ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿ ಸಲುವಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಫೆ.12-13ರಂದು ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಸಲುವಾಗಿ ಬೆಂಗಳೂರಿಗೆ ಆಗಮಿಸಿದ್ದ ಬಿಸಿಸಿಐ ಬಾಸ್ ಸೌರವ್ ಗಂಗೂಲ, ಎದೆ ನೋವಿನ ಸಮಸ್ಯೆ ಕಾರಣ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.
ಇದೇ ವರ್ಷ ಆರಂಭದಲ್ಲಿ ಹೃದ್ರೋಗ ಸಂಬಂಧ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದ ಸೌರವ್ ಗಂಗೂಲಿ ಚೇತರಿಸಿದ್ದರು. ಇದೀಗ ಮತ್ತದೇ ಸಮಸ್ಯೆ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾರಾಯಣ ಹೆಲ್ತ್ ಆಸ್ಪತ್ರೆಯ ಹೃದ್ರೋಗ ಪರಿಣತ ವೈದ್ಯರು ಭಾರತ ತಂಡದ ಮಾಜಿ ನಾಯಕನಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಐಎಎನ್‌ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಂದಹಾಗೆ ನಾರಾಯಣ ಹೆಲ್ತ್ ಆಸ್ಪತ್ರೆಯು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ. ಸದ್ಯಕ್ಕೆ ರೊಟೀನ್ ಚೆಕಪ್ ಸಲುವಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಐಪಿಎಲ್ ಆಕ್ಷನ್: ‘ಸೈಲೆಂಟ್ ಟೈ ಬ್ರೇಕರ್’ ನಿಯಮದ ಬಗ್ಗೆ ತಿಳಿದುಕೊಳ್ಳಲೇ ಬೇಕು!
ಕಳೆದ ವರ್ಷ ಎದೆ ನೋವಿನ ಸಮಸ್ಯೆ ಕಾರಣ ಸೌರವ್ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಎರಡು ಎಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಪಟ್ಟು ಗುಣಮುಖರಾಗುವ ಮೂಲಕ ಬಿಸಿಸಿಐನ ಎಲ್ಲ ಚಟುವಟಿಕೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪಾಲ್ಗೊಳ್ಳಲು ಆರಂಭಿಸಿದ್ದರು. ಈಗ ಐಪಿಎಲ್ 2022 ಟೂರ್ನಿಯ ಮೆಗಾ ಆಕ್ಷನ್ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಆಸ್ಪತ್ರೆ ಸೇರಿದ್ದಾರೆ.
ಕೊರೊನಾ ವೈರಸ್ ಸೋಂಕಿನ ಸಲುವಾಗಿ ವ್ಯಾಕ್ಸಿನೇಷನ್ ತೆಗೆದುಕೊಂಡಿದ್ದರೂ ಸೋಂಕಿಗೆ ತುತ್ತಾಗಿದ್ದ ಸೌರವ್ ಗಂಗೂಲಿ ಇದೇ ವರ್ಷ ಜನವರಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ ಕೋವಿಡ್-19 ಸೋಂಕಿನ ಹೊಸ ಮಾದರಿ ಓಮಿಕ್ರಾನ್ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಅವರ ಸಹೋದರ ಸ್ನೇಹಶೀಶ್ ಗಂಗೂಲಿ ಕೂಡ ಕೋವಿಡ್-19 ಸೋಂಕಿಗೆ ತುತ್ತಾಗಿದ್ದರು.
ಮೆಗಾ ಆಕ್ಷನ್‌ನಲ್ಲಿ ಪಾಲ್ಗೊಳ್ಳಲಿರುವ 590 ಆಟಗಾರರ ಅಂತಿಮ ಪಟ್ಟಿ ಬಿಡುಗಡೆ!
ಇದೇ ಶನಿವಾರ-ಭಾನುವಾರ (ಫೆ.12-13) ಐಪಿಎಲ್ ಮೆಗಾ ಆಕ್ಷನ್ ನಡೆಯಲಿದ್ದು, ಒಟ್ಟಾರೆ 590 ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಎಲ್ಲಾ ಹತ್ತು ತಂಡಗಳು ಗರಿಷ್ಠ 21-22 ಆಟಗಾರರನ್ನು ಖರೀದಿ ಮಾಡಲು ಹರಾಜಿನಲ್ಲಿ ಹಣದ ಹೊಳೆ ಹರಿಸಲು ಸಜ್ಜಾಗಿವೆ. ಬಿಸಿಸಿಐ ಬಾಸ್ ಸೌರವ್ ಗಂಗೂಲಿ ಈ ಮಹತ್ವದ ಕಾರ್ಯಕ್ರಮಕ್ಕೆ ಗೈರಾದಲ್ಲಿ, ಕಾರ್ಯದರ್ಶಿ ಜಯ ಶಾ ಮತ್ತು ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಉಸ್ತುವಾರಿಯಲ್ಲಿ ಹರಾಜು ಪ್ರಕ್ರಿಯೆ ಜರುಗಲಿದೆ.
ಐಪಿಎಲ್ 2022 ಟೂರ್ನಿ ಮಾರ್ಚ್ 27ಕ್ಕೆ ಶುರುವಾಗ ಮೇ 2ನೇ ವಾರದಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಇದೆ. ಲೀಗ್ ಹಂತದ ಪಂದ್ಯಗಳನ್ನು ಮಹಾರಾಷ್ಟ್ರದಲ್ಲಿ ಮತ್ತು ನಾಕ್‌ಔಟ್ ಪಂದ್ಯಗಳನ್ನು ಅಹ್ಮದಾಬಾದ್‌ನಲ್ಲಿ ಆಯೋಜಿಸಲು ಬಿಸಿಸಿಐ ಯೋಜನೆ ರೂಪಿಸಿದೆ.
Read more
[wpas_products keywords=”deal of the day sale today offer all”]