Karnataka news paper

ವಲಸೆ ಕಾರ್ಮಿಕರಿಗೆ ಆಹಾರ, ವಸತಿ ನೀಡುವುದು ತಪ್ಪೇ?: ಮೋದಿ ವಿರುದ್ಧ ಶಿವಸೇನಾ ನಾಯಕಿ ವಾಗ್ದಾಳಿ


PTI

ನವದೆಹಲಿ: ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಮುಂಬೈನಿಂದ ವಲಸೆ ಕಾರ್ಮಿಕರು ಪಲಾಯನ ಮಾಡಲು ಪ್ರತಿಪಕ್ಷಗಳು “ಪ್ರಚೋದನೆ” ನೀಡಿದವು ಎಂದು ಆರೋಪಿಸಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರು, ಲಾಕ್ ಡೌನ್ ನಲ್ಲಿ ಸಿಲುಕಿದ್ದವರನ್ನು ನೋಡಿಕೊಳ್ಳುವುದು ತಪ್ಪು ಎಂದರೆ ಆ ತಪ್ಪನ್ನು “100” ಬಾರಿ ಮಾಡುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.

ಕೊರೋನಾ ವೈರಸ್ ಹರಡುವುದನ್ನು ತಡೆಯಲು ಲಾಕ್‌ಡೌನ್ ಘೋಷಿಸುವ ನಾಲ್ಕು ಗಂಟೆಗಳ ಮೊದಲು, ರೈಲುಗಳು ಮತ್ತು ಅಂತರರಾಜ್ಯ ಪ್ರಯಾಣವನ್ನು ನಿಲ್ಲಿಸಲಾಯಿತು. ಇದರಿಂದ ವಲಸೆ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದರು ಎಂದು ಶಿವಸೇನಾ ನಾಯಕಿ ಹೇಳಿದ್ದಾರೆ.

ಇದನ್ನು ಓದಿ: ನಗರ ನಕ್ಸಲೀಯರ ಹಿಡಿತದಲ್ಲಿ ಕಾಂಗ್ರೆಸ್: ಸಂಸತ್ತಿನಲ್ಲಿ ಪ್ರಧಾನಿ ಮೋದಿ ಭಾಷಣ

“ವಲಸಿಗರು, ಪ್ರಮುಖವಾಗಿ ದೈನಂದಿನ ಕೂಲಿ ಕಾರ್ಮಿಕರು ಲಾಕ್ ಡೌನ್ ನಲ್ಲಿ ಸಿಲುಕಿದ್ದರು. ಆಹಾರ ಮತ್ತು ವಸತಿಯೊಂದಿಗೆ ಅವರನ್ನು ನೋಡಿಕೊಳ್ಳುವುದು ಪ್ರಧಾನಿಯ ದೃಷ್ಟಿಯಲ್ಲಿ ತಪ್ಪಾಗಿದ್ದರೆ(ನಾವು) ಈ ತಪ್ಪನ್ನು 100 ಪಟ್ಟು ಹೆಚ್ಚು ಮಾಡುತ್ತೇವೆ… ಮಾನವೀಯತೆಗಾಗಿ” ಎಂದು ಪ್ರಿಯಾಂಕಾ ಚದುರ್ವೇದಿ ಅವರು ಟ್ವೀಟ್ ಮಾಡಿದ್ದಾರೆ.

ಶ್ರಮಿಕ್ ರೈಲುಗಳು ಪ್ರಾರಂಭವಾದ ಸಮಯವನ್ನು ದೇಶ ಮರೆಯಲು ಸಾಧ್ಯವೇ ಎಂದು ಚತುರ್ವೇದಿ ಪ್ರಶ್ನಿಸಿದ್ದಾರೆ. ಅಲ್ಲದೆ ಕೆಲಸ, ಆದಾಯವಿಲ್ಲದೆ ಲಾಕ್ ಡೌನ್ ನಲ್ಲಿ ಸಿಲುಕಿದ್ದ ಬಡ ಕಾರ್ಮಿಕರ ಪ್ರಯಾಣಕ್ಕೆ ಶುಲ್ಕ ವಿಧಿಸಲಾಯಿತು. ಅಂದು ಕಾರ್ಮಿಕರ ಪ್ರಯಾಣ ದರವನ್ನು ಪಾವತಿಸಲು ರಾಜ್ಯ ಸರ್ಕಾರಗಳೇ ಮುಂದಾದವು ಎಂದಿದ್ದಾರೆ.

“ಪ್ರಧಾನಿಯವರ ದೃಷ್ಟಿಯಲ್ಲಿ ಇದು ತಪ್ಪಾಗಿದ್ದರೆ, ನಾವು ಈ ತಪ್ಪನ್ನು 100 ಬಾರಿ ಮಾಡಲು ಸಿದ್ಧರಿದ್ದೇವೆ” ಎಂದು ಅವರು ಶಿವಸೇನಾ ನಾಯಕಿ ಹೇಳಿದ್ದಾರೆ.



Read more

[wpas_products keywords=”deal of the day”]