Karnataka news paper

ದೇವನಹಳ್ಳಿ ಬಳಿ 300 ನಿವೇಶನ ಮಾಲೀಕರಿಗೆ ವಂಚನೆ


The New Indian Express

ಬೆಂಗಳೂರು: ಬ್ಯಾಂಕ್ ನ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಡೆವಲಪರ್ ರೊಬ್ಬರ ಜೊತೆಗೆ ಶಾಮೀಲಾಗಿ ದೇವನಹಳ್ಳಿ ಬಳಿ ನಿವೇಶನ ಮಾರಾಟ ಮಾಡಿ 320 ಮಂದಿಗೆ ವಂಚಿಸಿದ್ದಾರೆ ಎಂದು ಬ್ಯಾಂಕಿನ ಮಾಜಿ ಮ್ಯಾನೇಜರ್ ಒಬ್ಬರು ಜೆ.ಪಿ.ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಹಿಂದೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ವ್ಯವಸ್ಥಾಪಕರಾಗಿ ನಿವೃತ್ತರಾಗಿರುವ ಎ.ವಿ.ಸತ್ಯನಾರಾಯಣ ಅವರು, ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಕೆಲವರು 2006 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಆಫೀಸರ್ಸ್ ಹೌಸಿಂಗ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್‌ನ ಪದಾಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದರೆಂದು ಆರೋಪಿಸಿದ್ದಾರೆ. 

ಜೆಪಿ ಗೋಲ್ಡನ್ ಹೋಮ್ಸ್ ಪ್ರಾಪರ್ಟಿ ಪ್ರೈವೇಟ್ ಲಿಮಿಟೆಡ್‌ನ ಕಿಶೋರ್ ಮತ್ತಿತರರು ದೇವನಹಳ್ಳಿ ತಾಲೂಕಿನ ಸಿಂಗರಹಳ್ಳಿ ಗ್ರಾಮದಲ್ಲಿ ವಸತಿ ಬಡಾವಣೆಯನ್ನು ಅಭಿವೃದ್ಧಿಪಡಿಸುತ್ತಿದ್ದು,  ತಾವು ಬ್ಯಾಂಕಿನ ಕಾನೂನು ಸಲಹೆಗಾರರಿಂದ ಕಾನೂನು ಅಭಿಪ್ರಾಯ ತೆಗೆದುಕೊಂಡಿದ್ದು, ತದನಂತರ ಅನುಮೋದನೆಯಾಗಿರುವುದಾಗಿ ಆರೋಪಿಗಳು ಹೇಳಿದ್ದರು. 

 ಉದ್ದೇಶಿತ ಬಡಾವಣೆಯಲ್ಲಿರುವ ನಿವೇಶನಗಳಿಗೆ ಪ್ರತಿ ಚದರ ಅಡಿಗೆ 550 ರೂ ಎಂದು ಹೇಳುವ ಸುತ್ತೊಲೆಯೊಂದನ್ನು ಸಹ ಸಂಘ ಹೊರಡಿಸಿತ್ತು. ಅವರ ಮಾತುಗಳನ್ನು ನಂಬಿ, ನನ್ನ ಸಹೋದ್ಯೋಗಿಗಳು, ಸ್ನೇಹಿತರು ಮತ್ತು ನಾನು ಅಲ್ಲಿ ಸೈಟ್‌ಗಳನ್ನು ಖರೀದಿಸಿದೆವು ಮತ್ತು ಅದನ್ನು ಜೆಪಿ ಗೋಲ್ಡನ್ ಹೋಮ್ಸ್ ಪ್ರಾಪರ್ಟಿ ಪ್ರೈವೇಟ್ ಲಿಮಿಟೆಡ್ ಮೂಲಕ ನೋಂದಾಯಿಸಲಾಗಿದೆ. ಆದರೆ ಡೆವಲಪರ್ ಹಲವಾರು ವರ್ಷಗಳು ಕಳೆದರೂ ಲೇಔಟ್ ಅನ್ನು ಅಭಿವೃದ್ಧಿಪಡಿಸಲಿಲ್ಲ.

ಇದನ್ನೂ ಓದಿ: ಬಿಡಿಎ ಕಾರ್ನರ್ ಸೈಟ್ ಹರಾಜು ಹಗರಣ ಬೆಳಕಿಗೆ; ಕೋಟ್ಯಾಂತರ ರೂಪಾಯಿ ನಷ್ಟವಾಗಿರುವ ಸಾಧ್ಯತೆ!

ಲೇಔಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿ ಇರುವುದರಿಂದ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ಅನುಮೋದನೆ ಅಗತ್ಯವಿದೆ. ಪ್ರಾಧಿಕಾರ 2006ರಲ್ಲಿ ಡೆವಲಪರ್‌ಗಳ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರೂ ಖರೀದಿದಾರರಿಗೆ ಬಹಿರಂಗಪಡಿಸದೆ ಜಮೀನನ್ನು ಕೃಷಿಯಿಂದ ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಿ ನಿವೇಶನಗಳನ್ನು ಮಾರಾಟ ಮಾಡಲಾಗಿದೆ ಎಂದು ಸತ್ಯನಾರಾಯಣ ದೂರಿನಲ್ಲಿ ತಿಳಿಸಿದ್ದಾರೆ.

ಖರೀದಿದಾರರಿಗೆ ಆಘಾತ ನೀಡುವಂತೆ, ಕಳೆದ ವರ್ಷ ನವೆಂಬರ್‌ನಲ್ಲಿ ಬೆಂಗಳೂರು ಗ್ರಾಮಾಂತರ  ಜಿಲ್ಲಾಧಿಕಾರಿ  ಲೇಔಟ್ ಅಕ್ರಮ ಎಂದು ಉಲ್ಲೇಖಿಸಿ ಜಮೀನು ಪರಿವರ್ತನೆಯನ್ನು ಅಸಿಂಧು ಎಂದು ಪರಿಗಣಿಸಿದ್ದರು. “ಇದು ಸುಮಾರು 320 ಹಿರಿಯ ನಾಗರಿಕರನ್ನು ಬಿಟ್ಟಿದೆ, ಅವರಲ್ಲಿ ಹೆಚ್ಚಿನವರು ಬ್ಯಾಂಕ್‌ನ ನಿವೃತ್ತ ಉದ್ಯೋಗಿಗಳು ಎಂದು ಸತ್ಯನಾರಾಯಣ ಹೇಳಿದ್ದಾರೆ. 

ಸತ್ಯನಾರಾಯಣ ಅವರ ದೂರಿನ ಆಧಾರದ ಮೇಲೆ, ಜೆಪಿ ನಗರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ಡೆವಲಪರ್, ಗೃಹ ನಿರ್ಮಾಣ ಸಹಕಾರ ಸಂಘದ ನಾಲ್ವರು ಪದಾಧಿಕಾರಿಗಳು ಮತ್ತು ಇತರರ ವಿರುದ್ಧ ಕ್ರಿಮಿನಲ್ ನಂಬಿಕೆ ಉಲ್ಲಂಘನೆ, ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.



Read more

[wpas_products keywords=”deal of the day”]