ತಾಲೂಕಿನ ಹೊಳಲು ಗ್ರಾಮದಲ್ಲಿ ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಶಾಸಕ ಎಚ್. ಡಿ. ಚೌಡಯ್ಯ ಅವರನ್ನು ಶುಕ್ರವಾರ ಭೇಟಿಯಾಗಿ ಕುಶಲೋಪರಿ ನಡೆಸಿದ ಬಳಿಕ ಸಿ. ಎಂ. ಇಬ್ರಾಹಿಂ ಸುದ್ದಿಗಾರರೊಂದಿಗೆ ಮಾತನಾಡಿದರು. ‘ನನಗೆ ವ್ಯಕ್ತಿಗತ ಬೇಡಿಕೆಗಿಂತ ರಾಜ್ಯದ ಹಿತದೃಷ್ಟಿ ಮುಖ್ಯ. ಅಂದು ದೇವೇಗೌಡರ ಮಾರ್ಗದರ್ಶನ ಪಡೆದಿದ್ದೆ. ಇಂದು ಕೂಡ ಅವರ ಮಾರ್ಗದರ್ಶನ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ಎಚ್. ಡಿ. ಚೌಡಯ್ಯ ಅವರು ನಮ್ಮ ತಂದೆ ಸಮಾನರು. ಚೌಡಯ್ಯ, ಕೆ. ವಿ. ಶಂಕರ ಗೌಡ, ಜಿ. ಮಾದೇ ಗೌಡ ಕರ್ನಾಟಕಕ್ಕೆ ಮಾದರಿಯಾಗಿದ್ದರು. ಎಚ್. ಡಿ. ದೇವೇಗೌಡರಿಗೆ ಇವರು ಶಕ್ತಿ ತುಂಬಿದವರು. ಸಹಕಾರಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದವರು. ಚೌಡಯ್ಯರ ಗೌರವಾರ್ಥ ಮಂಡ್ಯದಲ್ಲಿ ಶಾಶ್ವತ ಸ್ಮಾರಕವಾಗಬೇಕು. ಇದಕ್ಕಾಗಿ ನಾನು ಮಂಡ್ಯದಲ್ಲಿ ಮತ್ತೆ ಬಂದು ಸಭೆ ಮಾಡುತ್ತೇನೆ’ ಎಂದರು.
‘ಕಾಂಗ್ರೆಸ್‌ನವರು ನನ್ನಲ್ಲಿ ನಾಯಕತ್ವದ ಗುಣವಿಲ್ಲವೆಂದು ಕಡೆಗಣಿಸಿದರು. ಈಗ ಎಲ್ಲರೂ ಪಕ್ಷ ಬಿಟ್ಟು ಹೋಗಬೇಡಿ ಎನ್ನುತ್ತಿದ್ದಾರೆ. ಕೇವಲ ಮಾತಾಡಿ ಪ್ರಯೋಜನ ಏನು..? ಏನಾದ್ರೂ ಕಾರ‍್ಯಗತವಾಗುವ ಕೆಲಸ ಮಾಡಬೇಕು ಅಲ್ವಾ..? ದಿಲ್ಲಿಯಿಂದ ಮಾತನಾಡಲು ಆಹ್ವಾನ ಬಂದಿದೆ. ಯಾರು ಕರೆದಿದ್ದಾರೆ..? ಯಾರನ್ನ ಭೇಟಿಯಾಗಬೇಕು ಅನ್ನೋದನ್ನು ಈಗ ಹೇಳಲ್ಲ. ದಿಲ್ಲಿಗೆ ಹೋಗುವ ಬಗ್ಗೆ ಒಂದೆರಡು ದಿನದಲ್ಲಿ ಹೇಳುತ್ತೇವೆ ಎಂದಿದ್ದಾರೆ. ಹೋಗ್ಬೇಕಾ..? ಬೇಡವಾ..? ಎಂಬುದನ್ನು ಜನರ ಜತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ’ ಎಂದು ಇಬ್ರಾಹಿಂ ಪ್ರತಿಕ್ರಿಯಿಸಿದರು.
ಸಿದ್ದರಾಮಯ್ಯ ಇಬ್ರಾಹಿಂ ಮನೆಗೆ ಊಟಕ್ಕೆ ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆಯೂ ಪ್ರತಿಕ್ರಿಯೆ ನೀಡಿದ ಸಿ. ಎಂ. ಇಬ್ರಾಹಿಂ, ‘ನಮ್ಮದು ಸದಾ ತೆರೆದಿರುವ ದಾಸೋಹ ಭವನ. ಅವರು ಬರಲಿ, ಅವರಿಗೂ ನನ್ನ ಅಭಿಪ್ರಾಯ ಹೇಳುತ್ತೇನೆ. ಈ ಬಗ್ಗೆ ಕೆಲವರು ನನ್ನ ಬಳಿ ಬಂದು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ’ ಎಂದು ಉತ್ತರಿಸಿದರು.
ಅನುದಾನಕ್ಕೆ ಅಂಗಲಾಚುವ ಪರಿಸ್ಥಿತಿ: ‘ನಾವು ಮೋದಿ ಬಳಿ ಅನುದಾನಕ್ಕಾಗಿ ಅಂಗಲಾಚುವ ಪರಿಸ್ಥಿತಿಗೆ ಬಂದಿದ್ದೇವೆ. ಎಚ್. ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಈ ಪರಿಸ್ಥಿತಿ ಇರಲಿಲ್ಲ. ಅಂದು ದೇವೇಗೌಡರ ನಿವಾಸ 6.50 ಕೋಟಿ ಕನ್ನಡಿಗರಿಗೆ ಬಾಗಿಲು ತೆರೆದಿತ್ತು. ಡಾ. ರಾಜ್‌ಕುಮಾರ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಕೊಟ್ಟ ಕಾಲ ಅದು. ಸಾಕಷ್ಟು ನೀರಾವರಿ ಯೋಜನೆ, ರಾಜ್ಯಕ್ಕೆ ಹಣ ಹರಿದು ಬರುತ್ತಿತ್ತು. ಈಗ ನಾವು ದಿಲ್ಲಿಯಲ್ಲಿ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಸಿ. ಎಂ. ಇಬ್ರಾಹಿಂ ಬೇಸರ ವ್ಯಕ್ತಪಡಿಸಿದರು.
Read more
[wpas_products keywords=”deal of the day sale today offer all”]