Karnataka news paper

ಕೋವಿಡ್-19: ಕೊಡಗಿನಲ್ಲಿ ಕೋವ್ಯಾಕ್ಸಿನ್ ಲಸಿಕೆ ಕೊರತೆ


The New Indian Express

ಮಡಿಕೇರಿ: ಕೋವಿಡ್ ಲಸಿಕೆ ಅಭಿಯಾನದಲ್ಲಿ ಶೇ.92ರಷ್ಟು ಗುರಿ ತಲುಪಿರುವ ಕೊಡಗು ಜಿಲ್ಲೆಯಲ್ಲಿ ಇದೀಗ ಕೋವ್ಯಾಕ್ಸಿನ್ ಲಸಿಕೆ ಕೊರತೆ ಎದುರಾಗಿದೆ ಎಂದು ತಿಳಿದುಬಂದಿದೆ. 

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಮೊದಲ ಮತ್ತು ಎರಡನೇ ಡೋಸ್ ಲಸಿಕೆಯಲ್ಲಿ ಶೇ.100ರಷ್ಟು ಗುರಿ ಸಾಧಿಸಿ, ಬೂಸ್ಟರ್ ಡೋಸ್ ಹಾಗೂ 15-17 ವರ್ಷ ವಯಸ್ಸಿನ ವಿದ್ಯಾರ್ಥಿಗಳಿಗೆ ಮೊದಲ ಡೋಸ್ ಲಸಿಕೆ ಪೂರ್ಣಗೊಳಿಸುವ ಗುರಿ ಸಾಧನೆಯತ್ತ ಕಾರ್ಯ ಸಾಧಿಸುತ್ತಿವೆ. 

ಇದನ್ನೂ ಓದಿ: ರಾಜ್ಯದ ಶೇ.90ರಷ್ಟು ಜನರಿಗೆ ಎರಡೂ ಡೋಸ್ ಲಸಿಕೆ ಪೂರ್ಣ: ಸಚಿವ ಡಾ. ಕೆ.ಸುಧಾಕರ್

ಜಿಲ್ಲೆಯಲ್ಲಿ, ಒಟ್ಟು 34,000 ನಿವಾಸಿಗಳು ಎರಡನೇ ಡೋಸ್ ಲಸಿಕೆಯನ್ನು ಪಡೆದುಕೊಳ್ಳಬೇಕಿದ್ದು, ಹಿರಿಯ ನಾಗರೀಕರಿಗೆ ಬೂಸ್ಟರ್ ಡೋಸ್ ನೀಡಬೇಕಿದೆ. ಇದೀಗ ಕೋವ್ಯಾಕ್ಸಿನ್ ಲಸಿಕೆ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ 2ನೇ ಡೋಸ್ ಲಸಿಕೆ ಅಭಿಯಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಆರ್‌ಸಿಎಚ್ ಅಧಿಕಾರಿ ಡಾ ಗೋಪಿನಾಥ್ ಅವರು ಹೇಳಿದ್ದಾರೆ. 

ಬೂಸ್ಟರ್ ಡೋಸ್ ಮತ್ತು ಎರಡನೇ ಡೋಸ್ ತೆಗೆದುಕೊಳ್ಳಬೇಕಾದ ಸಾಕಷ್ಟು ಜನರಲ್ಲಿ ಕೋವಿಡ್ ಪಾಸಿಟಿವ್ ಬಂದಿರುವುದು ಕಂಡು ಬಂದಿದೆ. ಇದೂ ಕೂಡ ಲಸಿಕೆ ಅಭಿಯಾನವನ್ನು ವಿಳಂಬವಾಗುವಂತೆ ಮಾಡುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವಲ್ಲೂ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಹೋರಾಟಗಾರರು ಮತ್ತು ಹಿರಿಯ ನಾಗರೀಕರು ಸೇರಿದಂತೆ ಇಲ್ಲಿಯವರೆಗೂ 13,000 ಹೆಚ್ಚು ಜನರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ: ಕೋವಿಡ್ ಲಸಿಕಾಕರಣ: ಶೇ.100ರಷ್ಟು ಗುರಿ ಸಾಧಿಸಿದ ರಾಜ್ಯದ ಎರಡನೇ ಜಿಲ್ಲೆ ವಿಜಯಪುರ!

ಏತನ್ಮಧ್ಯೆ, ಇಲಾಖೆಯು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳೊಂದಿಗೆ ಬೂಸ್ಟರ್ ತೆಗೆದುಕೊಳ್ಳಬೇಕಾದ ನಿವಾಸಿಗಳ ಕುರಿತು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದು, ಫಲಾನುಭವಿಗಳು ಲಸಿಕೆ ಪಡೆದುಕೊಳ್ಳುವಂತೆ ಪ್ರತೀನಿತ್ಯ 800-1,000 ದೂರವಾಣಿ ಕರೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.



Read more

[wpas_products keywords=”deal of the day”]