The New Indian Express
ನವದೆಹಲಿ: ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್-19 ನಿಯಮಗಳನ್ನು ಸಡಿಲಗೊಳಿಸಿದೆ.
ಪರಿಷ್ಕೃತ ನಿಯಮಗಳ ಪ್ರಕಾರ ಫೆ.14 ರಿಂದ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ 7 ದಿನಗಳ ಹೋಮ್ ಕ್ವಾರಂಟೈನ್ ಗೆ ಒಳಗಾಗಬೇಕಿಲ್ಲ ಅಥವಾ 8 ನೇ ದಿನದಂದು ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಪಡಬೇಕಿಲ್ಲ. ಎಲ್ಲಾ ದೇಶಗಳಿಂದ ಆಗಮಿಸುವವರ ಪೈಕಿ ಶೇ.2 ರಷ್ಟು ಮಂದಿಗೆ ರಾಂಡಮ್ ಮಾದರಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಮಾದರಿಗಳನ್ನು ನೀಡಿ ವಿಮಾನ ನಿಲ್ದಾಣದಿಂದ ಹೊರಡುವ ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.
ಹೋಮ್ ಕ್ವಾರಂಟೈನ್ ನ ಬದಲಾಗಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ 14 ದಿನಗಳ ಕಾಲ ಸ್ವಯಂ ಆರೋಗ್ಯ ನಿಗಾ ವಹಿಸಿಕೊಳ್ಳುವುದನ್ನು ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಪ್ರಯಾಣಕ್ಕೂ 72 ಗಂಟೆಗಳ ಹಿಂದೆ ಪಡೆದಿದ್ದ ಆರ್ ಟಿ-ಪಿಸಿಆರ್ ವರದಿ ಹಾಗೂ ಲಸಿಕೆ ಪಡೆದಿರುವ ಪ್ರಮಾಣಪತ್ರಗಳನ್ನು ಅಪ್ಲೋಡಿಂಗ್ ನ್ನೂ ಆಯ್ಕೆಯನ್ನಾಗಿ ಮಾರ್ಪಾಡು ಮಾಡಲಾಗಿದೆ. ಇದೇ ವೇಳೆ ದೇಶಗಳನ್ನು ಕೋವಿಡ್ ಗೆ ಸಂಬಂಧಿಸಿದಂತೆ ಅಪಾಯಕಾರಿ ದೇಶಗಳೆಂದು ಗುರುತಿಸುವ ಪದ್ಧತಿಯನ್ನೂ ಕೈಬಿಡಲಾಗಿದೆ.
Read more
[wpas_products keywords=”deal of the day”]