Karnataka news paper

ಜನರನ್ನು ಧರ್ಮ, ಜಾತಿ ಆಧಾರದ ಮೇಲೆ ಒಡೆದು ಹಾಕುವುದೇ ಕಾಂಗ್ರೆಸ್‌ನ ಆದ್ಯತೆ; ನರೇಂದ್ರ ಮೋದಿ


ಡೆಹ್ರಾಡೂನ್‌: ಬಿಜೆಪಿಯ ಡಬಲ್‌ ಎಂಜಿನ್‌ ಸರಕಾರದ ಆದ್ಯತೆ ಉತ್ತರಾ ಖಂಡದ ಸರ್ವತೋಮುಖ ಅಭಿವೃದ್ಧಿ ಮಾತ್ರ. ಆದರೆ ಪ್ರತಿಪಕ್ಷ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಜನರನ್ನು ಧರ್ಮ, ಜಾತಿ ಆಧಾರದ ಮೇಲೆ ಒಡೆದು ಹಾಕುವುದೇ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಟೀಕಿಸಿದರು.

ಉತ್ತರಾಖಂಡದ ಕುಮಾವೊನ್‌ ಪ್ರಾಂತ್ಯದಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಕಾಂಗ್ರೆಸ್‌ನದ್ದು ವಿಭಜನೆಯ ನೀತಿ ಎನ್ನುವುದು ಉತ್ತರಾ ಖಂಡದ ಜನತೆಗೆ ಚೆನ್ನಾಗಿ ಅರಿವಿಗೆ ಬಂದಿದೆ. ಸಬ್‌ ಮೇ ಡಾಲೊ ಫೂತ್‌, ಮಿಲ್‌ ಕರ್‌ ಕರೋ ಲೂಟ್‌ (ಎಲ್ಲರನ್ನೂ ವಿಭಜಿಸಿ, ಎಲ್ಲದರಲ್ಲೂ ಲೂಟಿ ಮಾಡುವುದು) ಪ್ರತಿಪಕ್ಷಗಳ ಕಾರ್ಯವೈಖರಿಯಾಗಿದೆ. ತಾರತಮ್ಯ ನೀತಿಯಿಂದ ಎಂದಿಗೂ ಅಭಿವೃದ್ಧಿ ಸಾಧ್ಯವಿಲ್ಲ. ಆದರೆ, ಕಳೆದ ಐದು ವರ್ಷಗಳಲ್ಲಿ ಮಾಡಿದಂತೆಯೇ ಮುಂದಿನ ಐದು ವರ್ಷಗಳು ಕೂಡ ಬಿಜೆಪಿ ಸರಕಾರ ರಾಜ್ಯದ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸಲಿದೆ’ ಎಂದು ಭರವಸೆ ನೀಡಿದರು.
ನಮ್ಮ ಉದ್ದೇಶವನ್ನು ಮುಸ್ಲಿಂ ಸಹೋದರಿಯರು ಚೆನ್ನಾಗಿ ಬಲ್ಲರು: ಮೋದಿ ‘ರೀಚ್ ಔಟ್ ಪ್ಲ್ಯಾನ್’!
ರಾಜ್ಯದಲ್ಲಿ ಮುಸ್ಲಿಮರ ಮತಗಳ ಕ್ರೋಡೀಕರಣಕ್ಕೆ ಯತ್ನಿಸುತ್ತಿರುವ ಕಾಂಗ್ರೆಸ್‌, ಅಧಿಕಾರಕ್ಕೆ ಬಂದಲ್ಲಿ ಹೊಸದಾಗಿ ಮುಸ್ಲಿಂ ವಿಶ್ವ ವಿದ್ಯಾಲಯ ಸ್ಥಾಪಿಸುವುದಾಗಿ ಉತ್ತರಾಖಂಡ ಕಾಂಗ್ರೆಸ್‌ ಉಪಾಧ್ಯಕ್ಷ ಅಕಿಲ್‌ ಅಹ್ಮದ್‌ ಅವರ ಮೂಲಕ ಸಂದೇಶ ಹರಿಬಿಟ್ಟಿದೆ. ಇದಕ್ಕೆ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಚುನಾವಣಾ ಉಸ್ತುವಾರಿ ಹೊತ್ತಿರುವ ಹರೀಶ್‌ ರಾವತ್‌ರಿಂದಲೇ ಆಕ್ಷೇಪ ವ್ಯಕ್ತವಾಗಿರುವುದು ಗಮನಾರ್ಹ. ಇದನ್ನು ಗಮನದಲ್ಲಿ ಇರಿಸಿಕೊಂಡೇ ಪ್ರಧಾನಿಯವರು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರವಾಸೋದ್ಯಮ ಅಥವಾ ಪಲಾಯನ ಆಯ್ಕೆ: ‘ಉತ್ತರಾಖಂಡದ ಪ್ರವಾಸೋದ್ಯಮ ಅಭಿವೃದ್ಧಿಯನ್ನು ಗಮನದಲ್ಲಿ ಇರಿಸಿಕೊಂಡೇ ಈ ಸಾಲಿನ ಬಜೆಟ್‌ ಮಂಡನೆಯಲ್ಲಿ ಪರ್ವತ ಮಾಲಾ ಮತ್ತು ವೈಬ್ರೆಂಟ್‌ ವಿಲೇಜ್‌ ಯೋಜನೆಗಳನ್ನು ಜಾರಿ ಮಾಡುವ ಸಂಕಲ್ಪ ಮಾಡಲಾಗಿದೆ. ಚೀನಾ ಮತ್ತು ನೇಪಾಳದ ಜತೆಗೆ ಗಡಿ ಹಂಚಿಕೊಳ್ಳುವ ರಾಜ್ಯವಾಗಿರುವ ಕಾರಣ, ಮುಖ್ಯವಾಗಿ ಉತ್ತರಾಖಂಡದ ಗಡಿ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಲಾಗುವುದು. ಆದರೆ, ಕಾಂಗ್ರೆಸ್‌ ಆಡಳಿತಕ್ಕೆ ಪಲಾಯನ ವಾದವೇ ಅವರ ಮಂತ್ರವಾಗಲಿದೆ’ ಎಂದು ಮೋದಿ ಹೇಳಿದರು.



Read more

[wpas_products keywords=”deal of the day sale today offer all”]