Source : Online Desk
ಮುಂಬೈ: ಬಾಲಿವುಡ್ ತಾರೆಯರಾದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆಯ ಬಳಿಕ ಮೊದಲ ಬಾರಿಗೆ ಮುಂಬೈಗೆ ಬಂದಿಳಿದಿದ್ದು, ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ನೋಡಿ: ಬಾಲಿವುಡ್ ತಾರಾ ಜೋಡಿ ಕತ್ರಿನಾ- ವಿಕ್ಕಿ ಕೌಶಲ್ ಹರಿಶಿಣ ಶಾಸ್ತ್ರದ ಫೋಟೋಗಳು
ವಿಕ್ಕಿ ಕೌಶಲ್ ಮನೆಗೆ ತೆರಳುವ ಸಂದರ್ಭದಲ್ಲಿ ವಿಕ್ಕಿ ಕೌಶಲ್ ಕೈ ಹಿಡಿದಿರುವ ಕತ್ರಿನಾ ಕೈಫ್ ಅಭಿಮಾನಿಗಳ ಕಡೆಗೆ ನಗುಮೊಗದಿಂದ ಕೈ ಬೀಸಿದ್ದು, ನವದಂಪತಿ ಶುಭಾಶಯ ಕೋರಿದ ಪ್ರತೊಯೊಬ್ಬರಿಗೂ ಧನ್ಯವಾದ ಸಲ್ಲಿಸಿದ್ದಾರೆ. ಈ ಸಂಬಂಧದ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣಗಳು ವೈರಲ್ ಆಗಿದೆ.
ಡಿಸೆಂಬರ್ 9 ರಂದು ಇವರಿಬ್ಬರು ಕುಟುಂಬಸ್ಥರು, ಆತ್ಮೀಯ ಸ್ನೇಹಿತರ ನಡುವೆ ಖಾಸಗಿಯಾಗಿ ರಾಜಸ್ಥಾನದ ಬರ್ವಾರ ಸಿಕ್ಸ್ ಸೆನ್ಸಸ್ ರೆಸಾರ್ಟ್‍ನಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅಂದಿನಿಂದ ಇಂದಿನವರೆಗೂ ಕತ್ರಿನಾ ಕೈಫ್ ಮೆಹಂದಿ, ಅರಿಶಿಣ ಫೋಟೋಗಳ ಜೊತೆಗೆ ವಿಕ್ಕಿ ಕೌಶಲ್ ಜೊತೆಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೋಡ್ ಮಾಡುತ್ತಿದ್ದಾರೆ.