಿಗೆ ಬಲಿಯಾದ ಯುವಕ.
ದಿನನಿತ್ಯದ ಕೆಲಸ ಮುಗಿಸಿದ ಯುವಕ ಸ್ನಾನಕ್ಕಾಗಿ ಕಾಳಿ ನದಿ ದಡಕ್ಕೆ ಹೋಗಿದ್ದ. ಈ ವೇಳೆ ನೀರಿಗೆ ಕೈ ಹಾಕುತ್ತಿದ್ದಂತೆ ಮೊಸಳೆ ಆತನನ್ನು ಎಳೆದೊಯ್ದಿದೆ. ಇದನ್ನು ನೋಡುತ್ತಿದ್ದ ಸ್ಥಳೀಯರು ಮೊಸಳೆ ಬಗ್ಗೆ ಆತನಿಗೆ ಕೂಗಿ ಹೇಳಿದ್ದಾರೆ. ಆದರೆ ಅವರ ಮಾತು ಯುವಕನಿಗೆ ಕೇಳಿಸಲಿಲ್ಲ, ನೋಡು ನೋಡುತ್ತಿದ್ದಂತೆ ಯುವಕನನ್ನು ಮೊಸಳೆ ನೀರಿನೊಳಗೆ ಎಳೆದೊಯ್ದಿದೆ. ಸ್ಥಳೀಯರು ಆತನನ್ನು ರಕ್ಷಿಸಲು ಯತ್ನಿಸಿದ್ದಾರೆ, ಆದರೆ ಸಾಧ್ಯವಾಗಿಲ್ಲ ಎಂದು ದಾಂಡೇಲಿ ಡಿವೈಎಸ್ ಪಿ ಗಣೇಶ್ ಹೇಳಿದ್ದಾರೆ.
ಕಳೆದ 1 ವರ್ಷದಲ್ಲಿ ಇದು ಮೂರನೇ ಘಟನೆಯಾಗಿದೆ, ಅಕ್ಟೋಬರ್ 24, 2021 ರಂದು, 15 ವರ್ಷದ ಮೊಯಿನ್ ಮೆಹಬೂಬ್ ಮೀನು ಹಿಡಿಯಲು ಹೋದಾಗ ಕಾಳಿ ನದಿಯಲ್ಲಿ ಜಾರಿ ಬಿದ್ದ, ಕೂಡಲೇ ಮೊಸಳೆಯು ಆತನನ್ನು ಎಳೆದುಕೊಂಡು ಹೋಗಿತ್ತು. ಎರಡು ದಿನಗಳ ನಂತರ ಆತನ ಅರ್ಧ ತಿಂದ ದೇಹ ಪತ್ತೆಯಾಗಿತ್ತು.ಇದರ ಬೆನ್ನಲ್ಲೇ ಮತ್ತೊಂದು ಅರ್ಧತಿಂದ ದೇಹವನ್ನು ನದಿಯಿಂದ ಹೊರತೆಗೆದ ಘಟನೆ ನಡೆದಿದೆ.
Read more
[wpas_products keywords=”deal of the day”]