Karnataka news paper

ಶಾಲೆಗಳಲ್ಲಿ ಮೊಟ್ಟೆ ತಿನ್ನಲು ಮಕ್ಕಳ ಮೇಲೆ ಒತ್ತಡ ಹೇರಿಲ್ಲ: ಸಚಿವ ನಾಗೇಶ್‌


ಮಂಡ್ಯ: ‘ಶಾಲೆಗಳಲ್ಲಿ ಮೊಟ್ಟೆ ತಿನ್ನಲು ಮಕ್ಕಳ ಮೇಲೆ ಒತ್ತಡ ಹೇರಿಲ್ಲ, ತಜ್ಞರ ಸಲಹೆ ಮೇರೆಗೆ ಮಕ್ಕಳನ್ನು ಕಾಡುತ್ತಿರುವ ಅಪೌಷ್ಟಿಕತೆ ಹೋಗಲಾಡಿಸಲು ಮೊಟ್ಟೆ ವಿತರಣೆ ಮಾಡಲಾಗುತ್ತಿದೆ’ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಶನಿವಾರ ಇಲ್ಲಿ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಮೊಟ್ಟೆ ಜೊತೆಗೆ ಬಾಳೆಹಣ್ಣು ಕೂಡ ವಿತರಣೆ ಮಾಡಲಾಗುತ್ತಿದೆ, ಯಾವುದೇ ಪದಾರ್ಥ ಸೇವನೆಗೆ ಒತ್ತಡ ಇಲ್ಲ. ರಾಜ್ಯದ ವಿವಿಧೆಡೆ ಮಕ್ಕಳು ಅಪೌಷ್ಟಕತೆಯಿಂದ ಬಳಲುತ್ತಿದ್ದಾರೆ ಎಂಬ ವರದಿ ಕೇಂದ್ರ ಸರ್ಕಾರದಿಂದ ಬಂದಿದೆ. ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಳ ಮಾಡುವ ಅವಶ್ಯಕತೆ ಇದೆ’ ಎಂದರು.

‘ಮೊಟ್ಟೆ, ಬಾಳೆಹಣ್ಣಿನ ಜೊತೆಗೆ ಇತರ ಪೌಷ್ಟಿಕಾಂಶವುಳ್ಳ ಪದಾರ್ಥಗಳನ್ನು ಆಯ್ಕೆ ಮಾಡಲಾಗಿದೆ. ಅವುಗಳಿಗೆ ತಜ್ಞರು ಒಪ್ಪಿಗೆ ನೀಡಿದರೆ ಮುಂದಿನ ದಿನಗಳಲ್ಲಿ ಅದನ್ನೂ ಜಾರಿಗೊಳಿಸಲಾಗುವುದು. ಮಕ್ಕಳ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಮೊಟ್ಟೆ, ಬಾಳೆಹಣ್ಣು ವಿತರಣೆ ಮಾಡಲಾಗುತ್ತಿದೆ’ ಎಂದರು.

‘ಪಂಚಾಯತ್‌ ಪಬ್ಲಿಕ್‌ ಶಾಲೆ ತೆರೆಯಲು ಹಲವು ಗ್ರಾಮ ಪಂಚಾಯಿತಿಗಳು ಮುಂದೆ ಬಂದಿವೆ. ಸ್ಥಳೀಯ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ವಿರೋಧ ಇಲ್ಲದಿದ್ದರೆ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪಂಚಾಯಿತಿ ಮಟ್ಟದಲ್ಲಿ ಶಾಲೆ ಆರಂಭಿಸಲು ಕ್ರಮ ವಹಿಸಲಾಗುವುದು’ ಎಂದರು.



Read more from source

Leave a Reply

Your email address will not be published. Required fields are marked *