Karnataka news paper

ದಕ್ಷಿಣ ಆಫ್ರಿಕಾ ಏಕದಿನ ಸರಣಿ ಆಡಲು ಸಿದ್ಧ, ನನ್ನ ಮತ್ತು ರೋಹಿತ್ ಶರ್ಮ ನಡುವೆ ಭಿನ್ನಾಭಿಪ್ರಾಯವಿಲ್ಲ: ವಿರಾಟ್ ಕೊಹ್ಲಿ


Source : ANI

ನವದೆಹಲಿ: ನನ್ನ ಮತ್ತು ರೋಹಿತ್ ಶರ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.

ಡಿಸೆಂಬರ್ 26 ರಿಂದ ಪ್ರಾರಂಭವಾಗಲಿರುವ ಟೀಮ್ ಇಂಡಿಯಾದ ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದ ಮೊದಲು ಭಾರತೀಯ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಹಲವು ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಮೂರು ಪಂದ್ಯಗಳ ಏಕದಿನ ಸರಣಿಗೆ ತಾನು ಲಭ್ಯವಿರುತ್ತೇನೆ ಎಂದು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ. ಏಕದಿನ ಸರಣಿ ಆಡಲು ತಾನು ಸಿದ್ಧನಿದ್ದೇನೆ, ನಾನು ಬಿಸಿಸಿಐನಿಂದ ವಿಶ್ರಾಂತಿ ನೀಡಲು ಮನವಿ ಮಾಡಿಲ್ಲ. ನನಗೆ ಯಾವುದೇ ವಿಶ್ರಾಂತಿಯ ಅಗತ್ಯವಿಲ್ಲ ಎಂದು ಹೇಳಿದರು.

ಏಕದಿನ ಸರಣಿಗೆ ಹೊಸ ನಾಯಕನನ್ನು ಘೋಷಿಸುವ ಮುನ್ನ ಮುಖ್ಯ ಆಯ್ಕೆಗಾರರು ನನಗೆ ಮಾಹಿತಿ ನೀಡಿದ್ದರು. ಏಕದಿನ ತಂಡದ ನಾಯಕ ಸ್ಥಾನ ನೀಡುತ್ತಿಲ್ಲ ಎಂದಿದ್ದರು. ನಾನು ಏಕದಿನ ಸರಣಿ ಆಯ್ಕೆಗೆ ಲಭ್ಯವಿದ್ದೇನೆ. ನಾನು ಯಾವಾಗಲೂ ಆಡಲು ಉತ್ಸುಕನಾಗಿದ್ದೆ ಎಂದು ಸ್ಪಷ್ಪಪಡಿಸಿದರು.



Read more…