ವಿಧಾನಸೌಧದಲ್ಲಿ ಮಾತನಾಡಿದ ಅವರು, ಜಿ.ಪಂ, ತಾ.ಪಂ ಚುನಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಎಸ್ ಟಿ ಎಸ್ ಸಿಗಳಿಗೆ ಮಾತ್ರ ಮೀಸಲಾತಿ ಅನ್ವಯ ಎಂದು ನ್ಯಾಯಾಲಯದ ಆದೇಶ ಆಗಿರುವುದರಿಂದ ಹಿಂದುಳಿದ ವರ್ಗಗಳ ಮೀಸಲಾತಿ ಗೊಂದಲದ ಹಿನ್ನೆಲೆಯಲ್ಲಿ ಚುನಾವಣೆ ನಮ್ಮ ಕಾಲಾವಧಿಯಲ್ಲಿ ನಡೆಯುವ ಸಾಧ್ಯತೆ ಇಲ್ಲ ಎಂದು ಕೆ.ಎಸ್ ಈಶ್ವರಪ್ಪ ಪರೋಕ್ಷವಾಗಿ ಹೇಳಿದರು.
ಚುನಾವಣೆ ನಡೆಸೋಕೆ ನಾವು ಹಿಂದೇಟು ಹಾಕುತ್ತಿಲ್ಲ. ಚುನಾವಣಾ ಆಯೋಗ ಕ್ಷೇತ್ರ ಪುನರ್ವಿಂಗಡನೆ ಹಾಗೂ ಮೀಸಲಾತಿ ಬಗ್ಗೆ ಘೋಷಣೆಯನ್ನು ಮಾಡಿದೆ. ಆದರೆ ಮೀಸಲಾತಿ ಹಾಗೂ ಕ್ಷೇತ್ರ ಪುನರ್ ವಿಂಗಡಣೆ ಬಗ್ಗೆ 780 ಆಕ್ಷೇಪಗಳು ಬಂದವು. ಆ ಕಾರಣಕ್ಕಾಗಿ ಬಿಲ್ ತರಲಾಯಿತು. ಲಕ್ಷ್ಮೀನಾರಾಯಣ್ ನೇತೃತ್ವದಲ್ಲಿ ಕಮಿಟಿ ಮಾಡಿದ್ದೆವು. ಈಗ ಸುಪ್ರೀಂ ಕೋರ್ಟ್ ಆದೇಶ ಬಂದಿದೆ. ಇದರ ಪ್ರಕಾರ ಎಸ್ಸಿ, ಎಸ್ಟಿಗೆ ಮಾತ್ರ ಮೀಸಲಾತಿ ಅನ್ವಯ ಎಂದಿದೆ. ಈ ನಿಟ್ಟಿನಲ್ಲಿ ಒಬಿಸಿಗಳಿಗೆ ಮೀಸಲಾತಿ ಕೊಡುವಂತಿಲ್ಲ. ಒಬಿಸಿ ಕೂಡ ಸಾಮಾನ್ಯ ಕೆಟಗರಿಯಲ್ಲಿ ಬರಲಿದೆ. ನಮಗೆ ಚುನಾವಣೆ ಮಾಡಲು ಆಸೆ. ಈಗಲೂ ಚುನಾವಣೆ ನಡೆದರೆ ನಮಗೆ ಹೆಚ್ಚು ಸ್ಥಾನ ಸಿಗಲಿದೆ. ಓಬಿಸಿ ಮೀಸಲಾತಿ ಬಿಟ್ಟು ಚುನಾವಣೆ ಮಾಡಲು ಸಾಧ್ಯನಾ? ಎಂದು ಪ್ರಶ್ನಿಸಿದರು.
ಈ ಬಗ್ಗೆ ಸಿಎಂ ಹಾಗೂ ತಜ್ಞರ ಜೊತೆಗೂ ಮಾತನಾಡುತ್ತೇನೆ. ಕಾನೂನು ಬದ್ಧವಾಗಿ ಚುನಾವಣೆ ನಡೆಯಬೇಕು ಎಂದು ನಾವು ಬಯಸುತ್ತೇವೆ. ತಜ್ಞರ ಸಮಿತಿ ಮತ್ತೆ ನೇಮಕ ಮಾಡಿದರೆ ನಮ್ಮ ಅವಧಿಯಲ್ಲಿ ಚುನಾವಣೆ ಆಗಲ್ಲ. ಸುಪ್ರೀಂ ಕೋರ್ಟ್ ಆದೇಶ ಮೀರಿ ಚುನಾವಣೆ ಮಾಡಲು ಹೋದರೆ ಒಬಿಸಿಗೆ ಅನ್ಯಾಯವಾಗಲಿದೆ. ಒಬಿಸಿಗೆ ಅನ್ಯಾಯ ಆಗಲು ನಾವು ಬಿಡುವುದಿಲ್ಲ. ಹಾಗೆ ಮಾಡಿದರೆ ಯಾರಾದರೂ ನ್ಯಾಯಾಲಯಕ್ಕೆ ಹೋದರೆ ಎಷ್ಟು ವರ್ಷ ಚುನಾವಣೆ ಮುಂದೂಡಲ್ಪಡುತ್ತೊ ಗೊತ್ತಿಲ್ಲ? ಎಂದರು.
Read more
[wpas_products keywords=”deal of the day sale today offer all”]