ಹೂಡಿಕೆದಾರರು ಅಮೆರಿಕದ ಹೆಚ್ಚಿನ ಹಣದುಬ್ಬರದ ಬೆಂಕಿಯಲ್ಲಿ ಬೇಯುತ್ತಿದ್ದಾರೆ. ಆದರೆ ಜುಲೈ ವೇಳೆ 100 ಮೂಲ ಅಂಕ ಏರಿಕೆಯಾಗಲಿಕ್ಕಿಲ್ಲ ಎಂದುಕೊಳ್ಳಲಾಗಿದೆ.
ಅಮೆರಿಕದ ಅಂಕಿ-ಅಂಶಗಳ ಬೆನ್ನಿಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ನೆಚ್ಚಿನ ಷೇರುಗಳಾದ ಐಟಿ ಮತ್ತು ಹಣಕಾಸು ಸಂಸ್ಥೆಗಳ ಷೇರುಗಳಲ್ಲಾದ ಭಾರೀ ಕುಸಿತವೇ ಸೆನ್ಸೆಕ್ಸ್ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಇವುಗಳ ಜತೆಗೆ ಹೊಸ ತಲೆಮಾರಿನ ಕಂಪನಿಗಳೂ ಭಾರೀ ನಷ್ಟ ಅನುಭವಿಸಿದ್ದು ಸೆನ್ಸೆಕ್ಸ್ ಭಾರೀ ಕುಸಿತಕ್ಕೀಡಾಗುವಂತೆ ಮಾಡಿದೆ.
ಇನ್ಫೋಸಿಸ್, ವಿಪ್ರೋ, ಟೆಕ್ ಮಹೀಂದ್ರಾ ಮತ್ತು ಎಚ್‌ಸಿಎಲ್ ಟೆಕ್ ಸೆನ್ಸೆಕ್ಸ್‌ನಲ್ಲಿ ಭಾರೀ ನಷ್ಟ ಅನುಭವಿಸಿದ ಷೇರುಗಳಾಗಿದ್ದು ಶೇ. 2.5ರಷ್ಟು ಕುಸಿತ ಕಂಡಿವೆ. ಎಚ್‌ಡಿಎಫ್‌ಸಿ ಶೇ. 1.63ರಷ್ಟು ಇಳಿಕೆ ಕಂಡು 2,436 ರೂ. ತಲುಪಿದ್ದರೆ, ಬಜಾಜ್ ಫಿನ್‌ಸರ್ವ್ ಷೇರುಗಳು ಶೇ. 1.55 ನಷ್ಟ ಅನುಭವಿಸಿ 16,134ಕ್ಕೆ ಕುಸಿದಿವೆ. ಕೋಟಕ್ ಬಹೀಂದ್ರಾ ಬ್ಯಾಂಕ್, ಬಜಾಜ್ ಫೈನಾನ್ಸ್, ಐಸಿಐಸಿಐ ಬ್ಯಾಂಕ್, ಎಂ&ಎಂ, ಟಿಸಿಎಸ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಶೇ. 1ರಷ್ಟು ಮುಗ್ಗರಿಸಿವೆ.
11 ಗಂಟೆ ವೇಳೆಗೆ ಬಿಎಸ್‌ಇ ಸೆನ್ಸೆಕ್ಸ್ 954 ಅಂಕ ಅಥವಾ ಶೇ. 1.62ರಷ್ಟು ಕುಸಿತದೊಂದಿಗೆ 57,972 ಮಟ್ಟದಲ್ಲಿ ವಹಿವಾಟು ನಡೆಸುತ್ತಿತ್ತು. ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕ 282 ಅಂಕ ಅಥವಾ ಶೇ. 1.60ರಷ್ಟು ಕುಸಿತ ಕಂಡು 17,323ರಲ್ಲಿ ವಹಿವಾಟು ಮುಂದುವರಿಸಿತ್ತು. ಪ್ರಮುಖ ಅಮೆರಿಕ ಸೂಚ್ಯಂಕಗಳು ರಾತೋರಾತ್ರಿ ಶೇ. 2ರಷ್ಟು ಕುಸಿತ ಕಂಡಿವೆ.
