Karnataka news paper

‘ಪುಷ್ಪ’ ಸಿನಿಮಾವನ್ನು ನಾಚಿಸುತ್ತಾ ಸಂಚಾರಿ ವಿಜಯ್ ‘ಮೇಲೊಬ್ಬ ಮಾಯಾವಿ’: ಪುಷ್ಪಗಿರಿ ಅರಣ್ಯಪ್ರದೇಶದ ಹರಳುಗಲ್ಲು ಮಾಫಿಯಾ ಕಥೆ


Online Desk

ಆಂಧ್ರದ ಶೇಷಾಚಲಂ ದಟ್ಟಾರಣ್ಯದಲ್ಲಿ ನಡೆಯುವ ರಕ್ತಚಂದನ ಕರಾಳ ದಂಧೆಯ ಕಥೆ ಹೊಂದಿದ್ದ ಪುಷ್ಪ ಸಿನಿಮಾ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ಇರಿಸುವಂತೆ ಮಾಡಿತ್ತು. ‘ಪುಷ್ಪ’ ಸಿನಿಮಾದ ಕಥಾಹಂದರದಂತೆಯೇ, ನಮ್ಮ ರಾಜ್ಯದ ಪಶ್ಚಿಮ ಘಟ್ಟದಲ್ಲಿ ಬಹುದೊಡ್ಡ ಹರಳುಕಲ್ಲುಗಳ ದಂಧೆ ಕಾರ್ಯನಿರ್ವಹಿಸುತ್ತಿದೆ. ಈ ಮಾಫಿಯಾದ ಹಿನ್ನೆಲೆಯಲ್ಲಿ ರೂಪುಗೊಡಿರುವ ದಿ.ಸಂಚಾರಿ ವಿಜಯ್ ಅಭಿನಯದ ಸಿನಿಮಾ `ಮೇಲೊಬ್ಬ ಮಾಯಾವಿ’. ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

ದಕ್ಷಿಣ ಕನ್ನಡ ಮತ್ತು ಕೊಡಗು ಗಡಿಭಾಗದ ಪುಷ್ಪಗಿರಿ ಅಭಯಾರಣ್ಯ ಭಾಗದಲ್ಲಿ ಹರಳು ಕಲ್ಲು ದಂಧೆ ಕಾರ್ಯಾಚರಿಸುತ್ತಿದೆ. ಕೊಡಗು-ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಪುಷ್ಪಗಿರಿ ಅರಣ್ಯದಲ್ಲಿ ಈ ನಿಗೂಢ ಹರಳುಕಲ್ಲಿನ ಗಣಿಗಾರಿಕೆ ನಡೆಯುತ್ತಿದೆ. 

ಇದನ್ನೂ ಓದಿ: ‘ರಾಮ್ ರಾಜ್’ ಕುಟುಂಬ ಸೇರಿದ ರಾಕಿಂಗ್ ಸ್ಟಾರ್: ಬ್ರ್ಯಾಂಡ್ ಅಂಬಾಸಿಡರ್ ಆಗಿ ನಟ ಯಶ್!

`ಮೇಲೊಬ್ಬ ಮಾಯಾವಿ’ ಚಿತ್ರತಂಡ ಹರಳುಗಲ್ಲು ಮಾಫಿಯಾ ಕಾರ್ಯಾಚರಿಸುವ ಅಪಾಯದ ಜಾಗಗಳಲ್ಲೇ ಚಿತ್ರೀಕರಣವನ್ನು ಮಾಡಿದೆ ಎನ್ನುವುದು ವಿಶೇಷ. ಈ ಹರಳು ಕಲ್ಲಿಗೆ ರಾಜಸ್ಥಾನ ,ಗುಜರಾತ್ , ಮುಂಬೈ ಆಭರಣ ತಯಾರಿಕರಿಂದ ಭಾರೀ ಬೇಡಿಕೆ ಇದೆ. 

