Source : The New Indian Express
ನಿರ್ದೇಶಕ ಸಂತೋಷ್ ಕೊಡೆನ್ಕೇರಿ ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ ಎಂಬ ಸಿನಿಮಾದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.
ರಂಗಮಂದಿರದ ಏಕವ್ಯಕ್ತಿ ಪ್ರದರ್ಶನಗಳಿಂದ ಈ ಪ್ರಯೋಗವನ್ನು ಅಳವಡಿಸಿಕೊಂಡಿದ್ದು, ಒಬ್ಬನೇ ನಟ ಹಲವು ಪಾತ್ರಗಳಲ್ಲಿ ಅಭಿನಯಿಸಿರುವುದು ವಿಶೇಷವಾಗಿದೆ.
ರವೀಂದ್ರನಾಥ್ ಠಾಗೂರ್ ಅವರ ಕಾದಂಬರಿ ಆಧಾರಿತ ಸಿನಿಮಾ ಇದಾಗಿದ್ದು, ರಂಗಭೂಮಿ ಕಲಾವಿದರಾದ ಯೋಗೇಶ್ ಮಾಸ್ಟರ್ 24 ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಈ ಸಿನಿಮಾ ಕಥೆ ಯೋಗೇಶ್ ಮಾಸ್ಟರ್ ಅವರ 20 ವರ್ಷಗಳ ಹಳೆಯ ನಾಟಕವಾಗಿದ್ದು, ಸಿನಿಮಾವನ್ನಾಗಿ ಪರಿವರ್ತಿಸಲಾಗಿದೆ ಎನ್ನುತ್ತಾರೆ ನಿರ್ದೇಶಕ
ವರ್ಲ್ಡ್ ಸಿನಿಮಾ ವಿಭಾಗಕ್ಕೆ ಇದನ್ನು ಸೇರಿಸಬಹುದಾಗಿದೆ ಎನ್ನುವ ಸಂತೋಶ್ ಕೊಡೆನ್ಕೇರಿ ಅವರು ವಿನ್ಯಾಸಗೊಳಿಸಿ, ದೃಷ್ಟಿ ಎಂಬ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣವನ್ನೂ ಮಾಡಿದ್ದಾರೆ.
ದಕ್ಷಿಣ ಕನ್ನಡ ಮೂಲದವರಾಗಿರುವ ನಿರ್ದೇಶಕ ತಮ್ಮ ವೃತ್ತಿ ಜೀವನವನ್ನು ಪ್ರೊಡಕ್ಷನ್ ಡಿಸೈನರ್ ಆಗಿ ಪ್ರಾರಂಭಿಸಿದರು. ಜಾಹಿರಾತು, ಕಾರ್ಪೊರೇಟ್ ಸಿನಿಮಾ ಹಾಗೂ ಡಾಕ್ಯುಮೆಂಟರಿ ಸಿನಿಮಾಗಳನ್ನು ನಿರ್ದೇಶಿಸಿ ಅನುಭವ ಹೊಂದಿರುವ ಸಂತೋಷ್, ಹೋಮ್ ಸ್ಟೇ (2016ರಲ್ಲಿ) ಎಂಬ ಫೀಚರ್ ಸಿನಿಮಾದ ಮೂಲಕ ನಿರ್ದೇಶನವನ್ನು ಪ್ರಾರಂಭಿಸಿದರು. ಈ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. 2 ನಟರು ಹಾಗೂ 13 ಸಿಬ್ಬಂದಿಗಳೊಂದಿಗೆ ತಯಾರಿಸಲಾಗಿದ್ದ ಅನಿರೀಕ್ಷಿತ ಸಿನಿಮಾಗೆ ಇವರು ಕ್ರಿಯೇಟೀವ್, ತಾಂತ್ರಿಕ ನಿರ್ದೇಶಕ, ಸಹ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ.
ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ ಸಿನಿಮಾದಲ್ಲಿ 12 ಹಾಡುಗಳಿದ್ದು, ಯೋಗೇಶ್ ಮಾಸ್ಟರ್ ಸಂಯೋಜಿಸಿರುವ ಸಂಗೀತಕ್ಕೆ ಚಿಂತನ್ ವಿಕಾಸ್ ಹಿನ್ನೆಲೆ ಗಾಯನವಿದೆ. ಜೀವನ್ ಗೌಡ ಅವರ ಸಿನಿಮೆಟೊಗ್ರಾಫಿ ಇದ್ದು, ಶೀಘ್ರವೇ ಹೆಚ್ಚಿನ ಮಾಹಿತಿ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.
ಈ ಸಿನಿಮಾ ಈಗಾಗಲೇ ಹಲವು ವೇದಿಕೆಗಳಲ್ಲಿ 15 ಪ್ರಶಸ್ತಿಗಳನ್ನು ಪಡೆದಿದ್ದು, ವಿವಿಧ ಆನ್ ಲೈನ್ ಅಂತಾರಾಷ್ಟ್ರೀಯ ಸಿನಿಮಾ ಉತ್ಸವಗಳಲ್ಲಿ ಪ್ರದರ್ಶನಗೊಂಡು ಹಲವು ಪ್ರಶಸ್ತಿಗಳನ್ನು ಗೆದ್ದಿದೆ ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ.