Karnataka news paper

Hijab Row: ಹಿಜಾಬ್ ವಿವಾದದ ಬಗ್ಗೆ ಹೈಕೋರ್ಟ್ ನೀಡಿದ ಆದೇಶದಲ್ಲಿ ಏನಿದೆ?: ಪೂರ್ಣ ವಿವರ ಬಹಿರಂಗ


ಬೆಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಗುರುವಾರ ನೀಡಿದ್ದ ಮಧ್ಯಂತರ ಮೌಖಿಕ ಆದೇಶದ ಅಧಿಕೃತ ವಿವರ ಶುಕ್ರವಾರ ಹೊರಬಿದ್ದಿದೆ. ಹಿಜಾಬ್ ವಿವಾದ ಪ್ರಕರಣದಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ಆರಂಭಿಸಿದ್ದ ಮೂವರು ಸದಸ್ಯರ ವಿಸ್ತೃತ ಪೀಠ, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತ್ತು. ಈ ಸಂದರ್ಭದಲ್ಲಿ, ವಿದ್ಯಾರ್ಥಿಗಳು ಸಮವಸ್ತ್ರದ ಹೊರತಾದ ಧಾರ್ಮಿಕ ಗುರುತು ಪ್ರದರ್ಶಿಸುವ ಉಡುಪು ಧರಿಸಿ ತರಗತಿಗೆ ಹೋಗುವಂತಿಲ್ಲ ಎಂದು ಮೌಖಿಕವಾಗಿ ಮಧ್ಯಂತರ ಆದೇಶ ನೀಡಿತ್ತು. ಆದರೆ, ಈ ಬಗ್ಗೆ ಅಧಿಕೃತ ಆದೇಶ ಈವರೆಗೂ ಲಭ್ಯವಾಗಿರಲಿಲ್ಲ.

ನಮ್ಮದು ನಾಗರಿಕ ಸಮಾಜವಾಗಿ, ಯಾವುದೇ ವ್ಯಕ್ತಿಯು ಧರ್ಮ, ಸಂಸ್ಕೃತಿ ಅಥವಾ ಅದರ ರೀತಿಯ ಚಟುವಟಿಕೆಗಳ ಹೆಸರಿನಲ್ಲಿ ಸಾರ್ವಜನಿಕ ಶಾಂತಿ ಹಾಗೂ ನೆಮ್ಮದಿ ಕದಡುವ ಯಾವುದೇ ಕೃತ್ಯ ನಡೆಸಲು ಅವಕಾಶವಿಲ್ಲ ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
Hijab Row ವಿಚಾರಣೆ ಅಂತ್ಯದವರೆಗೂ ಧಾರ್ಮಿಕ ಉಡುಪು ಧರಿಸುವಂತಿಲ್ಲ: ಹೈಕೋರ್ಟ್ ಮಧ್ಯಂತರ ಆದೇಶ

ಮುಖ್ಯವಾಗಿ, ಪ್ರಸ್ತುತ ಕೆಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಮುಚ್ಚವ ಕ್ರಮಗಳಿಂದ ನಮಗೆ ನೋವಾಗಿದೆ. ನಮ್ಮದು ಬಹುತ್ವ ಸಂಸ್ಕೃತಿ, ಧರ್ಮಗಳು ಮತ್ತು ಭಾಷೆಗಳ ದೇಶ ಎಂದು ಉಲ್ಲೇಖಿಸಬೇಕಾಗುತ್ತದೆ. ಜಾತ್ಯತೀತ ದೇಶವಾಗಿ, ಇದು ಯಾವುದೇ ಧರ್ಮದೊಂದಿಗೆ ತನ್ನನ್ನು ಗುರುತಿಸಿಕೊಳ್ಳುವುದಿಲ್ಲ. ಪ್ರತಿ ನಾಗರಿಕರಿಗೂ ತಮ್ಮ ಆಯ್ಕೆಯ ಯಾವುದೇ ನಂಬಿಕೆಯನ್ನು ಅಳವಡಿಸಲು ಮತ್ತು ಅನುಸರಿಸಲು ಹಕ್ಕು ಇದೆ. ಇದು ನಿಜ. ಆದರೆ, ಅಂತಹ ಹಕ್ಕುಗಳು ಭಾರತ ಸಂವಿಧಾನ ನೀಡಿರುವ ನಿರ್ಬಂಧಗಳಿಗೆ ಒಳಪಡುತ್ತವೆ. ತರಗತಿಯಲ್ಲಿ ಹಿಜಾಬ್ ಧರಿಸುವುದು ಸಾಂವಿಧಾನಿಕ ಖಾತರಿಗಳ ವ್ಯಾಪ್ತಿಯಲ್ಲಿನ ಇಸ್ಲಾಂ ಧರ್ಮದ ಅಗತ್ಯ ಆಚರಣೆ ಎನ್ನುವುದು ಆಳವಾದ ಪರಿಶೀಲನೆಗೆ ಒಳಪಡಬೇಕಾಗುತ್ತದೆ. ಸುಪ್ರೀಂಕೋರ್ಟ್ ಮತ್ತು ಇತರೆ ಹೈಕೋರ್ಟ್‌ಗಳ ಕೆಲವು ತೀರ್ಪುಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಹೇಳಿದೆ.

