ಕನ್ನಡಿಗರಿಗೆ ಪುನೀತ್ ರಾಜ್‌ಕುಮಾರ್ ಎಂದರೆ ಏನೋ ಒಂದು ಸೆಂಟಿಮೆಂಟ್. ಅಪ್ಪು ಅವರ ಒಂದು ಫೋಟೋ ಸೋಷಿಯಿಲ್ ಮೀಡಿಯಾದಲ್ಲಿ ಕಂಡರೂ ಅದು ವೈರಲ್ ಆಗುತ್ತದೆ. ಅವರು ನಾಯಕರಾಗಿ ನಟಿಸಿರುವ ಕೊನೆಯ ಚಿತ್ರ ‘ಜೇಮ್ಸ್’. ಈ ಚಿತ್ರದ ಟೀಸರ್ ಶುಕ್ರವಾರ ಬಿಡುಗಡೆಯಾಗಿದೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಟೀಸರ್ ಅನ್ನು ಜನ ಹುಚ್ಚೆದ್ದು ನೋಡಿದ್ದಾರೆ.
ಬಹದ್ದೂರ್ ಚೇತನ್ ಕುಮಾರ್ ನಿರ್ದೇಶನ ಮಾಡಿರುವ ‘ಜೇಮ್ಸ್’ ಸಿನಿಮಾದಲ್ಲಿ ಅಪ್ಪು ಬಹಳ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವುದು ಟೀಸರ್‌ನಲ್ಲಿ ಗೊತ್ತಾಗುತ್ತಿದೆ. ಸಿನಿಮಾದ ಅದ್ಧೂರಿತನ ಟೀಸರ್‌ನಲ್ಲಿ ಕಂಡುಬಂದಿದ್ದು ಪ್ರತಿಯೊಂದು ಲೊಕೇಶನ್ ಕೂಡ ಅದ್ಭುತವಾಗಿ ಕಾಣುತ್ತಿದೆ. ಇಡೀ ಕಥೆಯನ್ನು ಪುನೀತ್‌ಗಾಗಿಯೇ ಮಾಡಿರುವಂತಿದೆ.
ಅಪ್ಪು ಅಭಿಮಾನಿಗಳ ಈ ಅತ್ಯದ್ಭುತ ಸ್ಪಂದನೆಗೆ ಇಡೀ ಚಿತ್ರತಂಡ ಖುಷಿಗೊಂಡಿದೆ. ‘ಟೀಸರ್ ನೋಡಿ ಹಲವರು ಕರೆ ಮಾಡುತ್ತಿದ್ದಾರೆ. ನಾನು ಮಾತ್ರವಲ್ಲ ಎಲ್ಲರೂ ಅಪ್ಪು ಅವರನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಇದರಿಂದ ತಿಳಿಯುತ್ತದೆ. ಟೀಸರ್‌ನಲ್ಲಿರುವಂತೆ ಇಡೀ ಸಿನಿಮಾ ಇಷ್ಟೇ ರಿಚ್ ಆಗಿ ಕಾಣುತ್ತದೆ. ಬಾಲಿವುಡ್ ಸಿನಿಮಾಗೂ ಕಡಿಮೆ ಇಲ್ಲದಂತಹ ಮೇಕಿಂಗ್ ಚಿತ್ರದಲ್ಲಿದೆ. ಅಪ್ಪು ಸರ್ ಅವರನ್ನು ಅವರ ಅಭಿಮಾನಿಗಳು ಮತ್ತು ಕನ್ನಡಿಗರು ಹೇಗೆ ನೋಡಬೇಕು ಎಂದು ಆಸೆಪಡುತ್ತಿದ್ದಾರೋ ಹಾಗೆ ಈ ಸಿನಿಮಾದಲ್ಲಿ ಕಾಣಿಸುತ್ತಾರೆ’ ಎಂದು ಪ್ರತಿಕ್ರಿಯಿಸಿದರು ನಿರ್ದೇಶಕ ಚೇತನ್.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೇಳಿದ್ದೇನು?
‘ಅಶ್ವಿನಿ ಮೇಡಮ್ ಅವರಿಗೆ ಟೀಸರ್ ತೋರಿಸಿದಾಗ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಮೂಡಿ ಬಂದಿದೆ ಎಂದು ಹೇಳಿ ಖುಷಿ ಪಟ್ಟರು. ನನ್ನ ಇಡೀ ತಂಡಕ್ಕೆ ಆ ಕ್ರೆಡಿಟ್ ಹೋಗುತ್ತದೆ. ಶಿವಣ್ಣ ಅವರ ಧ್ವನಿ ಬಹಳ ಚೆನ್ನಾಗಿ ಹೊಂದಿಕೊಂಡಿದೆ ಎನಿಸುತ್ತಿದೆ. ಹಿನ್ನೆಲೆ ಸಂಗೀತ ಎಲ್ಲವೂ ಬಹಳ ಚೆನ್ನಾಗಿ ಬಂದಿವೆ. ಬೇರೆ ರೀತಿಯ ಸಿನಿಮಾ ಇದಾಗುತ್ತದೆ’ ಎನ್ನುವುದು ನಿರ್ದೇಶಕ ಚೇತನ್ ಮಾತು.
