Karnataka news paper

ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ 3 ಓಮಿಕ್ರಾನ್ ಕೇಸು ಪತ್ತೆ, ಒಬ್ಬ ನಾಪತ್ತೆ: ಆರೋಗ್ಯ ಇಲಾಖೆ


Source : The New Indian Express

ಹೈದರಾಬಾದ್: ಹೈದರಾಬಾದ್ ನ ರಾಜೀವ್ ಗಾಂದಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ(RGIA)ದಲ್ಲಿ ಮೂರು ಓಮಿಕ್ರಾನ್(Omicron) ಪ್ರಕರಣಗಳು ಬುಧವಾರ ಪತ್ತೆಯಾಗಿವೆ. ವಿದೇಶಕ್ಕೆ ಹೋಗಿ ಬಂದವರಲ್ಲಿ ಕಂಡುಬಂದಿದ್ದು, ಅವರಲ್ಲಿ ಇಬ್ಬರು ಓಮಿಕ್ರಾನ್ ಸಂಖ್ಯೆ ಹೆಚ್ಚಿರುವ ಅಥವಾ ಅಪಾಯವಿರುವ ದೇಶಗಳಿಂದ ಬಂದವರು ಅಲ್ಲ ಎಂಬುದು ಕಳವಳಪಡುವ ಸಂಗತಿಯಾಗಿದೆ.

ಕೆನ್ಯಾದಿಂದ ಬಂದ 24 ವರ್ಷದ ಯುವತಿಯಲ್ಲಿ ಇಂದು ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಪರೀಕ್ಷೆ ಮಾಡಿಸಿದಾಗ ಓಮಿಕ್ರಾನ್ ಪತ್ತೆಯಾಗಿದೆ. ಅವರನ್ನು ಟಿಮ್ಸ್ ಆಸ್ಪತ್ರೆಗೆ ವರ್ಗಾಯಿಸಲಾಗಿದ್ದು ಅವರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಆಕೆಯ ತಂದೆ ಮತ್ತು ಮಾವನನ್ನು ಟೊಲಿಚೊವ್ಲಿಯಲ್ಲಿ ಪ್ರತ್ಯೇಕವಾಗಿರಿಸಲಾಗಿದೆ.

ಮತ್ತೊಬ್ಬರು 23 ವರ್ಷದ ಸೊಮಾಲಿಯಾ ದೇಶದ ಯುವಕನಾಗಿದ್ದು ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಮಾಡಿದಾಗ ಓಮಿಕ್ರಾನ್ ರೂಪಾಂತರಿ ಪಾಸಿಟಿವ್ ವೈರಸ್ ತಗುಲಿರುವುದು ಪತ್ತೆಯಾಗಿದೆ. ಆದರೆ ಇವರು ತಪ್ಪಿಸಿಕೊಂಡಿದ್ದು ಇನ್ನೂ ಪತ್ತೆಯಾಗಿಲ್ಲ.

ಮೂರನೇ ಪ್ರಕರಣ ಏಳು ವರ್ಷದ ಬಾಲಕನಾಗಿದ್ದು ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದು ಕೋವಿಡ್ ಪರೀಕ್ಷೆಗೆ ಸ್ಯಾಂಪಲ್ ಕೊಟ್ಟು ವಿಮಾನದಲ್ಲಿ ಪಶ್ಚಿಮ ಬಂಗಾಳಕ್ಕೆ ಪೋಷಕರ ಜೊತೆ ಹೋಗಿದ್ದಾನೆ. ಪರೀಕ್ಷೆಯಲ್ಲಿ ಬಾಲಕಲ್ಲಿ ಓಮಿಕ್ರಾನ್ ಕಂಡುಬಂದಿದ್ದು ವರದಿಯನ್ನು ಕೇಂದ್ರ ಸರ್ಕಾರ ಮತ್ತು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ. 

ಓಮಿಕ್ರಾನ್ ರೂಪಾಂತರವು ಎರಡೂವರೆ ದಿನಗಳಲ್ಲಿ ರೂಪಾಂತರಗೊಳ್ಳುವ, ಕೆಲವು ಯುರೋಪಿಯನ್ ದೇಶಗಳಲ್ಲಿ ಒಂದೂವರೆ ದಿನದಲ್ಲಿ ದ್ವಿಗುಣಗೊಳ್ಳುವ ಸಮಯವನ್ನು ಹೊಂದಿದೆ, ಕೋವಿಡ್ ಮಾರ್ಗಸೂಚಿಯನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕು ಎಂದು ಆರೋಗ್ಯ ನಿರ್ದೇಶಕ ಡಾ ಜಿಎಸ್ ರಾವ್ ಹೇಳುತ್ತಾರೆ.

ತೆಲಂಗಾಣದಲ್ಲಿ ಸ್ಥಳೀಯ ಜನರಲ್ಲಿ ಇದುವರೆಗೆ ಓಮಿಕ್ರಾನ್ ಕಂಡುಬಂದಿಲ್ಲ, ತೆಲಂಗಾಣದಲ್ಲಿ ಕಂಡುಬಂದ ಎರಡೂ ಕೇಸುಗಳು ವಿದೇಶಗಳಿಂದ ಬಂದವರಲ್ಲಿ ಗೋಚರಿಸಿದೆ ಎಂದು ಹೇಳಿದ್ದಾರೆ.



Read more