Source : ANI
ನವದೆಹಲಿ: ಟೀಂ ಇಂಡಿಯಾದ ಏಕದಿನ ತಂಡದ ನಾಯಕತ್ವದಿಂದ ತೆಗೆದುಹಾಕಿದ ನಂತರ ಇದೇ ಮೊದಲ ಬಾರಿಗೆ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿರುವ ವಿರಾಟ್ ಕೊಹ್ಲಿ ಆಯ್ಕೆ ಸಮಿತಿಯ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಏಕದಿನ ತಂಡದ ನಾಯಕತ್ವದಿಂದ ವಜಾಗೊಳಿಸುವ ಮೊದಲು ತಮ್ಮ ಮತ್ತು ಆಯ್ಕೆಗಾರರ ನಡುವೆ ಯಾವುದೇ ಪೂರ್ವ ಸಂವಹನ ಇರಲಿಲ್ಲ. ರೋಹಿತ್ ಶರ್ಮಾ ಅವರನ್ನು ಕಳೆದ ವಾರ ಭಾರತದ ನೂತನ ಏಕದಿನ ನಾಯಕರನ್ನಾಗಿ ನೇಮಿಸಲಾಯಿತು ಮತ್ತು ದಕ್ಷಿಣ ಆಫ್ರಿಕಾ ಸರಣಿಗೆ ಭಾರತ ಸಿದ್ಧವಾಗುತ್ತಿದ್ದಂತೆ ಕೊಹ್ಲಿಯಿಂದ ಅಧಿಕಾರ ವಹಿಸಿಕೊಂಡರು.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಸರಣಿಗೂ ಮೊದಲೇ ಟೀಂ ಇಂಡಿಯಾಗೆ ಆಘಾತ: ರೋಹಿತ್ ಶರ್ಮಾ ಟೂರ್ನಿಯಿಂದಲೇ ಔಟ್
ಟೆಸ್ಟ್ ಸರಣಿಗಾಗಿ 8ರಂದು ನಡೆಯುವ ಆಯ್ಕೆ ಸಭೆಗೂ ಒಂದೂವರೆ ಗಂಟೆ ಮೊದಲು ನನ್ನನ್ನು ಸಂಪರ್ಕಿಸಲಾಗಿತ್ತು. T20I ನಾಯಕತ್ವಕ್ಕೆ ರಾಜಿನಾಮೆ ನಿರ್ಧಾರವನ್ನು ಘೋಷಿಸಿದ ನಂತರ ಡಿಸೆಂಬರ್ 8ರವರೆಗೆ ನನ್ನೊಂದಿಗೆ ಯಾವುದೇ ಪೂರ್ವ ಸಂವಹನ ಇರಲಿಲ್ಲ. ಮುಖ್ಯ ಆಯ್ಕೆದಾರರು ಟೆಸ್ಟ್ ತಂಡವನ್ನು ಚರ್ಚಿಸಿದರು. ಅದನ್ನು ನಾವಿಬ್ಬರೂ ಒಪ್ಪಿಕೊಂಡಿದ್ದೇವೆ. ಆದರೆ ಕರೆಯ ಕೊನೆಯಲ್ಲಿ ಐವರು ಆಯ್ಕೆಗಾರರು ನಾನು ಏಕದಿನ ನಾಯಕನಾಗುವುದಿಲ್ಲ ಎಂದು ನಿರ್ಧರಿಸಿದ್ದಾರೆ ಎಂದು ನನಗೆ ತಿಳಿಸಲಾಯಿತು. ಅದಕ್ಕೆ ನಾನು ‘ಸರಿ’ ಎಂದು ಉತ್ತರಿಸಿದೆ ಎಂದು ಅವರು ಹೇಳಿದರು.
ಡಿಸೆಂಬರ್ 26ರಿಂದ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.