ಸಿಎಂ ಬಸವರಾಜ ಬೊಮ್ಮಾಯಿ ದಿಲ್ಲಿ ಪ್ರವಾಸ ಕೈಗೊಂಡಿದ್ದಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ರಾಜಕೀಯ ಬೆಳವಣಿಗೆ ವಿಚಾರವಾಗಿಯೂ ಚರ್ಚಿಸಿದ್ದರು. ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಮಾತನಾಡುವಂತೆ ಸೂಚಿಸಿದ್ದರು. ಅದರಂತೆ ನೇರವಾಗಿ ನಡ್ಡಾ ಭೇಟಿ ಸಾಧ್ಯವಾಗದಿದ್ದರೂ ಫೋನ್ ಮೂಲಕ ಸಿಎಂ ಮಾತನಾಡಿದ್ದರು. ಒಂದೆರಡು ದಿನದಲ್ಲಿ ಮತ್ತೆ ಮಾತನಾಡುವುದಾಗಿ ಸಿಎಂಗೆ ನಡ್ಡಾ ಹೇಳಿದ್ದರು.
ವರಿಷ್ಠರ ಸಂದೇಶ ಏನು?
ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಕಡೆಯಿಂದ ಸಂದೇಶ ಬಂದಿದೆ. ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯಗಳ ಚುನಾವಣೆ ಇರುವಾಗ ಕರ್ನಾಟಕದಲ್ಲಿ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆ ಕೈಗೊಳ್ಳುವುದು ಸೂಕ್ತವಲ್ಲ. ರಾಜ್ಯದಲ್ಲೂ ಜಂಟಿ ಅಧಿವೇಶನ ಮತ್ತು ಬಜೆಟ್ ಅಧಿವೇಶನದ ಹೊಸ್ತಿಲಲ್ಲಿ ಈ ಪ್ರಕ್ರಿಯೆ ಕೈಗೊಳ್ಳುವುದು ಜಾಣ್ಮೆಯ ನಡೆಯಾಗುವುದಿಲ್ಲ. ಮುಂದಿನ ಬೆಳವಣಿಗೆಯನ್ನು ನೋಡಿಕೊಂಡು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬಹುದು. ಅಲ್ಲಿಯವರೆಗೆ ಈ ವಿಷಯದಲ್ಲಿ ತಲೆ ಕೆಡಿಸಿಕೊಳ್ಳುವುದು ಬೇಡ. ದಿಲ್ಲಿಯಿಂದ ಇಂಥದೊಂದು ಸೂಚನೆ ಬಂದಿರುವುದರ ಬಗ್ಗೆ ಸ್ಥಾನಮಾನದ ಆಕಾಂಕ್ಷಿಗಳಿಗೂ ಮನದಟ್ಟು ಮಾಡಿಕೊಡಬೇಕು ಎನ್ನುವುದು ವರಿಷ್ಠರ ಸಂದೇಶದ ಸಾರಾಂಶ.
ಸಂಪುಟ ವಿಸ್ತರಣೆ ಮುಂದೂಡಿಕೆ ಆಗಿರುವುದರಿಂದ ನಿಗಮ ಮಂಡಳಿ ನೇಮಕ ಪ್ರಕ್ರಿಯೆಯೂ ಸದ್ಯಕ್ಕೆ ಬರಖಾಸ್ತುಗೊಂಡಂತಾಗಿದೆ. ಸಂಪುಟ ಸರ್ಜರಿ ಬಳಿಕವೇ ನಿಗಮ ಮಂಡಳಿಯತ್ತ ಲಕ್ಷ್ಯ ಹರಿಸುವುದು ಉತ್ತಮ ಎಂದು ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ.
Read more
[wpas_products keywords=”deal of the day sale today offer all”]