Karnataka news paper

ಹಿಜಾಬ್ ವಿವಾದ: ತಮ್ಮ ಹಕ್ಕಿಗಾಗಿ ಹೋರಾಡುತ್ತಿರುವ ಸಹೋದರಿಯರು ಹೋರಾಟದಲ್ಲಿ ಯಶಸ್ವಿಯಾಗಲಿ- ಓವೈಸಿ


Online Desk

ಲಖನೌ: ಕರ್ನಾಟಕದಲ್ಲಿ ‘ಹಿಜಾಬ್ ವಿವಾದ’ ಉಲ್ಬಣಗೊಳ್ಳುತ್ತಿರುವ ಬೆನ್ನಲ್ಲೇ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ನಾಯಕ ಅಸಾದುದ್ದೀನ್ ಓವೈಸಿ ಜನರು ತಮ್ಮ ಮೇಲೆ ‘ದ್ವೇಷ ಸಾಧಿಸುವ ಮತ್ತು ಗುಂಡಿನ ದಾಳಿ ನಡೆಸುವವರ ವಿರುದ್ಧ ನಿಲ್ಲಬೇಕು’ ಎಂದು ಕರೆ ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ಪ್ರಕರಣ ಸಂವಿಧಾನದ 15, 19 ಮತ್ತು 21 ನೇ ವಿಧಿಯ ಗಂಭೀರ ಉಲ್ಲಂಘನೆಯಾಗಿದೆ ಎಂದು ಹೇಳಿದರು.

“ಗಡ್ಡ ಮತ್ತು ಟೋಪಿಯೊಂದಿಗೆ ಸಂಸತ್ತಿಗೆ ಹೋಗಬಹುದಾದರೆ, ಮುಸ್ಲಿಂ ಹುಡುಗಿಯರು ಹಿಜಾಬ್ ಅಥವಾ ನಿಖಾಬ್ ಧರಿಸಿ ಶಾಲೆಗೆ ಏಕೆ ಹೋಗಬಾರದು?” ಎಂದು ಪ್ರಶ್ನಿಸಿದ ಅಸಾದುದ್ದೀನ್ ಓವೈಸಿಯು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವನ್ನು ಖಂಡಿಸಿದರು.

ಇದನ್ನೂ ಓದಿ: ಮಂಡ್ಯದಲ್ಲಿ ‘ಜೈ ಶ್ರೀರಾಮ್’ ಎಂದ ಹುಡುಗರೆದುರು ಸಿಟ್ಟಿಗೆದ್ದು ‘ಅಲ್ಲಾ ಹು ಅಕ್ಬರ್’ ಎಂದ ವಿದ್ಯಾರ್ಥಿನಿ: ಸ್ಥಳದಲ್ಲಿ ಕೆಲ ಕಾಲ ಉದ್ನಿಗ್ನ ವಾತಾವರಣ ಸೃಷ್ಟಿ

ಮುಂದುವರೆದು, ಹಿಜಾಬ್ ಧರಿಸುವ ಹಕ್ಕಿಗಾಗಿ ಹೋರಾಡುತ್ತಿರುವ ನಮ್ಮ ಸಹೋದರಿಯರು ತಮ್ಮ ಹೋರಾಟದಲ್ಲಿ ಯಶಸ್ವಿಯಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಕರ್ನಾಟಕದಲ್ಲಿ ಸಂವಿಧಾನದ 15, 19 ಮತ್ತು 21ರ ಘೋರ ಉಲ್ಲಂಘನೆಯಾಗುತ್ತಿದೆ. ಕರ್ನಾಟಕದ ಬಿಜೆಪಿ ಸರ್ಕಾರದ ಈ ನಿರ್ಧಾರವನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದರು.

ರಾಜ್ಯದಲ್ಲಿನ ಪರಿಸ್ಥಿತಿ:
ಕೆಲವು ಜಿಲ್ಲೆಗಳಲ್ಲಿ ಹಿಜಾಬ್ ವಿವಾದದ ಕಾವು ಹೆಚ್ಚಾಗಿದ್ದು, ಉಡುಪಿ, ಶಿವಮೊಗ್ಗ, ಬಾಗಲಕೋಟೆ ಮತ್ತು ಇತರ ಪ್ರದೇಶಗಳಲ್ಲಿನ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಬಿಗುವಿನ ವಾತಾವರಣ ಮುಂದುವರೆದಿದೆ. ಆದ ಕಾರಣ ರಾಜ್ಯಸರ್ಕಾರ ಮೂರು ದಿನಗಳ ಕಾಲ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಶಿವಮೊಗ್ಗದಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ. ಇನ್ನು ವರದಿಗಳ ಪ್ರಕಾರ, ದಾವಣಗೆರೆ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂಸಾತ್ಮಕ ಘಟನೆಯಲ್ಲಿ ಹಲವಾರು ಪೊಲೀಸರು ಮತ್ತು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಹಲವು ದ್ವಿಚಕ್ರ ವಾಹನಗಳು ಜಖಂಗೊಂಡಿದ್ದು, ಎಲ್ಲಾ ಸೂಕ್ಷ್ಮ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.



Read more

[wpas_products keywords=”deal of the day”]