ವಂಶಿಕಾ ಅಂಜನಿ ಕಶ್ಯಪ ‘ನನ್ನಮ್ಮ ಸೂಪರ್ ಸ್ಟಾರ್‘ ಶೋ ಮೂಲಕ ಫೇಮಸ್ ಆಗಿರೋದು ಎಲ್ಲರಿಗೂ ಗೊತ್ತಾಗಿದೆ. ನಟನೆ, ಡ್ಯಾನ್ಸ್, ಡೈಲಾಗ್ ಮೂಲಕ ಎಲ್ಲರ ಮನಸ್ಸು ಕದ್ದಿರುವ ವಂಶಿಕಾ ಬಹಳ ಕಡಿಮೆ ಸಮಯದಲ್ಲಿ ಎಲ್ಲರ ಫೇವರಿಟ್ ಆಗಿದ್ದಾಳೆ. ಈ ಜನಪ್ರಿಯತೆ ಖುಷಿಯ ಜೊತೆಗೆ ಮಾಸ್ಟರ್ ಆನಂದ್‌ಗೆ ಭಯ ಹುಟ್ಟಿಸಿದ್ದು ಯಾಕೆ?
ಮಗಳ ಸಲುವಾಗಿ ರಿಯಾಲಿಟಿ ಶೋ ಸೆಟ್‌ಗೆ ಬಂದಿದ್ದೀರಿ.
ಹೆಂಡ್ತಿ, ಮಕ್ಕಳು ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ಭಾಗವಹಿಸುತ್ತಿದ್ದು, ನನಗೂ ಕೂಡ ಈ ಸೆಟ್‌ಗೆ ಬರಲು ಕಾಯುತ್ತಿದ್ದೆ. ನಿಜಕ್ಕೂ ಈ ದಿನ ಎಂಜಾಯ್ ಮಾಡುತ್ತಿದ್ದೇನೆ. ಸಮಯ ಕಳೆಯುತ್ತಿರುವುದು ಗೊತ್ತಾಗುತ್ತಿಲ್ಲ.
ಕಲಾವಿದರಾಗಿ ನಿಮ್ಮನ್ನು ನೀವು ತೆರೆ ಮೇಲೆ ನೋಡಿ
ನನ್ನಮ್ಮ ಸೂಪರ್ ಸ್ಟಾರ್ ಅಂದ್ರೆ ಏನು ನೆನಪಾಗತ್ತೆ ಅಂತ ಒಬ್ಬರು ಕೇಳಿದ್ರು. ಕನ್ನಡಿ ನಮ್ಮ ಪ್ರತಿ ಬಿಂಬ ತೋರಿಸತ್ತೆ. ಆದರೆ ಯಾವ ಕನ್ನಡಿಯೂ ನಮ್ಮ ಬಾಲ್ಯ ತೋರಿಸಲ್ಲ. ನನ್ನಮ್ಮ ಸೂಪರ್ ಸ್ಟಾರ್ ಶೋ ನೋಡಿದ್ರೆ ನನಗೆ ನನ್ನ ಬಾಲ್ಯ ಕಾಣಿಸಿತು. ಆ ಬಾಲ್ಯ ಯಾರು ಅಂತ ಅಂದ್ರೆ ನನ್ನ ಮಗಳು ವಂಶಿಕಾ ಅಂಜನಿ ಕಶ್ಯಪ. ನನ್ನಮ್ಮ ಸೂಪರ್ ಸ್ಟಾರ್ ಶೋ ತಂಡ ನನ್ನ ಮಗಳ ಪ್ರತಿಭೆಯನ್ನು ಚೆನ್ನಾಗಿ ಬಳಸಿಕೊಂಡಿದೆ.
ಪ್ರೇಕ್ಷಕರಿಂದ ‘ಬಿಜಲಿ ಪಟಾಕಿ’ ಅಂತ ಕರೆಸಿಕೊಂಡ ನಟ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಅಂಜನಿ ಕಶ್ಯಪ
ಸೋಶಿಯಲ್ ಮೀಡಿಯಾ ಇಂದು ತುಂಬ ಪ್ರಭಾವಿಯಿಂದ ಕೂಡಿದೆ. ನಿಮ್ಮ ಬಾಲ್ಯದಲ್ಲಿ ಸೋಶಿಯಲ್ ಮೀಡಿಯಾ ಇರಲಿಲ್ಲ, ಆದರೆ ನಿಮ್ಮ ಮಗಳಿಗೆ ಇಂದು ಈ ಅವಕಾಶ ಸಿಕ್ಕಿದೆ.
