Karnataka news paper

Hijab : ರಾಜಸ್ಥಾನ ಸೇರಿ ದೇಶದ ಹಲವು ರಾಜ್ಯಗಳಿಗೆ ಕಾಲ್ಕಿಟ್ಟ ಹಿಜಾಬ್ ವಿವಾದ, ​​ಹಿಜಾಬ್‌ ದಿನ ಆಚರಣೆ!


ಜೈಪುರ: ಕರ್ನಾಟಕದ ಉಡುಪಿಯಿಂದ ಆರಂಭವಾದ ಹಿಜಾಬ್‌ ವಿವಾದ ಈಗ ಹಲವು ರಾಜ್ಯಗಳಿಗೆ ವ್ಯಾಪಿಸಿದೆ. ರಾಜಸ್ಥಾನದ ಜೈಪುರದ ಕಾಲೇಜೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಬಿಟ್ಟು, ಸಮವಸ್ತ್ರ ಧರಿಸಿ ತರಗತಿಗೆ ಹಾಜರಾಗುವಂತೆ ಕಾಲೇಜು ಆಡಳಿತ ಮಂಡಳಿ ಆದೇಶಿಸಿದೆ. ಹಿಜಾಬ್‌ ಬೆಂಬಲಿಸಿ ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಶುಕ್ರವಾರ ಜೈಪುರದ ಕಾಲೆಜೊಂದರಲ್ಲಿ ಐವರು ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಕಾಲೇಜಿಗೆ ತೆರಳಿದ್ದಾರೆ.

ಆಡಳಿತ ಮಂಡಳಿಯು ಅವರಿಗೆ ಪ್ರವೇಶ ನಿರಾಕರಿಸಿದ್ದಲ್ಲದೇ, ಕಾಲೇಜು ಸಮವಸ್ತ್ರ ಧರಿಸಿ ತರಗತಿಗೆ ಹಾಜರಾಗುವಂತೆ ಸೂಚಿಸಿತು. ವಿದ್ಯಾರ್ಥಿ-ಗಳು ಇದನ್ನು ಪೋಷಕರ ಗಮನಕ್ಕೆ ತಂದಿದ್ದು, ಕೂಡಲೇ ಕಾಲೇಜಿಗೆ ಆಗಮಿಸಿದ ಪೋಷಕರು ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಪೊಲೀಸರು ಮಧ್ಯಪ್ರವೇಶಿಸಿ ಕಾಲೇಜಿನಲ್ಲಿ ಸಮವಸ್ತ್ರ ಧರಿಸುವಂತೆ ವಿದ್ಯಾರ್ಥಿನಿಯರು ಹಾಗೂ ಪೋಷಕರ ಮನವೊಲಿಸುವಲ್ಲಿ ಯಶಸ್ವಿಯಾದರು.

ಹಿಜಾಬ್‌ ದಿನ ಆಚರಣೆ!
ಕರ್ನಾಟಕದ ಕೆಲ ಶಾಲೆ-ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧಿಸಿದ್ದನ್ನು ಖಂಡಿಸಿ ಮುಸ್ಲಿಂ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಮಹಾರಾಷ್ಟ್ರದ ಮಾಲೇಗಾಂವ್‌, ಪುಣೆ ಹಾಗೂ ಪಶ್ಚಿಮ ಬಂಗಾಳದ ಕೋಲ್ಕೊತಾದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮಾಲೇಗಾಂವ್‌ನಲ್ಲಿ ಜಮಿಯೆತ್‌ ಉಲೇಮಾ ಎ-ಹಿಂದ್‌ ಸಂಘಟನೆ ನೀಡಿದ ಕರೆಗೆ ಸಾವಿರಾರು ಮಹಿಳೆಯರು ಬೆಂಬಲ ನೀಡಿದ್ದು, ಹಿಜಾಬ್‌ ನಿಷೇಧದ ವಿರುದ್ಧ ಖಂಡನೆ ವ್ಯಕ್ತಪಡಿಸಿದ್ದಾರೆ.

Hijab Row: ಹಿಜಾಬ್ ವಿವಾದ: ಕರ್ನಾಟಕ ಹೈಕೋರ್ಟ್ ವಿಚಾರಣೆಯಲ್ಲಿ ಮಧ್ಯಪ್ರವೇಶಕ್ಕೆ ಸುಪ್ರೀಂ ನಕಾರ

ಫೆ.11ರಂದು ಪ್ರತಿ ವರ್ಷ ಹಿಜಾಬ್‌ ದಿನ ಎಂಬುದಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಇನ್ನು ಪ್ರತಿಭಟನೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಎಐಎಂಐಎಂ ಸ್ಥಳೀಯ ಶಾಸಕರೊಬ್ಬರಿಗೂ ನೋಟಿಸ್‌ ನೀಡಿದ್ದಾರೆ. ಕೋಲ್ಕೊತಾದಲ್ಲೂ ಸಾವಿರಾರು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ.



Read more

[wpas_products keywords=”deal of the day sale today offer all”]