ಕಡೂರು ತಾಲೂಕಿನ ಯಗಟಿಪುರ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಸಮೀಪದ ವೇದಾ ನದಿಯ ಚೆಕ್‌ಡ್ಯಾಮ್‌ನಲ್ಲಿ ಮೃತ ದೇಹಗಳನ್ನು ಪತ್ತೆಮಾಡಿ ಹೊರ ತೆಗೆಯಲಾಗಿದೆ.
ಬೆಂಗಳೂರಿನ ಪ್ಲಂಬಿಂಗ್ ಗುತ್ತಿಗೆದಾರನ ಪತ್ನಿಯಾಗಿದ್ದ ಲತಾ ಮತ್ತು ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ಲಕ್ಷ್ಮೀಕಾಂತ್ ನಡುವೆ ಸ್ನೇಹ ಬೆಳೆದಿತ್ತು.
ಕಳೆದ 15 ದಿನಗಳ ಹಿಂದೆ ಲಕ್ಷ್ಮೀಕಾಂತ ತನ್ನ ಊರು ಬೆಲಗೂರಿಗೆ ಹೋಗುವುದಾಗಿ ತೆರಳಿದ್ದ. ಬಳಿಕ ಲತಾ ಮತ್ತು ಪತಿಯ ನಡುವೆ ಕಲಹ ಉಂಟಾಗಿ ಲತಾ ತವರು ಮನೆಗೆ ಹೋಗಿದ್ದಳು. ಫೆಬ್ರುವರಿ 7 ರಂದು ಲಕ್ಷ್ಮೀಕಾಂತ್ ಮತ್ತು ಲತಾ ಇಬ್ಬರೂ ಒಟ್ಟಾಗಿ ಧರ್ಮಸ್ಥಳಕ್ಕೆ ತೆರಳಿ 8 ರಂದು ಪೂಜೆ ಮಾಡಿಸಿದ್ದರು. ಅಲ್ಲಿ ಲಕ್ಷ್ಮೀಕಾಂತ್ ತಲೆ ಮುಡಿ ನೀಡಿ ವಾಪಸ್ ಕಡೂರಿಗೆ ಬಂದಿದ್ದ.
ಬುಧವಾರ ವೇದಾ ನದಿಯ ಚೆಕ್ ಡ್ಯಾಮ್ ಬಳಿ ಮೂರು ಬ್ಯಾಗ್‌ಗಳು ಪತ್ತೆಯಾಗಿದ್ದವು. ನೀರಿನಲ್ಲಿ ಮಹಿಳೆ ಶವ ತೇಲುತ್ತಿದ್ದುದ್ದನ್ನು ಕಂಡ ಗ್ರಾಮಸ್ಥರು, ಯಗಟಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು, ಮಹಿಳೆಯ ಶವ ಹೊರ ತೆಗೆದು, ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಪತಿಯ ದೂರವಾಣಿ ಸಂಖ್ಯೆ ಸಿಕ್ಕಿದ್ದು, ಅವರಿಗೆ ಮಾಹಿತಿ ನೀಡಿದ್ದರು.
ಬಳಿಕ ಇನ್ನಷ್ಟು ಮಾಹಿತಿ ಪಡೆದ ಪೊಲೀಸರು ಮುಳುಗು ತಜ್ಞ ಮಲ್ಪೆಯ ಈಶ್ವರ್ ಕರ್ಕೆರಾ ಎಂಬುವವರನ್ನು ಗುರುವಾರ ಕರೆಸಿ ಹುಡುಕಿಸಿದಾಗ ಲಕ್ಷ್ಮೀಕಾಂತ್‌ನ ಶವ ಪತ್ತೆಯಾಗಿದೆ. ಪರೀಕ್ಷೆ ನಂತರ ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.
ಸುಮಾರು 300ಕ್ಕೂ ಹೆಚ್ಚು ಶವಗಳನ್ನು ಪತ್ತೆ ಮಾಡಿರುವ ಮುಳುಗು ತಜ್ಞ ಈಶ್ವರ್ ಕರ್ಕೆರಾ ಅವರ ಸಾಹಸ ನೋಡಲು ಸುತ್ತಮುತ್ತಲ ಗ್ರಾಮದ ಜನರು ನೆರೆದಿದ್ದರು. ಹಲವರು ತಮ್ಮ ಮೊಬೈಲ್‌ನಲ್ಲಿ ದೃಶ್ಯವನ್ನು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿದೆ.
Read more
[wpas_products keywords=”deal of the day sale today offer all”]