ತಡೆಯಿಲ್ಲದ ಪ್ರತಿಭಟನೆಗಳು ಮತ್ತು ಅನಿರ್ದಿಷ್ಟಾವಧಿಗೆ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವಂತಹ ಘಟನೆಗಳು ಖುಷಿಯ ಸಂಗತಿಗಳಲ್ಲ. ಈ ಪ್ರಕರಣಗಳ ತುರ್ತು ಆಧಾರದ ವಿಚಾರಣೆ ಮುಂದುವರಿಯಲಿದೆ. ಉನ್ನತ ಅಧ್ಯಯನ/ ಕೋರ್ಸ್‌ಗಳಿಗೆ ಪ್ರವೇಶಾತಿಯ ಕಾಲಮಿತಿಗಳು ಕಡ್ಡಾಯವಾಗಿರುವಾಗ ಶೈಕ್ಷಣಿಕ ವ್ಯಾಖ್ಯಾನಗಳು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನವನ್ನು ದೀರ್ಘಕಾಲದವರೆಗೆ ನಿರ್ಣಯಿಸುತ್ತವೆ. ಪ್ರತಿಭಟನೆಗಳ ಮುಂದುವರಿಯುವಿಕೆ ಮತ್ತು ಸಂಸ್ಥೆಗಳ ಮುಚ್ಚುವಿಕೆಗಿಂತ ತರಗತಿಗೆಗಳಿಗೆ ಮರಳುವುದು ವಿದ್ಯಾರ್ಥಿಗಳ ಹಿತಾಸಕ್ತಿಗೆ ಪೂರಕವಾಗಲಿದೆ. ಈ ಶೈಕ್ಷಣಿಕ ವರ್ಷವು ಶೀಘ್ರದಲ್ಲಿಯೇ ಅಂತ್ಯಗೊಳ್ಳಲಿದೆ. ಎಲ್ಲ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಶಾಂತಿ ಹಾಗೂ ಸೌಹಾರ್ದತೆ ಕಾಪಾಡಲಿದ್ದಾರೆ ಎಂದು ಆಶಿಸುತ್ತೇವೆ ಹಾಗೂ ನಂಬುತ್ತೇವೆ ಎಂದು ತಿಳಿಸಿದೆ.
Hijab Row: ಹಿಜಾಬ್ ವಿವಾದ: ಕರ್ನಾಟಕ ಹೈಕೋರ್ಟ್ ವಿಚಾರಣೆಯಲ್ಲಿ ಮಧ್ಯಪ್ರವೇಶಕ್ಕೆ ಸುಪ್ರೀಂ ನಕಾರ

ಶಿಕ್ಷಣ ಸಂಸ್ಥೆಗಳನ್ನು ಮರು ತೆರೆಯಲು ಹಾಗೂ ಆದಷ್ಟು ಬೇಗನೆ ವಿದ್ಯಾರ್ಥಿಗಳು ತಮ್ಮ ತರಗತಿಗಳಿಗೆ ಮರಳಲು ಅವಕಾಶ ನೀಡುವಂತೆ ರಾಜ್ಯ ಸರ್ಕಾರ ಮತ್ತು ಇತರೆ ಎಲ್ಲ ಜನರಿಗೆ ನಾವು ಮನವಿ ಮಾಡುತ್ತೇವೆ. ಈ ಎಲ್ಲ ಅರ್ಜಿಗಳು ಬಾಕಿ ಇದ್ದು, ಎಲ್ಲ ವಿದ್ಯಾರ್ಥಿಗಳು ತಮ್ಮ ಧರ್ಮ ಅಥವಾ ನಂಬಿಕೆಗಳು ಏನೇ ಇದ್ದರೂ, ಶಾಲುಗಳು ಸ್ಕಾರ್ಫ್, ಹಿಜಾಬ್, ಧಾರ್ಮಿಕ ಬಾವುಟ ಅಥವಾ ಅದರ ರೀತಿಯ ಯಾವುದನ್ನೂ ತರಗತಿಯ ಒಳಗೆ ಮುಂದಿನ ಆದೇಶದವರೆಗೆ ಬಳಸುವುದನ್ನು ನಿರ್ಬಂಧಿಸುತ್ತೇವೆ ಎಂದು ಹೇಳಿದೆ.

ಕಾಲೇಜು ಅಭಿವೃದ್ಧಿ ಸಮಿತಿಗಳಂತಹ ಸಂಸ್ಥೆಗಳಿಗೆ ಸಂಬಂಧಿಸಿದಂತಹ ಸೂಚಿತ ವಿದ್ಯಾರ್ಥಿಗಳ ವಸ್ತ್ರ ಸಂಹಿತೆ/ ಸಮವಸ್ತ್ರವನ್ನು ಧರಿಸುವಂತೆ ಆದೇಶ ಸೂಚಿಸುತ್ತದೆ ಎಂದು ತಿಳಿಸಿದೆ.



Read more

[wpas_products keywords=”deal of the day sale today offer all”]