ANI
ಚಂಡೀಗಢ: ಪ್ರಾಮಾಣಿಕ ಮತ್ತು ಭ್ರಷ್ಟರ ನಡುವೆ ಹೋಲಿಕೆ ಸರಿಯಲ್ಲ ಎಂದು ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ಪುತ್ರಿ ರಬಿಯಾ ಕೌರ್ ಶುಕ್ರವಾರ ಪರೋಕ್ಷವಾಗಿ ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪಕ್ಷವು ತಮ್ಮ ತಂದೆಯನ್ನು ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಒಪ್ಪಿಕೊಳ್ಳದಿರುವ ಬಗ್ಗೆ ಪ್ರತಿಕ್ರಿಯಿಸಿದ ಕೌರ್, “ಪ್ರಾಮಾಣಿಕ ವ್ಯಕ್ತಿಯನ್ನು ದೀರ್ಘಕಾಲ ತಡೆಯಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಇದನ್ನು ಓದಿ: ಅಕ್ರಮ ಮರಳುಗಾರಿಕೆ ಪ್ರಕರಣ: ಸಿಎಂ ಚರಂಜಿತ್ ಚನ್ನಿ ಸೋದರಳಿಯ ಭೂಪಿಂದರ್ ಹನಿಗೆ 14 ದಿನ ನ್ಯಾಯಾಂಗ ಬಂಧನ!
ಎಎನ್‌ಐ ಜೊತೆ ಮಾತನಾಡಿದ ರಬಿಯಾ ಕೌರ್, “ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ಕಾಂಗ್ರೆಸ್ ಹೈಕಮಾಂಡ್ ಕೆಲವು ಬಲವಂತದ ನಿರ್ಧಾರ ತೆಗೆದುಕೊಂಡಿರಬಹುದು. ನಾನು ಆ ಬಗ್ಗೆ ಮಾತನಾಡುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ವಿರುದ್ಧ ವಾಗ್ದಾಳಿ ನಡೆಸಿದ ಸಿಧು ಪುತ್ರಿ, ಪ್ರಾಮಾಣಿಕ ವ್ಯಕ್ತಿ ಮತ್ತು ಭ್ರಷ್ಟರ ನಡುವೆ ಯಾವುದೇ ಹೋಲಿಕೆ ಇಲ್ಲ. “ಒಬ್ಬ ಮಗಳಾಗಿ ನಾನು ಹೇಳಲು ಬಯಸುತ್ತೇನೆ, ಅವರು(ನವಜೋತ್ ಸಿಂಗ್ ಸಿದ್ದು) ಪಂಜಾಬ್ ಚುನಾವಣೆಗೆ ಮುಖ್ಯಮಂತ್ರಿಯ ಅಭ್ಯರ್ಥಿಯಾಗದಿದ್ದರೂ ಪರವಾಗಿಲ್ಲ ಅವರ ಇಮೇಜ್ ಸ್ಪಷ್ಟವಾಗಿದೆ. ಅವರು ಒಂದು ದಿನ ದೊಡ್ಡ ಕೆಲಸ ಮಾಡುತ್ತಾರೆ. ಅವರಿಗೆ ಯಾವುದೇ ಕಳಂಕವಿಲ್ಲ” ಎಂದಿದ್ದಾರೆ.
Read more
[wpas_products keywords=”deal of the day”]