Personal Finance
ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಪ್ರಮುಖ ಸುದ್ದಿ ಇಲ್ಲಿದೆ. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಶುಲ್ಕಗಳು: ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್‌ಗಳ ಮೇಲಿನ ಶುಲ್ಕವನ್ನು ಹೆಚ್ಚಿಸಿದೆ. ಹೊಸ ನಿಯಮ ಈಗಾಗಲೇ ಜಾರಿಗೆ ಬಂದಿದೆ.
ಚೆಕ್ ರಿಟರ್ನ್‌ನ ಸಂದರ್ಭದಲ್ಲಿ, ಬ್ಯಾಂಕ್ ಈಗ ಕನಿಷ್ಠ 500 ರೂಗಳೊಂದಿಗೆ ಒಟ್ಟು ಮೊತ್ತದ 2 ಪ್ರತಿಶತವನ್ನು ವಿಧಿಸುತ್ತಿದೆ. ತಡವಾಗಿ ಪಾವತಿ ಮಾಡುವ ಶುಲ್ಕಗಳು ಬಾಕಿಯಿರುವ ಒಟ್ಟು ಮೊತ್ತದೊಂದಿಗೆ ಬದಲಾವಣೆ ಆಗಲಿದೆ. ಈ ಸಂದರ್ಭದಲ್ಲಿ, ನಿಮ್ಮ ಒಟ್ಟು ಮೊತ್ತವು 100 ರೂ.ಗಿಂತ ಕಡಿಮೆಯಿದ್ದರೆ, ಬ್ಯಾಂಕ್ ನಿಮಗೆ ಶುಲ್ಕ ವಿಧಿಸುವುದಿಲ್ಲ. ಅದೇ ಸಮಯದಲ್ಲಿ, ಹೆಚ್ಚಿನ ಮೊತ್ತಗಳಿಗೆ ಶುಲ್ಕಗಳು ನಿಗದಿತ ಮೊತ್ತದ ಹೆಚ್ಚಳದೊಂದಿಗೆ ಹೆಚ್ಚುತ್ತಲೇ ಇರುತ್ತವೆ. 50,000 ರೂ.ಗಿಂತ ಹೆಚ್ಚಿನ ಮೊತ್ತಕ್ಕೆ ಬ್ಯಾಂಕ್ 1200 ರೂ.ಗಳನ್ನು ವಿಧಿಸುತ್ತದೆ ಎಂದು ಐಸಿಐಸಿಐ ಬ್ಯಾಂಕ್ ಹೇಳಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಉಳಿತಾಯ ಬ್ಯಾಂಕ್ ಬಡ್ಡಿದರ ಪರಿಷ್ಕರಣೆ: ಇಲ್ಲಿದೆ ವಿವರ
ಐಸಿಐಸಿಐ ಬ್ಯಾಂಕ್ ಕಳೆದ ತಿಂಗಳು ತನ್ನ ಗ್ರಾಹಕರಿಗೆ ಬದಲಾವಣೆಗಳ ಬಗ್ಗೆ ಸೂಚನೆ ನೀಡಿತ್ತು. “ಆತ್ಮೀಯ ಗ್ರಾಹಕರೇ, 10-ಫೆಬ್ರವರಿ-22 ರಿಂದ ಜಾರಿಗೆ ಬರುವಂತೆ, ನಿಮ್ಮ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿನ ಶುಲ್ಕ ರಚನೆಯನ್ನು ಪರಿಷ್ಕರಿಸಲಾಗುವುದು. ಈ ಬಗ್ಗೆ ಹೆಚ್ಚಿನ ವಿವರಕ್ಕಾಗಿ bit.ly/3qPW6wj ಗೆ ಭೇಟಿ ನೀಡಿ,” ಎಂದು ಬಳಕೆದಾರರಿಗೆ ಸಂದೇಶದಲ್ಲಿ ತಿಳಿಸಿದೆ.

ಹೊಸ ನಿಯಮಗಳು ಫೆಬ್ರವರಿ 10, ಗುರುವಾರದಿಂದ ಜಾರಿಗೆ ಬಂದಿವೆ. ಇತರೆ ಪ್ರಮುಖ ಬ್ಯಾಂಕ್‌ಗಳಾದ ಎಚ್‌ಡಿಎಫ್‌ಸಿ ಬ್ಯಾಂಕ್, ಎಸ್‌ಬಿಐ ಕಾರ್ಡ್ ಮತ್ತು ಆಕ್ಸಿಸ್ ಬ್ಯಾಂಕ್‌ಗಳು ತಮ್ಮ ವೆಬ್‌ಸೈಟ್‌ಗಳ ಪ್ರಕಾರ ರೂ. 50,000 ಕ್ಕಿಂತ ಹೆಚ್ಚಿನ ಬ್ಯಾಲೆನ್ಸ್ ಪಾವತಿಗೆ ಕ್ರಮವಾಗಿ ರೂ.1,300, ರೂ.1,300 ಮತ್ತು ರೂ.1000 ವರೆಗೆ ಶುಲ್ಕ ವಿಧಿಸುತ್ತಿವೆ.