ಹಣದ ಆಸೆಗೆ ಕಾರ್ಮಿಕರು ಗುಡ್ಡದಲ್ಲಿ ಅಪಾಯಕಾರಿ ಸುರಂಗ ಕೊರೆದು ಹೊಳೆಯುವ ಕಲ್ಲುಗಳಿಗಾಗಿ ಹುಡುಕಾಟ ನಡೆಸುತ್ತಾರೆ. ಇನ್ನು ಸುರಂಗ ಕೊರೆದು ಹರಳುಕಲ್ಲು ತೆಗೆಯುವ ವೇಳೆ ಸುರಂಗ ಕುಸಿದು ಅಲ್ಲಿಯೇ ಸಮಾಧಿಯಾದ ಘಟನೆಗಳು ಕೂಡ ನಡೆದಿವೆ. 

ಇದನ್ನೂ ಓದಿ: ರಾಣ’ದಲ್ಲಿ ಸಂಯುಕ್ತಾ ಹೆಗಡೆ ಹಾರ್ಟ್ ಬೀಟ್ ಹೆಚ್ಚಿಸೋ ಹಾಟ್ ಸ್ಟೆಪ್: ‘ಮಳ್ಳಿ ಮಳ್ಳಿ’ ಮ್ಯೂಸಿಕ್ ವಿಡಿಯೊ ಲಾಂಚ್

`ಶ್ರೀ ಕಟೀಲ್ ಸಿನಿಮಾಸ್’ ಬ್ಯಾನರ್‌ನ ಅಡಿಯಲ್ಲಿ ಭರತ್ ಕುಮಾರ್ ಮತ್ತು ತನ್ವಿ ಅಮಿನ್ ಕೊಲ್ಯ ಈ ಸಿನಿಮಾಗೆ ಹಣ ಹೂಡಿದ್ದಾರೆ. ಬಿ.ನವೀನ್‌ಕೃಷ್ಣ ಮೇಲೊಬ್ಬ ಮಾಯಾವಿ ಸಿನಿಮಾ ನಿರ್ದೇಶಿಸಿದ್ದಾರೆ. ರಂಗಭೂಮಿಯ ಪ್ರತಿಭೆ ಅನನ್ಯ ಶೆಟ್ಟಿ ನಾಯಕಿಯಾಗಿದ್ದಾರೆ. 

ಇದನ್ನೂ ಓದಿ: ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮನ್ಸೋರೆ 19.20.21 ಸಿನಿಮಾಗೆ ನಾಯಕನಾಗಿ ರಂಗಭೂಮಿ ಕಲಾವಿದ ಶೃಂಗ ಆಯ್ಕೆ

ಬಿಗ್‌ಬಾಸ್ ಖ್ಯಾತಿಯ ಚಕ್ರವರ್ತಿ ಚಂದ್ರಚೂಡ್ ಮೊಟ್ಟ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಖಳನಟನಾಗಿ ಕಾಣಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ದಿವಂಗತ ಎಲ್.ಎನ್.ಶಾಸ್ತ್ರೀಯವರ ಸಂಗೀತವಿದ್ದು, ಹಿನ್ನೆಲೆ ಸಂಗೀತ ಮಣಿಕಾಂತ್ ಕದ್ರಿಯವರದ್ದಾಗಿದೆ. 

ಇದನ್ನೂ ಓದಿ: ಚಿತ್ರರಂಗದಲ್ಲಿ ಗಾಡ್ ಫಾದರ್ ಹೆಲ್ಪ್ ತುಂಬಾ ದಿನ ನಡಿಯಲ್ಲ, ನಮ್ಮಲ್ಲೂ ಕಂಟೆಂಟ್ ಇರ್ಬೇಕು: ‘ಡೊಳ್ಳು’ ನಿರ್ದೇಶಕ ಸಾಗರ್ ಪುರಾಣಿಕ್



Read more…

[wpas_products keywords=”party wear dress for women stylish indian”]