Online Desk
ನವದೆಹಲಿ: ಎನ್. ಚಂದ್ರಶೇಖರನ್ ಅವರು ಐದು ವರ್ಷಗಳ ಎರಡನೇ ಅವಧಿಗೆ ಟಾಟಾ ಸನ್ಸ್ ಕಾರ್ಯಕಾರಿ ಅಧ್ಯಕ್ಷರಾಗಿ ಶುಕ್ರವಾರ ಮರು ನೇಮಕಗೊಂಡಿದ್ದಾರೆ.
ಇಂದು ನಡೆದ ಮಂಡಳಿಯ ಸಭೆಯಲ್ಲಿ ಕಾರ್ಯಕಾರಿ ಅಧ್ಯಕ್ಷರ ಕಾರ್ಯವೈಖರಿಯನ್ನು ಸದಸ್ಯರು ಶ್ಲಾಘಿಸಿದರು ಮತ್ತು ಮುಂದಿನ ಐದು ವರ್ಷಗಳ ಕಾಲ ಚಂದ್ರಶೇಖರನ್ ಅವರನ್ನು ಮರುನೇಮಕ ಮಾಡಲು ಸರ್ವಾನುಮತದಿಂದ ಅನುಮೋದಿಸಿದರು ಎಂದು ಟಾಟಾ ಸನ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನು ಓದಿ: ಅಧಿಕೃತವಾಗಿ ಟಾಟಾ ಸಮೂಹಕ್ಕೆ ಏರ್ ಇಂಡಿಯಾ ಹಸ್ತಾಂತರ
ಸಭೆಗೆ ವಿಶೇಷ ಆಹ್ವಾನಿತರಾಗಿದ್ದ ರತನ್ ಟಾಟಾ, ಚಂದ್ರಶೇಖರನ್ ಅವರ ನೇತೃತ್ವದಲ್ಲಿ ಟಾಟಾ ಗ್ರೂಪ್‌ನ ಪ್ರಗತಿ ಮತ್ತು ಕಾರ್ಯಕ್ಷಮತೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಅವರ ಅವಧಿಯನ್ನು ಇನ್ನೂ ಐದು ವರ್ಷಗಳ ಅವಧಿಗೆ ನವೀಕರಿಸಲು ಅವರು ಶಿಫಾರಸು ಮಾಡಿದರು ಎಂದು ಹೇಳಲಾಗಿದೆ.
ಕಳೆದ ಐದು ವರ್ಷಗಳಿಂದ ಟಾಟಾ ಗ್ರೂಪ್ ಅನ್ನು ಮುನ್ನಡೆಸುವುದು ಒಂದು ಸುಯೋಗ ಮತ್ತು ಟಾಟಾ ಗ್ರೂಪ್ ಅನ್ನು ಇನ್ನೂ ಐದು ವರ್ಷಗಳ ಕಾಲ ಮುನ್ನಡೆಸುವ ಅವಕಾಶಕ್ಕಾಗಿ ನಾನು ಸಂತೋಷಪಡುತ್ತೇನೆ ಎಂದು ಚಂದ್ರಶೇಖರನ್ ಹೇಳಿದ್ದಾರೆ.
ಚಂದ್ರಶೇಖರನ್ ಅವರು ಅಕ್ಟೋಬರ್ 2016ರಲ್ಲಿ ಟಾಟಾ ಸನ್ಸ್ ಮಂಡಳಿಗೆ ಸೇರಿದರು ಮತ್ತು ಜನವರಿ 2017 ರಲ್ಲಿ ಅಧ್ಯಕ್ಷರಾಗಿ ನೇಮಕಗೊಂಡರು. ಟಾಟಾ ಸಮೂಹವು ಮಾರ್ಚ್ 31, 2021ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಸುಮಾರು $103 ಬಿಲಿಯನ್ (ರೂ. 7.7 ಲಕ್ಷ ಕೋಟಿ) ಆದಾಯವನ್ನು ಹೊಂದಿದೆ.
Read more…
[wpas_products keywords=”deal of the day”]