The New Indian Express
ನವದೆಹಲಿ: ಎಲ್ಲಾ ವಯಸ್ಕರಿಗೆ ಕೋವಿಡ್-19 ಮೂರನೇ ಡೋಸ್ ಲಸಿಕೆ ಕುರಿತ ನಿರ್ಧಾರವನ್ನು ವೈಜ್ಞಾನಿಕ ಅಗತ್ಯದ ಆಧಾರದಲ್ಲಿ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಜಾಗತಿಕ ಮಟ್ಟದಲ್ಲಿ ಅಥವಾ ಇನ್ನು ಯಾವುದೇ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಡೋಸ್ ಗಳ ಕುರಿತು ಯಾವುದೇ ಬೆಳವಣಿಗೆಯ ಬಗೆಗಿನ ಜ್ಞಾನ ಅಥವಾ ಮಾಹಿತಿಯ ಬಗ್ಗೆ ಗಮನ ಹರಿಸಲಾಗುತ್ತಿದೆ ಎಂದು ನೀತಿ ಆಯೋಗದ ವಾರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಆರೋಗ್ಯ ವಿಭಾಗದ ಸದಸ್ಯ ಡಾ.ವಿಕೆ ಪೌಲ್ ತಿಳಿಸಿದ್ದಾರೆ.
ಮುನ್ನೆಚ್ಚರಿಕಾ ಡೋಸ್ ಗಳ ಕುರಿತ ನಿರ್ಧಾರವನ್ನು ಅಗತ್ಯತೆಯ ಆಧಾರದಲ್ಲಿ ತೆಗೆದುಕೊಳ್ಳಲಾಗುತ್ತದೆ. ವೈಜ್ಞಾನಿಕ ಆಧಾರದ ನಂತರವಷ್ಟೇ ಉಳಿದ ಸಂಗತಿಗಳನ್ನು ಪರಿಗಣಿಸುತ್ತೇವೆ. ಈ ಅಂಶವನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ ಎಂದು ಪೌಲ್ ತಿಳಿಸಿದ್ದಾರೆ.
ಇನ್ನು ಇದೇ ವೇಳೆ ಲಸಿಕೆ ಅಭಿಯಾನದ ಬಗ್ಗೆ ಮಾತನಾಡಿರುವ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಒಟ್ಟಾರೆ ಲಸಿಕೆ ಅಭಿಯಾನದ ಗತಿ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.
Read more
[wpas_products keywords=”deal of the day”]