Karnataka news paper

ಬೆಂಗಳೂರು: ಸ್ನೇಹಿತನ ಹತ್ಯೆ ಮಾಡಿದ್ದ ಆಟೋ ಚಾಲಕನ ಬಂಧನ


The New Indian Express

ಬೆಂಗಳೂರು: ವೈಯಕ್ತಿಕ ವಿಚಾರವಾಗಿ ಮನಸ್ತಾಪ ಹಿನ್ನೆಲೆಯಲ್ಲಿ ಸ್ನೇಹಿತನನ್ನು ತನ್ನ ಮನೆಗೆ ಕರೆಸಿಕೊಂಡು ಹತ್ಯೆಗೈದು ಪರಾರಿಯಾಗಿದ್ದ ಆಟೋ ಚಾಲಕನನ್ನು ನಂದಿನಿ ಲೇಔಟ್‌ ಠಾಣೆ ಪೊಲೀಸರು  ಬಂಧಿಸಿದ್ದಾರೆ.

ನರಸಿಂಹಸ್ವಾಮಿ ಬಡಾವಣೆ ನಿವಾಸಿ ಆಟೋ ಚಾಲಕ ರವಿಕುಮಾರ್‌ (42) ಬಂಧಿತ ಆರೋಪಿ. ತನ್ನ ಮನೆಗೆ ಬುಧವಾರ ಕರೆಸಿಕೊಂಡು ತನ್ನ ಗೆಳೆಯ ವಿದ್ಯಾರಣ್ಯಪುರದ ವಿಶ್ವನಾಥ್‌ನನ್ನು ಆರೋಪಿ ಕೊಂದಿದ್ದ. ಈ ಘಟನೆ ಬಳಿಕ ತುಮಕೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ತಾಂತ್ರಿಕ ಮಾಹಿತಿ ಆಧರಿಸಿ ಪತ್ತೆ ಹಚ್ಚಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ರವಿ ಹಾಗೂ ವಿಶ್ವನಾಥ್‌ ಬಹಳ ವರ್ಷಗಳಿಂದ ಸ್ನೇಹಿತರಾಗಿದ್ದರು. ಇದೇ ಗೆಳೆತನದಲ್ಲೇ ವಿಶ್ವನಾಥ್‌ಗೆ ರವಿ ಆಟೋ ಬಾಡಿಗೆಗೆ ಕೊಡಿಸಿದ್ದ. ಆದರೆ ಇತ್ತೀಚಿಗೆ ವಿಶ್ವನಾಥ್ ರವಿಕುಮಾರ್ ಪತ್ನಿ ಜೊತೆ ಚಾಟ್ ಮಾಡಲು ಆರಂಭಿಸಿದ್ದ. ಇದರಿಂದ, ಸ್ನೇಹಿತನ ಹತ್ಯೆಗೆ ನಿರ್ಧರಿಸಿದ್ದ.

ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಅತ್ಯಾಚಾರ, ಮಾನವ ಕಳ್ಳಸಾಗಣೆಗೆ ಯತ್ನ: ಸಿಐಎಸ್ಎಫ್’ನಿಂದ ಬಾಲಕಿಯ ರಕ್ಷಣೆ!

ಅಂತೆಯೇ ಬುಧವಾರ ಮಾತುಕತೆ ನೆಪದಲ್ಲಿ ಮನೆಗೆ ಕರೆಸಿಕೊಂಡು ಆರೋಪಿ ಈ ಸ್ನೇಹಿತನ ಹತ್ಯೆ ಎಸಗಿದ್ದ, ನಂತರ ಆಟೋ ತೆಗೆದುಕೊಂಡು ಓಡಿಹೋಗಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.



Read more

[wpas_products keywords=”deal of the day”]