2013ರಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ‘ಬಡತನ ಎನ್ನುವುದು ಒಂದು ಮನಸ್ಥಿತಿ. ಅಂದರೆ ಆಹಾರದ ಅಭಾವ, ಹಣದ ಕೊರತೆ ಅಥವಾ ವಸ್ತುಗಳು ಮುಂತಾದವುಗಳ ಕೊರತೆ ಅಲ್ಲ. ಒಬ್ಬರು ಆತ್ಮವಿಶ್ವಾಸ ಬೆಳೆಸಿಕೊಂಡರೆ, ಬಡತನದಿಂದ ಹೊರಗೆ ಬರಬಹುದು’ ಎಂಬುದಾಗಿ ಹೇಳಿದ್ದರು ಎಂದು ನಿರ್ಮಲಾ ಸೀತಾರಾಮನ್ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
“ನಿಮ್ಮ ಮಾಜಿ ಅಧ್ಯಕ್ಷರು ಹೇಳಿದ್ದರು, ‘ಬಡತನ ಎಂದರೆ ಆಹಾರ, ಹಣ ಅಥವಾ ವಸ್ತುಗಳ ಕೊರತೆ ಎಂದಲ್ಲ. ಜನರು ಆತ್ಮವಿಶ್ವಾಸ ಪಡೆದುಕೊಂಡರೆ ಬಡತನವನ್ನು ನೀಗಿಸಬಹುದು’ ಎಂದಿದ್ದರು. ‘ಇದು ಒಂದು ಮನಸ್ಥಿತಿ. ನಾನು ಆ ವ್ಯಕ್ತಿಯ ಹೆಸರನ್ನು ಹೇಳುವುದಿಲ್ಲ. ನಿಮಗೆ ಅದು ಯಾರೆಂದು ತಿಳಿದಿದೆ” ಎಂದು ನಿರ್ಮಲಾ ವಾಗ್ದಾಳಿ ನಡೆಸಿದ್ದಾರೆ.
“ದಯವಿಟ್ಟು ಸ್ಪಷ್ಟಪಡಿಸಿ. ನಾನು ಈ ‘ಬಡತನ’ದ ಬಗ್ಗೆ ಮಾತನಾಡಲು ನೀವು ಬಯಸಿದ್ದೀರಾ? ‘ಮನಸ್ಥಿತಿಯ ಬಡತನ’ದ ಬಗ್ಗೆ?” ವಿಪಕ್ಷ ಸದಸ್ಯರ ಆಕ್ಷೇಪಣೆ ನಡುವೆ ಗುಡುಗಿದ್ದಾರೆ.
2014ರ ಹಿಂದಿನ ಗ್ರಾಹಕ ದರ ಸೂಚ್ಯಂಕದ ಅಂಕಿ ಅಂಶವನ್ನು ನಿರ್ಮಲಾ ಉಲ್ಲೇಖಿಸಿದರು. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಸೂಚ್ಯಂಕ ಶೇ 9.1ರಷ್ಟು ಇದ್ದರೆ, ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಶೇ 6.2ರಷ್ಟಿದೆ. ವಿರೋಧ ಪಕ್ಷಗಳಿಗೆ ಕಡಿಮೆ ಬಿಕ್ಕಟ್ಟನ್ನೂ ಎದುರಿಸಲು ಸಾಧ್ಯವಾಗಿರಲಿಲ್ಲ ಎಂದು ಟೀಕಿಸಿದ್ದಾರೆ.
ಭಾರತವು ‘ಅಮೃತ ಕಾಲ’ದಲ್ಲಿ ಇಲ್ಲ, ಆದರೆ ‘ರಾಹು ಕಾಲ’ದಲ್ಲಿ ಇದೆ ಎಂಬ ಕಪಿಲ್ ಸಿಬಲ್ ಅವರ ಹೇಳಿಕೆ ಕುರಿತು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ನಿರ್ಮಲಾ, “ನಾವು ಇದನ್ನು ಅಮೃತ ಕಾಲ ಎಂದು ಕರೆಯುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ನಾವು ಸ್ವಾತಂತ್ರ್ಯೋತ್ಸವದ 100 ವರ್ಷದ ಮೇಲೆ ಯಾವುದೇ ದೂರದೃಷ್ಟಿ ಹೊಂದಿರದೆ ಇದ್ದರೆ, ನಾವು ಕಷ್ಟ ಅನುಭವಿಸುತ್ತೇವೆ.. 65 ವರ್ಷಗಳಲ್ಲಿ ಕಾಂಗ್ರೆಸ್ ಒಂದು ಕುಟುಂಬಕ್ಕೆ ಅನುಕೂಲ ಮಾಡುವುದರ ಹೊರತು ಬೇರೆ ಯಾವುದೇ ದೂರದೃಷ್ಟಿ ಹೊಂದಿರಲಿಲ್ಲ” ಎಂದು ಹೇಳಿದ್ದಾರೆ.
“ರಾಹು ಕಾಲ ಎನ್ನುವುದು ಕಾಂಗ್ರೆಸ್, ‘ಮಹಿಳೆಯರು, ಮಹಿಳಾ ಶಕ್ತಿಯೂ ಹೌದು’ (ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಚುನಾವಣಾ ಘೋಷಣೆ) ಎಂದು ಹೇಳಿದಾಗ ಬರುತ್ತದೆ. ಆದರೆ ರಾಜಸ್ಥಾನದಲ್ಲಿ ಯುವತಿಯರು ಹೋರಾಡಲು ಸಾಧ್ಯವಾಗುತ್ತಿಲ್ಲ” ಎಂದು ಟೀಕಿಸಿದ್ದಾರೆ.
Read more
[wpas_products keywords=”deal of the day sale today offer all”]