Karnataka news paper

ಧರ್ಮ ಕೀರ್ತಿರಾಜ್ ‘ಖಡಕ್‌’ಗೆ ಸಾಥ್ ನೀಡಿದ ನಾಗತಿಹಳ್ಳಿ ಚಂದ್ರಶೇಖರ್ & ವಿನೋದ್ ಪ್ರಭಾಕರ್‌


ನಟ ಧರ್ಮ ಕೀರ್ತಿರಾಜ್‌ (Dharma Keerthiraj) ಅವರು ಕ್ಯಾಡ್ಬರೀಸ್ ಅಂತಾನೇ ಕರೆಯುತ್ತಾರೆ. ಕಾರಣ, ‘ನವಗ್ರಹ’ ಸಿನಿಮಾದಲ್ಲಿ ಅವರಿಗೆ ಇದ್ದಂತಹ ಹೆಸರೇ ಅದು. ಆದರೆ, ‘ಕ್ಯಾಡ್ಬರೀಸ್‌’ ಧರ್ಮ ಈಗ ಬದಲಾಗಿದ್ದಾರೆ. ‘ಖಡಕ್’ ಆಗಿ ಖಾಕಿ ತೊಟ್ಟು ಅಬ್ಬರಿಸಿದ್ದಾರೆ. ಹೌದು, ಧರ್ಮ ಕೀರ್ತಿರಾಜ್‌ ಹೊಸ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದು, ಆ ಸಿನಿಮಾಗೆ ‘ಖಡಕ್’ ಅಂತ ಶೀರ್ಷಿಕೆ ಇಡಲಾಗಿದೆ. ಈಚೆಗೆ ಈ ಸಿನಿಮಾದ ಸಾಂಗ್ ರಿಲೀಸ್ ಆಗಿದೆ. ಕಾರ್ಯಕ್ರಮಕ್ಕೆ ನಟ ವಿನೋದ್ ಪ್ರಭಾಕರ್‌, ಪ್ರಥಮ್ (Pratham) ಮತ್ತು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಆಗಮಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಈ ವೇಳೆ ಮಾತನಾಡಿದ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ‘ಚಿತ್ರರಂಗ ಕೊರೊನಾ ಸಮಯದಲ್ಲಿ ಸಾಕಷ್ಟು ನಷ್ಟ ಅನುಭವಿಸಿದೆ. ಈಗ ಮತ್ತೆ ಚಿತ್ರರಂಗದ ಚಟುವಟಿಕೆಗಳು ಗರಿಗೆದರುತ್ತಿದೆ. ಈ ಸಿನಿಮಾದ ನಿರ್ಮಾಪಕ ವಲ್ಲಿ ನನ್ನ ಅನೇಕ ಚಿತ್ರಗಳಿಗೆ ವಸ್ತ್ರಾಲಂಕಾರ ಮಾಡಿದ್ದಾರೆ. ತಾವು ಚಿತ್ರರಂಗದಲ್ಲಿ ದುಡಿದ ದುಡ್ಡನ್ನು ಮತ್ತೆ ಚಿತ್ರರಂಗಕ್ಕೆ ಹಾಕುತ್ತಿದ್ದಾರೆ. ಅವರ ಈ ಕಾರ್ಯ ನಿಜಕ್ಕೂ ಮೆಚ್ಚುವಂಥದ್ದು’ ಎಂದು ಹಾರೈಸಿದರು.

ಹಾಗೆಯೇ, ನಟ ವಿನೋದ್ ಪ್ರಭಾಕರ್ ಕೂಡ ತಮ್ಮ ಸ್ನೇಹಿತನ ಸಿನಿಮಾಕ್ಕೆ ಹಾರೈಸಿದರು. ‘ಟ್ರೇಲರ್ ಹಾಗೂ ಹಾಡುಗಳು ಚೆನ್ನಾಗಿದೆ. ನನ್ನ ಹಾಗೂ ಧರ್ಮನ ಸ್ನೇಹ ತುಂಬಾ ವರ್ಷಗಳದ್ದು. ನಾನು ಇಲ್ಲಿಗೆ ಬರಲು ಆ ಸ್ನೇಹವೇ ಕಾರಣ. ಇಡೀ ತಂಡಕ್ಕೆ ಒಳ್ಳೆಯದಾಗಲಿ’ ಎಂದರು. ‘ಬಿಗ್ ಬಾಸ್’ ಖ್ಯಾತಿಯ ನಟ/ನಿರ್ದೇಶಕ ಪ್ರಥಮ್ ಕೂಡ ಚಿತ್ರತಂಡಕ್ಕೆ ಹಾರೈಸಿದರು.

ನಿಮಿಕಾ ರತ್ನಾಕರ್ ಚಳಿಯಲ್ಲಿಯೂ ಸೀರೆಯಲ್ಲಿಯೇ ‘ಸುಮನ್’ ಶೂಟಿಂಗ್‌ನಲ್ಲಿ ಭಾಗವಹಿಸಿದ್ರು: ನಟ ಧರ್ಮ ಕೀರ್ತಿರಾಜ್

‘ಇದೊಂದು ಆಕ್ಷನ್ ಥ್ರಿಲ್ಲರ್ ಚಿತ್ರ. ಇದೇ ಮೊದಲ ಬಾರಿ ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ ನೋಡಿ, ಹಾರೈಸಿ’ ಎಂದರು ನಾಯಕ ಧರ್ಮ ಕೀರ್ತಿರಾಜ್. ಇನ್ನು, ಧರ್ಮಗೆ ನಾಯಕಿಯಾಗಿ ಅನುಷಾ ರೈ ಕಾಣಿಸಿಕೊಂಡಿದ್ದಾರೆ. ಚಿತ್ರದ ಹಾಡುಗಳಿಗೆ ಸಂಗೀತವನ್ನು ಎಂ.ಎನ್. ಕೃಪಾಕರ್ ನೀಡಿದ್ದಾರೆ. ನಂದಿನಿ ಕಂಬೈನ್ಸ್ ಮೂಲಕ ವಲ್ಲಿ ಹಾಗೂ ಸಿದ್ದರಾಮಯ್ಯ ಸಿಂಗಾಪುರ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಟಿ.ಎನ್ ನಾಗೇಶ್ ನಿರ್ದೇಶಿಸಿದ್ದಾರೆ. ಶಂಕರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಬಹುಭಾಷಾ ನಟರಾದ ಕಬೀರ್ ದುಹಾನ್ ಸಿಂಗ್, ಸುಮನ್, ಕಮಲ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಧರ್ಮ ಕೀರ್ತಿರಾಜ್, ನಿಮಿಕಾ ರತ್ನಾಕರ್ ‘ಸುಮನ್’ ಸಿನಿಮಾದಲ್ಲಿ ನಟಿಯರಾದ ರಜನಿ ಭಾರದ್ವಾಜ್, ಜೈಲಿನ್ ಗಣಪತಿ



Read more

[wpas_products keywords=”deal of the day party wear dress for women stylish indian”]