ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿತು. ಕ್ಯಾಪ್ಟನ್ ಹಾಗೂ ರೋಹಿತ್ ಶರ್ಮಾ 13 ರನ್ ಗಳಿಸಿ ಅಲ್ಝಾರಿ ಜೋಸೆಫ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರೆ, ಇದರ ಬೆನ್ನಲ್ಲೇ ಜೋಸೆಫ್ ಎದುರು ಲೆಗ್ ಸ್ಟಂಪ್ ಮೇಲಿದ್ದ ಚೆಂಡನ್ನು ಫ್ಲಿಕ್ ಮಾಡಲು ಪ್ರಯತ್ನಿಸಿದ ಕೊಹ್ಲಿ ವಿಕೆಟ್‌ಕೀಪರ್ ಶೇಯ್ ಹೋಲ್‌ಗೆ ಕ್ಯಾಚಿತ್ತು ನಿರಾಶೆ ಅನುಭವಿಸಿದರು.
ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಒಟ್ಟು 26 ರನ್ ಮಾತ್ರವೇ ಗಳಿಸಿದ್ದ ವಿರಾಟ್ ಕೊಹ್ಲಿ, ಅಂತಿಮ ಪಂದ್ಯದಲ್ಲಿ ಅಬ್ಬರಿಸುತ್ತಾರೆ ಎಂದೇ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ, ಎರಡು ಎಸೆತಗಳಲ್ಲಿ ಸೊನ್ನೆ ಸುತ್ತಿತ್ತಿದ ಕೊಹ್ಲಿ ಪೆವಿಲಿಯನ್ ಸೇರುತ್ತಿದ್ದಂತೆಯೇ ಟ್ವಿಟರ್ ಮೂಲಕ ಅಸಮಾಧಾನ ಹೊರಹಾಕಿದ ಫ್ಯಾನ್ಸ್, ಕೊಹ್ಲಿಗೆ ವಿಶ್ರಾಂತಿ ಅಗತ್ಯವಿದೆ ಎಂದಿದ್ದಾರೆ.
‘ಇದು ಕೆಚ್ಚೆದೆಯ ನಿರ್ಧಾರ’ ರೋಹಿತ್ ನಿರ್ಧಾರಕ್ಕೆ ಕಾರ್ತಿಕ್ ಮೆಚ್ಚುಗೆ!
ಕಳೆದ 5 ಒಡಿಐಗಳಲ್ಲಿ 2ನೇ ಡಕ್
ತಮ್ಮ ವೃತ್ತಿ ಬದುಕಿನ ಅತ್ಯಂತ ಕಳಪೆ ಕಾಲಘಟ್ಟದಲ್ಲಿರುವ ವಿರಾಟ್ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ ಆಡಿದ ಕಳೆದ 5 ಪಂದ್ಯಗಳಲ್ಲಿ ಎರಡು ಬಾರಿ ಡಕ್‌ಔಟ್ ಆಗಿದ್ದಾರೆ. ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕೊಹ್ಲಿ ಸ್ಪಿನ್ನರ್ ಕೇಶವ್ ಮಹಾರಾಜ್ ಎದುರು ಗೋಲ್ಡನ್ ಡಕ್ ಆಗಿದ್ದರು. ಭಾರತ ತಂಡ ಈಗ ವಿಂಡೀಸ್ ಎದುರು 3 ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯನ್ನಾಡಲಿದ್ದು, ಕೊಹ್ಲಿ ಇಲ್ಲಾದರೂ ಯಶಸ್ಸು ಗಳಿಸುತ್ತಾರೆಯೇ? ಕಾದು ನೋಡಬೇಕಿದೆ.
ಅಂದಹಾಗೆ 33 ವರ್ಷದ ಅನುಭವಿ ಬ್ಯಾಟ್ಸ್‌ಮನ್ ಕೊಹ್ಲಿ ಕಳೆದ ವರ್ಷ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್‌ಗೂ ಮುನ್ನ ಭಾರತ ಟಿ20 ತಂಡದ ನಾಯಕತ್ವ ಬಿಟ್ಟರು. ಇದಾದ ಬಳಿಕ ಭಾರತೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಅನಗತ್ಯ ವಿವಾದಗಳು ಭುಗಿಲೆದ್ದಿದೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವುದು ಬಹಿರಂಗವಾದಂತ್ತಿದೆ. ಇನ್ನು ಟಿ20 ತಂಡದ ನಾಯಕತ್ವ ಬಿಟ್ಟ ಕೊಹ್ಲಿಗೆ ಒಡಿಐ ತಂಡದ ನಾಯಕತ್ವ ಕಳೆದುಕೊಳ್ಳುವಂತ್ತಾಯಿತು. ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ನಂತರ ಟೆಸ್ಟ್ ಕ್ರಿಕೆಟ್ ನಾಯಕತ್ವಕ್ಕೂ ಕೊಹ್ಲಿ ರಾಜೀನಾಮೆ ನೀಡಿದರು.
‘ಡಕ್ ಆಗಲಿ 100 ಆಗಲಿ ನಿಮ್ಮ ಮೇಲೆ ವಿಶ್ವಾಸವಿದೆ ವಿರಾಟ್ ಕೊಹ್ಲಿ’
‘ವಿರಾಟ್ ಕೊಹ್ಲಿ ಅವರನ್ನು ದಿಂಡಾ ಮತ್ತು ಅಫ್ರಿದಿ ಡಕ್ ಔಟ್ ಅಕಾಡೆಮಿಗೆ ಸ್ವಾಗತಿಸುತ್ತೇವೆ’.
‘ಬ್ರೆಕ್ ಅಪ್ ಆದರೆ ಬಹಳಾ ನೋವಾಗುತ್ತದೆ. ಆದರೆ ಇದು ಕೊಂದೇ ಬಿಡುತ್ತದೆ’.
‘ಇದು ತಾತ್ಕಾಲಿಕ ಅಷ್ಟೇ. ಎಲ್ಲರಿಗೂ ಗೊತ್ತಿದೆ ಕಿಂಗ್ ಕೊಹ್ಲಿ ಯಾರೆಂದು’.
Read more
[wpas_products keywords=”deal of the day gym”]