Karnataka news paper

ಪ್ರಧಾನಿ ಕಾಂಗ್ರೆಸ್ ಗೆ ಹೆದರಿದ್ದಾರೆ: ಸಂಸತ್ ನಲ್ಲಿ ನರೇಂದ್ರ ಮೋದಿ ವಾಗ್ದಾಳಿ ಬಗ್ಗೆ ರಾಹುಲ್


The New Indian Express

ಕಾಂಗ್ರೆಸ್ ಸತ್ಯವನ್ನು ಹೇಳುತ್ತದೆ. ಆದ್ದರಿಂದ ಪ್ರಧಾನಿ ಕಾಂಗ್ರೆಸ್ ಗೆ ಹೆದರಿದ್ದಾರೆ. ಆದ್ದರಿಂದಲೇ ಸಂಸತ್ ನ ಉಭಯ ಸದನಗಳಲ್ಲಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. 

ಇನ್ನು ಪ್ರಧಾನಿ ಮೋದಿ ಕಾಂಗ್ರೆಸ್, ಜವಾಹರ್ ಲಾಲ್ ನೆಹರು ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರ ಬಗ್ಗೆಯೂ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದು, ನನ್ನ ಅಜ್ಜ ನೆಹರು ಅವರಿಗೆ ಯಾರೂ ಪ್ರಮಾಣಪತ್ರ ನೀಡುವುದು ಬೇಕಾಗಿಲ್ಲ. ಅವರ ಬಗ್ಗೆ ಯಾರು ಏನು ಹೇಳುತ್ತಾರೆ ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ರಾಹುಲ್ ತಿಳಿಸಿದ್ದಾರೆ. 

ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಮಾತನಾಡಿದ್ದ ಪ್ರಧಾನಿ ಮೋದಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ ಮಹಾತ್ಮಾ ಗಾಂಧಿ ಕಾಂಗ್ರೆಸ್ ನ್ನು ವಿಸರ್ಜಿಸಬೇಕು ಎಂಬ ಸಂಕಲ್ಪ ಹೊಂದಿದ್ದರು. ಕಾಂಗ್ರೆಸ್ ಇರದೇ ಇದ್ದಿದ್ದರೆ ಏನು ಎಂಬ ಪ್ರಶ್ನೆ ಕೇಳಲಾಗುತ್ತದೆ. ಕಾಂಗ್ರೆಸ್ ಇರದೇ ಇದ್ದಿದ್ದರೆ ತುರ್ತು ಪರಿಸ್ಥಿತಿ ಇರುತ್ತಿರಲಿಲ್ಲ. ಸಿಖ್ ನರಮೇಧ ನಡೆಯುತ್ತಿರಲಿಲ್ಲ. ಕಾಶ್ಮೀರದಿಂದ ಪಂಡಿತರು ಓಡಿ ಹೋಗುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ಛಾಟಿ ಬೀಸಿದ್ದರು.

ಇದನ್ನೂ ಓದಿ: “ಕುರುಡು ವಿರೋಧ”ದಲ್ಲಿ ತೊಡಗಿದ ಕಾಂಗ್ರೆಸ್ ಚುನಾವಣೆಗಳಲ್ಲಿ ಸೋತರೂ ಅಹಂಕಾರ ಮಾತ್ರ ಕಡಿಮೆಯಾಗಿಲ್ಲ: ಪ್ರಧಾನಿ ಮೋದಿ
 
ಕುಟುಂಬ ರಾಜಕಾರಣ ಹೊಂದಿರುವ ಪಕ್ಷಗಳು ಭಾರತದ ಪ್ರಜಾಪ್ರಭುತ್ವಕ್ಕೆ ಮಾರಕ ಎಂದಿದ್ದ ಪ್ರಧಾನಿ ಮೋದಿ ನೆಹರು ತಮ್ಮ ಜಾಗತಿಕ ಮಟ್ಟದ ಇಮೇಜ್ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದರು. ಗೋವಾ ವಿಮೋಚನೆಗಾಗಿ ಕೆಲಸ ಮಾಡುತ್ತಿದ್ದ ರಾಮ್ ಮನೋಹರ್ ಲೋಹಿಯಾ ನೇತೃತ್ವದ ಸತ್ಯಾಗ್ರಹಿಗಳ ನೆರವಿಗೆ ಸೇನೆ ಕಳಿಸಲು ನಿರಾಕರಿಸಿದ್ದರು ಎಂದು ವಾಗ್ದಾಳಿ ನಡೆಸಿದ್ದರು.



Read more

[wpas_products keywords=”deal of the day”]