‘ಟೀಸರ್‌ಗೆ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ನನಗೆ ಮಾತು ಬರುತ್ತಿಲ್ಲ. ಇಂತಹ ಒಳ್ಳೆ ಟೀಸರ್ ನೋಡಲು ಅಪ್ಪು ಸರ್ ಇಲ್ಲವಲ್ಲ ಎಂಬ ಬೇಸರವಿದೆ. ಟೀಸರ್‌ನಲ್ಲಿರುವುದಕ್ಕಿಂತಲೂ ಅದ್ಭುತವಾಗಿ ಸಿನಿಮಾದಲ್ಲಿ ಕಾಣಿಸುತ್ತಾರೆ’ ಎಂದಿದ್ದಾರೆ ನಿರ್ದೇಶಕ ಚೇತನ್ ಕುಮಾರ್.
ತಾರೆಯರ ಹಾರೈಕೆ
ಈ ಟೀಸರ್‌ಗೆ ಅಭಿಮಾನಿಗಳಿಂದ ಮಾತ್ರವಲ್ಲದೆ ಸ್ಯಾಂಡಲ್‌ವುಡ್‌ನ ಹಲವು ತಂತ್ರಜ್ಞರು, ಸೆಲೆಬ್ರಿಟಿಗಳಿಂದ ಬಹುಪರಾಕ್ ಕೇಳಿ ಬರುತ್ತಿದೆ. ಪ್ರಶಾಂತ್‌ನೀಲ್, ಧನಂಜಯ, ಶಿವರಾಜ್‌ಕುಮಾರ್, ನಿರೂಪ್ ಭಂಡಾರಿ, ಸಂತೋಷ್ ಆನಂದ್‌ರಾಮ್, ಅಮೃತಾ ಅಯ್ಯಂಗಾರ್ ಸೇರಿದಂತೆ ಹಲವರು ಟೀಸರ್ ಶೇರ್ ಮಾಡಿ ‘ಅಪ್ಪು ಸರ್ ಐ ಲವ್ ಯೂ’ ಎಂದು ಬರೆದುಕೊಂಡಿದ್ದಾರೆ.
ಈ ಟೀಸರ್ ಬೆಂಗಳೂರಿನ ಕೆಲ ಚಿತ್ರಮಂದಿರಗಳಲ್ಲಿಯೂ ಪ್ರದರ್ಶನ ಕಂಡಿದೆ. ಅಭಿಮಾನಿಗಳು ಅಪ್ಪು ಸಮಾಧಿ ಬಳಿ ಟೀಸರ್ ರಿಲೀಸ್ ಆದ ಮೇಲೆ ಸಂಭ್ರಮಾಚರಣೆಯನ್ನು ಮಾಡಿದ್ದಾರೆ.
ಟೀಸರ್ ಗಮನಿಸಿದರೆ ಸಿನಿಮಾ ಗನ್ ಮತ್ತು ವಜ್ರಗಳ ಮಾಫಿಯಾ ಕಥೆಯನ್ನು ಹೇಳುವುದನ್ನು ಸೂಚಿಸುತ್ತಿದೆ. ಪುನೀತ್ ರಾಜ್‌ಕುಮಾರ್ ಅವರು ಸಂತೋಷ್ ಎನ್ನುವ ಸೈನಿಕ ಅಥವಾ ರಾ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿರಬಹುದು ಎನ್ನಲಾಗಿದೆ. ಟೀಸರ್‌ನಲ್ಲಿರುವ ಎರಡು ಆ್ಯಕ್ಷನ್ ಸನ್ನಿವೇಶಗಳ ಬಿಟ್ ಅಭಿಮಾನಿಗಳನ್ನು ಸಿಕ್ಕಾಪಟ್ಟೆ ಸೆಳೆದಿದೆ. ಆ ಆ್ಯಕ್ಷನ್ ಸನ್ನಿವೇಶಗಳನ್ನು ಫೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹಂಚುತ್ತಿದ್ದಾರೆ. ಕೊನೆಯಲ್ಲಿ ಬರುವ ‘ನನಗೆ ಮೊದಲಿನಿಂದಲೂ ರೆಕಾರ್ಡ್ ಬ್ರೇಕ್ ಮಾಡಿ ಅಭ್ಯಾಸ’ ಎನ್ನುವ ಡೈಲಾಗ್ ಕೂಡ ವೈರಲ್ ಆಗಿದೆ. ಈ ಟೀಸರ್ ಜತೆಗೆ ಮಾರ್ಚ್ 17ಕ್ಕೆ ಅಪ್ಪು ಅವರ ಬರ್ತ್‌ಡೇಗೆ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಅನೌನ್ಸ್ ಮಾಡಿದೆ.
Read more
[wpas_products keywords=”deal of the day party wear dress for women stylish indian”]