Karnataka news paper

2 ದಿನಗಳಲ್ಲಿ ರಾಜ್ಯ 18 ಲಕ್ಷ ರೈತರಿಗೆ ಹೆಚ್ಚುವರಿ ಇನ್‌ಪುಟ್ ಸಬ್ಸಿಡಿ


The New Indian Express

ಬೆಂಗಳೂರು: ಇನ್ನೆರಡು ದಿನಗಳಲ್ಲಿ ರಾಜ್ಯ ಸರ್ಕಾರವು ಬೆಳೆ ನಷ್ಟ ಪರಿಹಾರದ ಇನ್‌ಪುಟ್ ಸಬ್ಸಿಡಿಯ ಹೆಚ್ಚುವರಿ ಮೊತ್ತವನ್ನು ನೇರವಾಗಿ 18.02 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳೆ ನಷ್ಟ ಪರಿಹಾರಕ್ಕೆ ಇನ್‌ಪುಟ್ ಸಬ್ಸಿಡಿಯನ್ನು ಹೆಚ್ಚಿಸುವುದಾಗಿ ಘೋಷಿಸಿದ್ದರು. 

NDRF ನಿಯಮಗಳ ಪ್ರಕಾರ, ಒಣ ಭೂಮಿಯಲ್ಲಿನ ಬೆಳೆ ನಷ್ಟಕ್ಕೆ ಹೆಕ್ಟೇರ್‌ಗೆ 6,800 ರೂ.ಗಳನ್ನು ನಿಗದಿಪಡಿಸಲಾಗಿದೆ ಮತ್ತು ಅದನ್ನು 13,600 ರೂ.ಗೆ ಹೆಚ್ಚಿಸಲಾಗಿದೆ. ನೀರಾವರಿ ಭೂಮಿಗೆ ಪ್ರತಿ ಹೆಕ್ಟೇರ್‌ಗೆ 13,500 ರೂ.ನಿಂದ 25,000 ರೂ.ಗೆ ಮತ್ತು ತೋಟಗಾರಿಕೆ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ 18,000 ರೂ.ನಿಂದ 28,000 ರೂ.ಗೆ ಹೆಚ್ಚಿಸಲಾಗಿದೆ. 

ಇದನ್ನೂ ಓದಿ: ಬಂಜರು ಭೂಮಿಯನ್ನು ಕೊಳಗಳಾಗಿ ಪರಿವರ್ತಿಸಿ ಮೀನುಗಾರಿಕೆ: ಇತರರಿಗೆ ಮಾದರಿಯಾದ ಬಸಾಪುರದ ರೈತ!

ರಾಜ್ಯ ಸರ್ಕಾರವು ಈ ಹಿಂದೆ 1252.89 ಕೋಟಿ ರೂ.ಗಳನ್ನು 18.02 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದ್ದು, ರೂ. 1135.49 ಕೋಟಿ ಮೊತ್ತವನ್ನು ಮುಂದಿನ ಎರಡು ದಿನಗಳಲ್ಲಿ ಜಮಾ ಮಾಡಲಿದೆ. ಒಟ್ಟಾರೆಯಾಗಿ, 2021-22 ರಲ್ಲಿ ಬೆಳೆ ನಷ್ಟ ಪರಿಹಾರಕ್ಕಾಗಿ ಸರ್ಕಾರವು ರೂ 2,388.39 ಕೋಟಿ ಇನ್ಪುಟ್ ಸಬ್ಸಿಡಿಯನ್ನು ಬಿಡುಗಡೆ ಮಾಡಿದಂತಾಗುತ್ತದೆ.

ಕಳೆದ ವರ್ಷ ಜುಲೈ, ಆಗಸ್ಟ್, ಅಕ್ಟೋಬರ್ ಮತ್ತು ನವೆಂಬರ್’ನಲ್ಲಿ ಸುರಿದ ಭಾರೀ ಮಳೆಯು ರಾಜ್ಯದಲ್ಲಿ ಸಾಕಷ್ಟು ಬೆಳೆಗಳಿಗೆ ಹಾನಿಯುಂಟು ಮಾಡಿತ್ತು. 



Read more

[wpas_products keywords=”deal of the day”]