ನಮ್ಮ ಸರ್ಕಾರ ಪರ್ಸಂಟೇಜ್ ಸರ್ಕಾರ ಅಲ್ಲ ಎಂದ ರೇಣುಕಾಚಾರ್ಯ ಅವರ ಬುಟ್ಟಿಯಲ್ಲಿ ಹಾವಿಲ್ಲ, ತನಿಖೆ ಬಳಿಕ ಯಾರ ಬುಟ್ಟಿಯಲ್ಲಿ ಹೆಬ್ಬಾವು, ನಾಗರಹಾವು ಇದೆ ಎಂದು ಗೊತ್ತಾಗುತ್ತೆ ಎಂದರು. ಅಲ್ಲದೇ, ಕಾಂಗ್ರೆಸ್ ಭ್ರಮಾಲೋಕದಲ್ಲಿ ಪ್ರತಿಭಟನೆ ಮಾಡುತ್ತಿದೆ. ಸಿದ್ದರಾಮಯ್ಯನವರು ಸೋನಿಯಾ ಗಾಂಧಿ, ಕಾಂಗ್ರೆಸ್‌ನ್ನು ಬಾಯಿಗೆ ಬಂದ ಹಾಗೆ ಮಾತನಾಡಿದ್ದರು. ಆದರೆ ಇವಾಗ ಅವರ ಜೊತೆಗಿದ್ದಾರೆ ಎಂದರು. ಶಾಸಕಾಂಗ ಸಭೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು ಆ ನಿಟ್ಟಿನಲ್ಲಿ ಚರ್ಚೆ ಆಗಿದೆ ಎಂದ ಎಂಪಿಆರ್, ಕೆಲವರು ತಮ್ಮ ನಡವಳಿಕೆಯನ್ನು ಬದಲಾವಣೆ ಮಾಡಬೇಕು ಎಂದು ಮಾತನಾಡಿದ್ದೇವೆ. ಯಾವುದೇ ಸಚಿವರ ವಿರುದ್ಧ ವೈಯಕ್ತಿಕ ದ್ವೇಷ ಇಲ್ಲ. ಶಾಸಕರಿಂದ ಸರ್ಕಾರ, ಶಾಸಕರನ್ನು ಗೌರವಿಸುವ ಕೆಲಸ ಆಗಬೇಕು. ಆ ದಿಕ್ಕಿನಲ್ಲಿ ಚರ್ಚೆ ನಡೆದಿದೆ ಎಂದರು.
ಇನ್ನು ಯಾವುದೇ ಸಚಿವರ ವಿರುದ್ಧ ವೈಯಕ್ತಿಕವಾಗಿ, ಆರೋಪ ಮಾಡಿಲ್ಲ, ಮಾತನಾಡಿಯೂ ಇಲ್ಲ ಎಂದ ರೇಣುಕಾಚಾರ್ಯ, ಬಿಜೆಪಿಯಲ್ಲಿ ವಲಸಿಗ ಮೂಲ ಇಲ್ಲ, ಅವರು ಕಾಂಗ್ರೆಸ್ ಜೆಡಿಎಸ್‌ನಿಂದ ಬಿಜೆಪಿ ಸೇರ್ಪಡೆಯಾಗಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರೂ ಬಿಜೆಪಿಯವರೇ. ನಾನು ಯಾರ ಪರವಾಗಿ ಮಾತನಾಡುತ್ತಿಲ್ಲ, ಈಶ್ವರಪ್ಪ ಅನುಭವದ ಆಧಾರದಲ್ಲಿ ಹೇಳಿರಬಹುದು ಎಂದರು. ವಲಸಿಗರು ಮತ್ತೆ ಕಾಂಗ್ರೆಸ್ ಹೋಗುವ ವಿಚಾರವಾಗಿ ಮಾತನಾಡಿ, ಹೊರಗಿನಿಂದ ಬಂದು ಸಚಿವರಾದವರು ನಮ್ಮವರೇ. ಈ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ಆಗಿಲ್ಲ. ಯಾರಾದರೂ ಪಕ್ಷದಲ್ಲಿ ಅಧಿಕಾರ ಅನುಭವಿಸಿ ದ್ರೋಹ ಮಾಡಿದರೆ ತಾಯಿಗೆ ದ್ರೋಹ ಮಾಡಿದಂತೆ. ಉಂಡು ಹೋದ ಕೊಂಡು ಹೋದ, ಆದರೆ ಆ ರೀತಿ ಯಾರೂ ಇಲ್ಲ. ಪಕ್ಷಕ್ಕೆ ದ್ರೋಹ ಮಾಡಿದರೆ ತಾಯಿಗೆ ದ್ರೋಹ ಮಾಡಿದ ಹಾಗೆ. ಪಕ್ಷದ ತತ್ವ ಸಿದ್ದಾಂತ ಒಪ್ಪಿ ಜೊತೆಗಿದ್ದಾರೆ ನಾವು ಎಲ್ಲರೂ ಒಂದೇ ಎಂದರು.