ಈ ಹಿಂದೆ ಪ್ರಿಂಟ್ ಮೀಡಿಯಾ ತುಂಬ ಪ್ರಭಾವಶಾಲಿಯಾಗಿತ್ತು. ನಾವು ಇಂದು ಎಷ್ಟೋ ಹಿರಿಯ ಪತ್ರಕರ್ತರನ್ನು ಕಳೆದುಕೊಂಡಿದ್ದೇವೆ. ಈ ಹಿಂದೆ ನನ್ನ ಬಗ್ಗೆ ಪತ್ರಕರ್ತರು ಬರೆದಿದ್ದರು. ಪತ್ರಕರ್ತರ ಬರವಣಿಗೆ ಮೇಲೆ ಸ್ಟಾರ್ ನಟರ ಸಿನಿಮಾ ಕೂಡ ನಿಲ್ಲುತ್ತಿತ್ತು. ನನ್ನ ಜರ್ನಿ ಕೂಡ ಸುಲಭವಾಗಿರಲಿಲ್ಲ, ಅಂದು ಫೋಟೋ ತೆಗೆಸಿ ಕಳಿಸುವುದು ಕೂಡ ಕಷ್ಟ ಆಗುತ್ತಿತ್ತು. ಸಚಿನ್ ತೆಂಡೂಲ್ಕರ್ ಒಮ್ಮೆ ಸೆಂಚುರಿ ಬಾರಿಸಿ ಆಮೇಲೆ ಒಂದು ರನ್ ಕಮ್ಮಿ ಆದ್ರೆ ಜನರು ಒಪ್ಪಲ್ಲ. ನಾಳೆ ನನ್ನ ಮಗಳಿಗೆ ಭರತನಾಟ್ಯ, ಚಿತ್ರಕಲೆ, ಸಂಗೀತದ ಮೇಲೆ ಆಸಕ್ತಿ ಮೂಡಿ ನಾಳೆ ಚಿತ್ರರಂಗ ಬಿಡಬಹುದು. ಆದರೆ ಜನರು ಅವಕಾಶ ಕಮ್ಮಿ ಇದೆ, ಮನೆಯಲ್ಲಿ ಒಪ್ಪಲಿಲ್ಲ ಅಂತ ಚಿತ್ರರಂಗದಿಂದ ಬಿಡಿಸಿದರು ಅಂತ ಜನರು ಹೇಳ್ತಾರೆ. ಬೇಕಿದ್ದರೆ ಈ ಮಾತನ್ನು ಬರೆದಿಟ್ಟುಕೊಳ್ಳಿ. ನಾನು ಇಂದಿನ ಕ್ಷಣವನ್ನು ಎಂಜಾಯ್ ಮಾಡುತ್ತಿದ್ದೇನೆ, ನಾಳೆಯ ಅನಿಶ್ಚಿತತೆಯ ಬಗ್ಗೆ ನನಗೆ ಅರಿವೂ ಇದೆ, ಭಯವೂ ಇದೆ.
ನನ್ನ ಮಾಸ್ಟರ್ ಆನಂದ್ ಮಗಳು ಅಂತ ಕರೆಯುತ್ತಾರೆ, ಇನ್ಮೇಲೆ ನನ್ನ ಹೆಸರನ್ನೇ ಕರೆಯಬೇಕು: ವಂಶಿಕಾ
ನಿಮ್ಮ ಮಗಳ ಬಗ್ಗೆ ಜನರು ನಿಮ್ಮ ಹತ್ರ ಏನು ಹೇಳ್ತಾರೆ?
