Karnataka news paper

ಮಂಡ್ಯ: ಒಂದೇ ಕುಟುಂಬದ ಐವರ ಕೊಲೆ ಪ್ರಕರಣ- ಹಂತಕಿ ಬಂಧನ


Online Desk

ಮಂಡ್ಯ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮಂಡ್ಯ ಜಿಲ್ಲೆಯ ಒಂದೇ ಕುಟುಂಬದ ಐವರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್.ಎಸ್ ಪೊಲೀಸರು ಹಂತಕಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
     
ಲಕ್ಷ್ಮೀ ಬಂಧಿತ ಆರೋಪಿಯಾಗಿದ್ದಾಳೆ. ಬಂಧಿತ ಮಹಿಳೆ ಕೆಆರ್‌ಎಸ್ ಗ್ರಾಮದ ಬಜಾರ್ ಲೈನ್ ನಿವಾಸಿ ಗಂಗರಾಮ್ ಪತ್ನಿ ಲಕ್ಷ್ಮಿ(30), ಮಕ್ಕಳಾದ ರಾಜ್ (12) ಕೋಸಮಲ್ (7), ಕುನಾಲ್(5) ಹಾಗೂ ಅಣ್ಣನ ಮಗ ಗೋವಿಂದ್ (12) ಎಂಬುವರನ್ನು ಕೊಲೆ ಮಾಡಿದ್ದಾಳೆಂದು ಹೇಳಲಾಗುತ್ತಿದೆ. 

ಮುಗ್ಧ ಜೀವಗಳ ಕೊಲೆಗೆ ಗಂಡ ಗಂಗಾರಾಮ್‍ನ ಅಕ್ರಮ ಸಂಬಂಧವೇ ಕಾರಣ ಎಂದು ಇದೀಗ ತಿಳಿದು ಬಂದಿದೆ.

ಇದನ್ನೂ ಓದಿ: ಮಂಡ್ಯ: ನಾಲ್ವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರ ಭೀಕರ ಕೊಲೆ

ಗಂಗಾರಾಮ್ ಅವರಿಗೆ ತಮ್ಮ ಸಂಬಂಧಿ ಲಕ್ಷ್ಮೀ ಎಂಬಾಕೆಯೊಂದಿಗೆ ಸಂಬಂಧವಿದ್ದು, ತನ್ನನ್ನು ಮದುವೆಯಾಗುವಂತೆ ಲಕ್ಷ್ಮೀ ಗಂಗಾರಾಮ್ ಅವರನ್ನು ಪೀಡಿಸುತ್ತಿದ್ದಳು. ಆದರೆ, ಮನೆಯವರ ಒತ್ತಾಯಕ್ಕೆ ಮಣಿದಿದ್ದ ಗಂಗಾರಾಮ್ ಅವರು ಮನೆಯವರು ಇಷ್ಟಪಟ್ಟಿದ್ದ ಹತ್ಯೆಯಾದ ಲಕ್ಷ್ಮೀ ಅವರನ್ನು ಮದುವೆಯಾಗಿದ್ದರು. ಆದರೆ, ಮದುವೆಯಾದ ಬಳಿಕವೂ ಆರೋಪಿ ಲಕ್ಷ್ಮೀಯೊಂದಿಗೆ ಅಕ್ರಮ ಸಂಬಂಧ ಮುಂದುವರೆಸಿದ್ದ. ಈ ನಡುವೆ ಆರೋಪಿ ಲಕ್ಷ್ಮೀ ಮಕ್ಕಳು, ಪತ್ನಿಯನ್ನು ಬಿಟ್ಟು ತನ್ನನ್ನು ವಿವಾಹವಾಗುವಂತೆ ಪೀಡಿಸಿದ್ದಾಳೆ. ಆದರೆ, ಈ ಯತ್ನ ಯಶಸ್ವಿಯಾಗಿಲ್ಲ. 

ಇದರಿಂದ ಬೇಸತ್ತಿದ್ದ ಆರೋಪಿ ಲಕ್ಷ್ಮೀ ಕೊಲೆ ಮಾಡಿದರೆ ಗಂಗಾರಾಮ್ ತನಗೆ ಸಿಗುತ್ತಾನೆಂದು ಫೆಬ್ರವರಿ 5 ರಂದು ಗಂಗಾರಾಮ್ ಅವರ ಮನೆಗೆ ಹೋಗಿ ಎಲ್ಲರ ಜೊತೆಗೆ ಊಟ ಮಾಡಿ, ಕಾಲ ಕಳೆದಿದ್ದಾಳೆ. ನಂತರ ಎಲ್ಲರೂ ನಿದ್ರೆಗೆ ಜಾರಿದ ಬಳಿಕ ಸುತ್ತಿಗೆಯಿಂದ ಲಕ್ಷ್ಮೀಗೆ ಹೊಡೆದು ಹತ್ಯೆ ಮಾಡಿದ್ದಾಳೆ. ನಂತರ ಎಚ್ಚರಗೊಂಡಿದ್ದ ಮಕ್ಕಳನ್ನು ಹತ್ಯೆ ಮಾಡಿದ್ದಾಳೆ. ಘಟನೆ ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾಳೆ. 

ಮರುದಿನ ಏನೂ ಅರಿಯದಂತೆ ಸ್ಥಳಕ್ಕೆ ಬಂದು ಸ್ಥಳೀಯರೊಂದಿಗೆ ಕೂಡಿ ತಾನೂ ಕಣ್ಣೀರು ಹಾಕಿದ್ದಾಳೆ. ಕಣ್ಣೀರಿಡುತ್ತಿದ್ದ ಈಕೆಯ ಮೇಲೆ ಅನುಮಾನಗೊಂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ಸತ್ಯ ಬಾಯ್ಬಿಟ್ಟಿದ್ದಾಳೆ.



Read more

[wpas_products keywords=”deal of the day”]