ANI
ನವದೆಹಲಿ: ಕೇಂದ್ರ ಬಜೆಟ್ ಅಧಿವೇಶನದ ಎರಡನೇ ಭಾಗ ಮಾರ್ಚ್ 14ರಂದು ಆರಂಭವಾಗಲಿದ್ದು ಅಲ್ಲಿಯವರೆಗೆ ರಾಜ್ಯಸಭೆ ಕಲಾಪ ಮುಂದೂಡಿಕೆಯಾಗಿದೆ.
ಕೇಂದ್ರ ಬಜೆಟ್-2022-23ಕ್ಕೆ ಸಂಬಂಧಪಟ್ಟಂತೆ ಇಂದು ರಾಜ್ಯಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿದ ಬಳಿಕ ಉಪ ಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಸದನದ ಕಲಾಪವನ್ನು ಮುಂದೂಡಿದರು.
ಮೀನುಗಾರಿಕೆ ಸಚಿವಾಲಯ, ಪಶು ಸಂಗೋಪನೆ ಮತ್ತು ಡೈರಿ ಇಲಾಖೆಗೆ ಸಂಬಂಧಪಟ್ಟ ಕೃಷಿ ಬೇಡಿಕೆಗಳ ಸಂಸದೀಯ ಸ್ಥಾಯಿ ಸಮಿತಿ ಇಲಾಖೆಗೆ ಸಂಬಂಧಿಸಿದ 27ನೇ ವರದಿಯ ಶಿಫಾರಸುಗಳನ್ನು ಜಾರಿಗೆ ತರುವ ಸ್ಥಿತಿಗತಿ ಕುರಿತು ಬಿಜೆಪಿ ಸಂಸದ ಎಲ್ ಮುರುಗನ್ ಸದನಕ್ಕೆ ಹೇಳಿಕೆ ನೀಡಿದರು.
ಇದನ್ನೂ ಓದಿ: ಕೋವಿಡ್-19ನಿಂದ ತೀವ್ರ ಆರ್ಥಿಕ ಕುಸಿತ ಉಂಟಾದರೂ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇ. 6.2ರಷ್ಟಿದೆ: ನಿರ್ಮಲಾ ಸೀತಾರಾಮನ್
17ನೇ ಲೋಕಸಭೆಯ 8ನೇ ಅಧಿವೇಶನ ಜನವರಿ 31ರಂದು ಆರಂಭವಾಗಿದ್ದು ಫೆಬ್ರವರಿ 1ರಂದು ಕೇಂದ್ರ ಬಜೆಟ್-2022ನ್ನು ಮಂಡಿಸಿದ್ದರು. ಬಜೆಟ್ ಅಧಿವೇಶನದ ಎರಡನೇ ಭಾಗ ಮಾರ್ಚ್ 14ರಂದು ಆರಂಭವಾಗಿ ಏಪ್ರಿಲ್ 8ರಂದು ಮುಕ್ತಾಯಗೊಳ್ಳಲಿದೆ.
ಮಾರ್ಚ್ 3ಕ್ಕೆ ಭಾದ್ಯತಾ ಸಮಿತಿ ಸಭೆ: ರಾಜ್ಯ ಸಭೆಯ ಹಕ್ಕು ಭಾದ್ಯತಾ ಸಮಿತಿ ಸಭೆ ಮಾರ್ಚ್ 3ರಂದು ನಡೆಯಲಿದೆ.
Read more
[wpas_products keywords=”deal of the day”]