Karnataka news paper

ಮುಂಬೈ ಉಗ್ರರ ದಾಳಿ ಅರೋಪಿಗಳ ಆಸ್ತಿ ವಿವರ ಕೋರಿದ ಪಾಕ್ ತನಿಖಾ ಸಂಸ್ಥೆ


The New Indian Express

ಲಾಹೋರ್: 2008ರ ಮುಂಬೈ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ತನಿಖೆ ಕೈಗೊಳ್ಳುವುದರಲ್ಲೇ ಇರುವ ಪಾಕ್ ತನಿಖಾ ಸಂಸ್ಥೆ ಆರೋಪಿಗಳ ಆಸ್ತಿ ವಿವರ ಕೇಳಿದೆ.

ಇದನ್ನೂ ಓದಿ:  ಹಿಜಾಬ್ ಧರಿಸದಂತೆ ಮುಸ್ಲಿಂ ಹೆಣ್ಣುಮಕ್ಕಳನ್ನು ತಡೆಯುವುದು ದಬ್ಬಾಳಿಕೆ ಕ್ರಮ: ಪಾಕ್ ವಿದೇಶಾಂಗ ಸಚಿವ ಆಕ್ಷೇಪ

ಘಟನೆ ನಡೆದು 14 ವರ್ಷಗಳಾದರೂ ಪ್ರಕರಣದ ಆರೋಪಿಗಳು ಪಾಕಿಸ್ತಾನದಲ್ಲಿ ಓಡಾಡಿಕೊಂಡಿದ್ದಾರೆ. ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸುವಲ್ಲಿ ಪಾಕ್ ಸೋತಿದೆ ಎನ್ನುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಪಾಕಿಸ್ತಾನದ ಕ್ರೂರಿ ಡಿಕ್ಟೇಟರ್ ಜಿಯಾ ಉಲ್ ಹಕ್ ಕೂಡಾ ಲತಾ ಮಂಗೇಶ್ಕರ್ ಫ್ಯಾನ್

ನಿಷೇಧಿತ ಉಗ್ರಸಂಘಟನೆ ಲಷ್ಕರ್ ಇ ತಯ್ಬಾಗೆ ಸೇರಿದ ಅಮ್ಜದ್ ಖಾನ್, ಇಫ್ತಿಕಾರ್ ಅಲಿ, ಶಾಹಿದ್ ಗಫೂರ್, ಮೊಹಮದ್ ಉಸ್ಮಾನ್, ಅತೀಖರ್ ರಹಮಾನ್, ರಿಯಾಜ್ ಅಹಮದ್, ಮೊಹಮದ್ ಮುಷ್ತಾಕ್ ಸೇರಿದಂತೆ ಹಲವರು ಆರೋಪಿ ಪಟ್ಟಿಯಲ್ಲಿದ್ದಾರೆ.

ಇದನ್ನೂ ಓದಿ:  ಕರ್ನಾಟಕ ಹಿಜಾಬ್ ವಿವಾದ: ಇಸ್ಲಾಮಾಬಾದಿನ ಭಾರತೀಯ ಹೈ ಕಮಿಷನ್ ಗೆ ಪಾಕಿಸ್ತಾನ ಸಮನ್ಸ್

ಈ ಆರೋಪಿಗಳು ಹಣ ವರ್ಗಾವಣೆ ಸೇರಿದಂತೆ ಫೋನ್ ಮೂಲಕ ನಿರ್ದೇಶನಗಳನ್ನು ನೀಡಿದವರಾಗಿದ್ದಾರೆ. 2008ರಲ್ಲಿ 10 ಮಂದಿ ಲಷ್ಕರ್ ಉಗ್ರರು ಸಮುದ್ರ ಮಾರ್ಗದ ಮೂಲಕ ಮುಂಬೈ ಪ್ರವೇಶಿಸಿ ದಾಳಿ ನಡೆಸಿದ್ದರು. ದಾಳಿಯಲ್ಲಿ 160ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. 

ಇದನ್ನೂ ಓದಿ: ಐಸಿಸ್: ಉಗ್ರ ಸನಾವುಲ್ಲಾ ಗಫಾರಿ ಬಗ್ಗೆ ಮಾಹಿತಿಗೆ 74.75 ಕೋಟಿ ರೂ. ಬಹುಮಾನ!



Read more

[wpas_products keywords=”deal of the day”]