ಐಸಿಐಸಿಐ ಬ್ಯಾಂಕ್‌ನ ಪರಿಷ್ಕೃತ ವಿಳಂಬ ಶುಲ್ಕಗಳು ಎಷ್ಟು?
ಈ ಮೊದಲು, ಮೊತ್ತವು 100 ರೂ.ಗಿಂತ ಕಡಿಮೆಯಿದ್ದಲ್ಲಿ ಯಾವುದೇ ವಿಳಂಬ ಶುಲ್ಕವಿರಲಿಲ್ಲ. ನಿಮ್ಮ ಬಾಕಿ ಮೊತ್ತದ ಹೆಚ್ಚಳದೊಂದಿಗೆ ಬ್ಯಾಂಕ್ ನಿಮಗೆ ಹೆಚ್ಚಿನ ಶುಲ್ಕ ವಿಧಿಸುತ್ತದೆ. ಬ್ಯಾಂಕ್ ವಿಧಿಸುವ ಗರಿಷ್ಠ ಶುಲ್ಕ 1,200 ರೂಪಾಯಿ ಆಗಿದೆ ಎಂದು ಬ್ಯಾಂಕ್ ಹೇಳಿದೆ. ನಿಮ್ಮ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನ ವಿಳಂಬ ಶುಲ್ಕ ಎಷ್ಟು ಅಧಿಕವಾಗಿದೆ ಎಂದು ಈ ಕೆಳಗೆ ತಿಳಿಸಲಾಗಿದೆ.
* ಬಾಕಿ ಮೊತ್ತ ರೂ 100 ಕ್ಕಿಂತ ಕಡಿಮೆ ಇದ್ದರೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ
* ಬಾಕಿ ಮೊತ್ತ 100 ರಿಂದ 500 ರೂ: 100 ರೂ ಶುಲ್ಕ
* ರೂ 501 ರಿಂದ ರೂ 5,000 ನಡುವಿನ ಬಾಕಿ ಮೊತ್ತ: 500 ರೂ ವಿಳಂಬ ಶುಲ್ಕ
* ಬಾಕಿ ಮೊತ್ತ ರೂ 5,001 – ರೂ 10,000: ರೂ 750 ವಿಳಂಬ ಶುಲ್ಕ
* ಬಾಕಿ ಮೊತ್ತ ರೂ 10,001 – ರೂ 25,000: ರೂ 900 ವಿಳಂಬ ಶುಲ್ಕ
* ಬಾಕಿ ಮೊತ್ತ ರೂ 25,011 – ರೂ 50,000: ರೂ 1000 ವಿಳಂಬ ಶುಲ್ಕ
* ಬಾಕಿ ಮೊತ್ತ ರೂ 50,000 ವರೆಗೆ: ರೂ 1,200 ವಿಳಂಬ ಶುಲ್ಕ
9 ಲಕ್ಷ ಕೋಟಿ ನಷ್ಟ ಹೊಂದಿದ್ದ ಷೇರುಪೇಟೆ ಡಿ.21ರಂದು ಚೇತರಿಕೆ
ಇದರ ಜೊತೆಗೆ, ಗ್ರಾಹಕರ ಉಳಿತಾಯ ಬ್ಯಾಂಕ್ ಖಾತೆಗಳಲ್ಲಿ ಮಿತಿಗಿಂತ ಕಡಿಮೆ ಹಣ ಇದ್ದರೆ 50 ರೂಪಾಯಿ ಮತ್ತು ಜಿಎಸ್‌ಟಿಯನ್ನು ವಿಧಿಸಲಾಗುವುದು ಎಂದು ಬ್ಯಾಂಕ್ ಅಧಿಸೂಚನೆಯಲ್ಲಿ ತಿಳಿಸಿದೆ. ಇನ್ನು ಈ ಶುಲ್ಕ ಹೆಚ್ಚಳವು ಐಸಿಐಸಿಐ ಬ್ಯಾಂಕ್ ಎಮರಾಲ್ಡ್ ಕ್ರೆಡಿಟ್ ಕಾರ್ಡ್‌ಗೆ ಅನ್ವಯಿಸುವುದಿಲ್ಲ ಎಂದು ಬ್ಯಾಂಕ್ ಸೇರ್ಪಡೆ ಮಾಡಿದೆ. ಆದ್ದರಿಂದ, ನಿಗದಿತ ಸಮಯದೊಳಗೆ ನಿಮ್ಮ ಕ್ರೆಡಿಟ್ ಕಾರ್ಡ್ ಬಾಕಿಯನ್ನು ಪಾವತಿಸಲು ಸಾಧ್ಯವಾಗದಿದ್ದರೆ, ನೀವು ಶುಲ್ಕವನ್ನು ಪಾವತಿ ಮಾಡಲು ಕ್ರೆಡಿಟ್ ಕಾರ್ಡ್ ಅನ್ನು ಬಳಸದೆ ಇರುವುದು ಉತ್ತಮ ಆಯ್ಕೆ ಆಗಿದೆ.
English summary
ICICI Bank Customers ALERT! Pay More for these Credit, Debit Card Services
ICICI Bank Customers ALERT! Pay More for these Credit, Debit Card Services.
Story first published: Friday, February 11, 2022, 21:17 [IST]
Read more…
[wpas_products keywords=”deal of the day”]