Karnataka news paper

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಆಕ್ರಮಣಕಾರಿ ರಾಜಕಾರಣ ಆರಂಭ: ಸಚಿನ್ ಪೈಲಟ್


PTI

ಜೈಪುರ: ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ದೇಶದಲ್ಲಿ ಆಕ್ರಮಣಕಾರಿ ರಾಜಕಾರಣ ಆರಂಭವಾಯಿತ್ತೆಂದು ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಹೇಳುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಜಾಪ್ರಭುತ್ವವು ವಿಭಿನ್ನ ವಿಚಾರಧಾರೆಗಳು ಮತ್ತು ಚಿಂತನೆಯ ಜನರು ತಮ್ಮದೇ ಆದ ಮಾತುಗಳನ್ನು ಮಾತನಾಡುವ ವೇದಿಕೆಯಾಗಿದೆ ಮತ್ತು ಯಾರು ಸರಿ ಮತ್ತು ಯಾರು ತಪ್ಪು ಎಂದು ಸಾರ್ವಜನಿಕರು ನಿರ್ಧರಿಸುತ್ತಾರೆ ಎಂದಿದ್ದಾರೆ. 

ರಾಜಕಾರಣದಲ್ಲಿ ಯಾವುದೇ ವ್ಯಕ್ತಿ ಹಿಂಸೆ, ದುರ್ನಡತೆ, ಅಪ್ರಜಾಸತ್ತಾತ್ಮಕ ಭಾಷೆ ಬಳಸಬಾರದು ಎಂದು ನಾನು ಭಾವಿಸುವುದಿಲ್ಲ, ಆದರೆ,  ನಾವು ಪರಸ್ಪರ ವಿರೋಧಿಸುವಾಗ ಆರೋಗ್ಯಕರವಾಗಿರಬೇಕು,  ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ ನಾವು ಸುಸಂಸ್ಕೃತ ಭಾಷೆಯನ್ನು ಬಳಸಬೇಕು ಮತ್ತು ಹಿಂಸೆಗೆ ಯಾವುದೇ ಸ್ಥಾನವಿರಬಾರದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. 

ರಾಜಸ್ಥಾನದಲ್ಲಿ ಬಾಕಿ ಉಳಿದಿರುವ ಸಚಿವ ಸ್ಥಾನ ಭರ್ತಿ ಕುರಿತಂತೆ ಪ್ರತಿಕ್ರಿಯಿಸಿದ  ಪೈಲಟ್, ಎಲ್ಲರಿಗೂ ಮಂತ್ರಿ ಅಥವಾ ಇತರ ದೊಡ್ಡ ಹುದ್ದೆಯನ್ನು ನೀಡಲಾಗುವುದಿಲ್ಲ ಆದರೆ ಸರ್ಕಾರದಲ್ಲಿ ಅವರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಬಹುದು ಎಂದು ಹೇಳಿದರು.

ಇತ್ತೀಚೆಗಿನ ಎರಡು-ಮೂರು ತಿಂಗಳಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಸರಿಯಾದ ದಿಕ್ಕಿನಲ್ಲಿ ಕೆಲವು ಹೆಜ್ಜೆಗಳನ್ನು ಇಟ್ಟಿದ್ದು, 2023ರಲ್ಲಿ ವಿಧಾನಸಭಾ ಚುನಾವಣೆ ನಡೆದಾಗ ಮತ್ತೆ ಕಾಂಗ್ರೆಸ್ ಸರ್ಕಾರ ರಚಿಸುವ ವಿಶ್ವಾಸವಿದೆ ಎಂದರು.



Read more

[wpas_products keywords=”deal of the day”]