Karnataka news paper

‘ಅಲ್ಲಾಹು ಅಕ್ಬರ್’ ಎಂದ ವಿದ್ಯಾರ್ಥಿನಿಗೆ ಐಫೋನ್, ಸ್ಮಾರ್ಟ್‌ವಾಚ್‌ ಗಿಫ್ಟ್ ನೀಡಿದ ಮುಂಬೈನ ಶಾಸಕ


ಮಂಡ್ಯ: ‘ಅಲ್ಲಾಹು ಅಕ್ಬರ್‌’ ಎಂದು ಘೋಷಣೆ ಕೂಗಿದ ನಗರದ ಪಿಇಎಸ್‌ ಕಾಲೇಜಿನ ವಿದ್ಯಾರ್ಥಿನಿ ಬಿ.ಬಿ.ಮುಸ್ಕಾನ್‌ ಖಾನ್‌ ಅವರಿಗೆ ಮಹಾರಾಷ್ಟ್ರದ ಬಾಂದ್ರಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಜೀಶನ್‌ ಸಿದ್ದಿಕ್‌ ಅವರು ಐ ಫೋನ್‌ ಮೊಬೈಲ್‌ ಹಾಗೂ ಸ್ಮಾರ್ಟ್‌ ವಾಚ್‌ ಉಡುಗೊರೆಯಾಗಿ ನೀಡಿದ್ದಾರೆ.

ಶುಕ್ರವಾರ ಮುಸ್ಕಾನ್‌ ಮನೆಗೆ ಭೇಟಿ ನೀಡಿದ ಶಾಸಕ ಜೀಶನ್‌ ಸಿದ್ದಿಕ್‌ ಅವರು, ಮುಸ್ಕಾನ್‌ ಹಾಗೂ ಆಕೆಯ ಕುಟುಂಬದವರಿಗೆ ಧೈರ್ಯ ತುಂಬಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನೂರಾರು ವಿದ್ಯಾರ್ಥಿಗಳು ಎದುರಿಗಿದ್ದರೂ ‘ಅಲ್ಲಾಹು ಅಕ್ಬರ್‌’ ಎಂದು ಘೋಷಣೆ ಕೂಗಿದ ಮುಸ್ಕಾನ್‌ ಧೈರ್ಯವನ್ನು ಮೆಚ್ಚಲೇಬೇಕು. ಹಿಜಾಬ್‌ ಹಾಕಿಕೊಳ್ಳುವುದು ಅವರ ಹಕ್ಕು. ಅವರ ಹಕ್ಕಿನ ಬಗ್ಗೆ ಧೈರ್ಯದಿಂದ ದನಿ ಎತ್ತಿದ್ದಾರೆ. ಮಂಡ್ಯದಿಂದ ಇಂಡಿಯಾವರೆಗೂ ಆಕೆ ಬಗ್ಗೆ ಗೌರವ ಹೆಚ್ಚಾಗಿದೆ’ ಎಂದು ಮುಸ್ಕಾನ್‌ರನ್ನು ಕೊಂಡಾಡಿದರು.
ಅಲ್ಲಾಹು ಅಕ್ಬರ್ ಎಂದ ಮಂಡ್ಯದ ಯುವತಿಗೆ ‘ಐಕಾನ್‌ ಲೇಡಿ ಆಫ್‌ ಹಿಜಾಬ್’ ಬಿರುದು, 5 ಲಕ್ಷ ಬಹುಮಾನ
ಜಮಾತ್ ಎ ಹಿಂದ್ ಸಂಘಟನೆಯಿಂದ ಐದು ಲಕ್ಷ ಬಹುಮಾನ
ಇದಕ್ಕೂ ಮೊದಲು ಬಿ.ಬಿ ಮುಸ್ಕಾನ್ ಅವರಿಗೆ ಜಮಾತ್ ಎ ಹಿಂದ್ ಸಂಘಟನೆ ಪ್ರಮುಖ ಮೌಲಾನ ಮಹಾಮೂದ್‌ ಮದನಿ 5 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ. ಆ ಹಣವು ಆ ಸಹೋದರಿಯ ಉನ್ನತ ಶಿಕ್ಷಣಕ್ಕೆ ಉಪಯೋಗವಾಗಲಿ. ಉನ್ನತ ಹುದ್ದೆಯನ್ನು ಅಲಂಕರಿಸಲಿ ಎಂದು ಇರ್ಜಾನ್‌ ಅದ್ದೂರ್‌ ಎಂಬುವರು ಫೇಸ್‌ಬುಕ್‌ನಲ್ಲಿ ಪೋಸ್ವ್‌ ಮಾಡಿದ್ದಾರೆ.

ಏನಿದು ವಿವಾದ?
ಕಳೆದ ಒಂದೆರಡು ವಾರಗಳಿಂದ ರಾಜ್ಯಾದ್ಯಂತ ಹಿಜಾಬ್ ಮತ್ತು ಕೇಸರಿ ಶಾಲು ಧರಿಸುವ ವಿಚಾರದಲ್ಲಿ ವಿವಾದ ಉಂಟಾಗಿದ್ದು, ಉಡುಪಿಯಲ್ಲಿ ಶುರುವಾಗಿದ್ದ ಈ ವಿಷಕಾರಿ ಬೆಂಕಿ ಮಂಡ್ಯ ಸೇರಿದಂತೆ ರಾಜ್ಯದುದ್ದಗಲಕ್ಕೂ ವಿಸ್ತರಿಸಿತ್ತು. ಮಂಡ್ಯದಲ್ಲಿ ಕೂಡ ಈ ವಿವಾದ ಜೋರಾಗಿದ್ದು, ಹಿಜಾಬ್ ಧರಿಸಬಾರದೆಂದು ಮಂಡ್ಯದ ಪಿಇಎಸ್‌ ಕಾಲೇಜಿನ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಪ್ರತಿಭಟನೆ ಮಾಡುತ್ತಿದ್ದರು. ಈ ವೇಳೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅದೇ ಕಾಲೇಜಿನ ಬುರ್ಖಾ ಧರಿಸಿದ್ದ ಯುವತಿ ಬಳಿ ಹೋದ ಕೇಸರಿ ಶಾಲು ಧರಿಸಿದ್ದ ನೂರಾರು ಯುವಕರು ಆಕೆಯ ಮುಂದೆ ಜೈಶ್ರೀರಾಮ್ ಎಂದು ಘೋಷಣೆ ಕೂಗಿ ಆಕೆಯನ್ನು ಪ್ರಚೋದಿಸಿದ್ದರು. ಆಕೆಯನ್ನು ಹಿಂಬಾಲಿಸಿಕೊಂಡು ಜೈಶ್ರೀರಾಮ್ ಘೋಷಣೆ ಕೂಗುತ್ತಾ ಬಂದರೂ ಕಂಗೆಡದ ವಿದ್ಯಾರ್ಥಿನಿ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗುವ ಮೂಲಕ ಪ್ರತ್ಯುತ್ತರ ಕೊಟ್ಟಿದ್ದಳು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.
ಮಂಡ್ಯ: ಹಿಜಾಬ್‌ ವರ್ಸಸ್‌ ಕೇಸರಿ ಕಲಹ, ಜೈ ಶ್ರೀರಾಮ್‌ ಘೋಷಣೆ ವೇಳೆ ಅಲ್ಲಾಹು ಅಕ್ಬರ್ ಎಂದ ವಿದ್ಯಾರ್ಥಿ



Read more

[wpas_products keywords=”deal of the day sale today offer all”]