‘ಗೌರಿ ಗಣೇಶ’ ಸಿನಿಮಾದಲ್ಲಿ ನಾನು ಯಾವ ಹೀರೋನ ತರ ಇಲ್ಲದಿದ್ರೂ ಕೂಡ ನಾನು ಬೇರೆ ನಟರಂತೆ ನಟಿಸುತ್ತಿದ್ದೆ. ಹೀಗೆ ನನ್ನ ಮಗಳು ಅಮ್ಮನ ತರ ಇದ್ರೂ ಕೂಡ ನನ್ನ ಬಾಡಿ ಲ್ಯಾಂಗ್ವೇಜ್ ಅವಳಿಗೆ ಇದೆ. ನನ್ನ ಮಗ ಹುಟ್ಟಿದಾಗ ಜ್ಯೂನಿಯರ್ ಮಾಸ್ಟರ್ ಆನಂದ್, ಚಿತ್ರರಂಗಕ್ಕೆ ಬರುತ್ತಾನೆ ಅಂದಿದ್ರು. ಆದರೆ ಅವನು ನೋಡಲು ನನ್ನ ತರ ಇದ್ದಾನೆ, ಕ್ಯಾರೆಕ್ಟರ್ ಅವನ ಅಮ್ಮನ ತರ ಇದೆ.
ನನ್ನ ಮಗಳನ್ನು ಕರ್ನಾಟಕ ಅಲ್ಲದೇ ಬೇರೆ ರಾಜ್ಯದವರು ಇಷ್ಟಪಟ್ಟಿದ್ದಾರೆ. ಧಾರಾವಾಹಿ, ಸಿನಿಮಾ ಜೊತೆಗೆ ವೆಬ್ ಸಿರೀಸ್‌ಗೂ ಕೂಡ ಅವಕಾಶ ಬಂದಿದೆ. ನನ್ನ ಮಗಳಿಗೆ ನಟನೆ ಬರಲ್ಲ ಅಂತ ನಾವು ಹೇಳಿದ್ದೆವು, ಆದರೆ ನಮ್ಮ ಮಗಳಿಗೆ ನಟನೆ ಆಫರ್ ಕೊಡುತ್ತಿರುವವರು ಅವಳ ಮುಗ್ಧತೆ, ನಡವಳಿಕೆ ನಮಗೆ ಮುಖ್ಯ ಅಂದರು.
‘ನನ್ನಮ್ಮ ಸೂಪರ್ ಸ್ಟಾರ್’ ಶೋನಲ್ಲಿ ಎಲ್ಲ ಸ್ಪರ್ಧಿಗಳ ತಾಯಿ, ತಂದೆ ಫ್ಯಾಮಿಲಿ ಮೀಟ್‌ಗಾಗಿ ಸೇರಿದ್ದರು. ಕೇಕ್ ಕತ್ತರಿಸಿ ಈ ಖುಷಿಯನ್ನು ಆಚರಣೆ ಮಾಡಲಾಗಿದೆ. ಸೃಜನ್ ಲೋಕೇಶ್, ತಾರಾ, ಅನು ಪ್ರಭಾಕರ್ ಅವರ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಚಿಕ್ಕ ವಯಸ್ಸಿಗೆ ಮಗಳು ವಂಶಿಕಾಗೆ ಜನಪ್ರಿಯತೆ ಸಿಕ್ಕಿರೋದು ಕೂಡ ಮಾಸ್ಟರ್ ಆನಂದ್‌ಗೆ ಸ್ವಲ್ಪ ಭಯ ಹುಟ್ಟಿಸಿದೆಯಂತೆ! ಯಾಕೆ?
ನಿದ್ದೆಯಿಂದ ಬೇಗ ಎಬ್ಬಿಸಿದ್ರೆ, ಒಬ್ಬರಾದ ಮೇಲೆ ಒಬ್ರು ಸೆಲ್ಫಿ ಕೇಳಿದ್ರೆ ಅವಾಜ್ ಹಾಕ್ತಾಳೆ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಅಂಜನಿ ಕಶ್ಯಪ
‘ನನ್ನಮ್ಮ ಸೂಪರ್ ಸ್ಟಾರ್’ ವಂಶಿಕಾ ಅಂಜನಿ ಕಶ್ಯಪ ಧಾರಾವಾಹಿ, ಸಿನಿಮಾದಲ್ಲಿ ನಟಿಸ್ತಾಳಾ?
Read more
[wpas_products keywords=”deal of the day party wear dress for women stylish indian”]