ವಿಶ್ಲೇಷಕರು ಬುಲ್ಲಾರ್ಡ್ ಅವರ ನಾಟಕೀಯ ಧ್ವನಿಯ ಬಗ್ಗೆ ಯಾವುದೇ ಅಚ್ಚರಿ ವ್ಯಕ್ತಪಡಿಸಿಲ್ಲ. “ಬುಲ್ಲಾರ್ಡ್ ಪ್ರತಿಕ್ರಿಯೆಗಳು ನಮ್ಮ ದೃಷ್ಟಿಕೋನಕ್ಕೆ ಅನುಗುಣವಾಗಿವೆ. ಫೆಡ್ 2022ರ ಮೊದಲಾರ್ಧದಲ್ಲಿ ಬಡ್ಡಿ ದರವನ್ನು ಏರಿಕೆ ಮಾಡಲಿದ್ದು, ಹಣದುಬ್ಬರ ಮತ್ತು ಬೆಳವಣಿಗೆ ನಿಧಾನವಾಗುತ್ತಿದ್ದಂತೆ ನಂತರ ವಿರಾಮ ತೆಗೆದುಕೊಳ್ಳಲಿದೆ,” ಎಂದು ವಿದೇಶಿ ಬ್ರೋಕರೇಜ್ ಸಂಸ್ಥೆ ನೊಮುರಾ ಹೇಳಿದೆ.
ಮಾರ್ಚ್‌ನಲ್ಲಿ 50 ಮೂಲ ಅಂಕ ಹೆಚ್ಚಳವಾಗಲಿದೆ ಎಂದು ನೊಮುರಾ ಹೇಳಿದ್ದು, ನಂತರ ಮೇ, ಜೂನ್ ಮತ್ತು ಜುಲೈನಲ್ಲಿ ಸತತ ಮೂರು ಬಾರಿ 25 ಮೂಲ ಅಂಕ ಏರಿಕೆಯಾಗಲಿದೆ ಎಂದು ಸಂಸ್ಥೆ ಹೇಳಿದೆ. ಐದು ತಿಂಗಳ ವಿರಾಮದ ನಂತರ 2022ರ ಡಿಸೆಂಬರ್‌ನಲ್ಲಿ ಮತ್ತು 2023ರ ಜೂನ್ ಮತ್ತು ಡಿಸೆಂಬರ್‌ನಲ್ಲಿ 25 ಮೂಲ ಅಂಕ ಹೆಚ್ಚಳವನ್ನೂ ಸಂಸ್ಥೆ ಅಂದಾಜಿಸಿದೆ.
ಹೊಸ ತಲೆಮಾರಿನ ಕಂಪನಿಗಳಾದ ಜೊಮ್ಯಾಟೋ ಷೇರುಗಳು ಶುಕ್ರವಾರ ಶೇ. 5.6ರಷ್ಟು ಕುಸಿತ ಕಂಡಿದ್ದು 89.20 ರೂ.ಗೆ ಇಳಿಕೆಯಾಗಿದ್ದಾರೆ. ಪಿಬಿ ಫಿನ್‌ಟೆಕ್ ಶೇ. 6.5 ರಷ್ಟು ಕುಸಿತದೊಂದಿಗೆ 810.50 ರೂ.ಗೆ ತಲುಪಿವೆ. ನೈಕಾ ಷೇರುಗಳು ಶೇ. 1.2 ರಷ್ಟು ಕುಸಿದು 1,692 ರೂ.ಗೆ ಹಾಗೂ ಪೇಟಿಎಂ ಷೇರುಗಳು ಶೇ. 1 ರಷ್ಟು ನಷ್ಟ ಅನುಭವಿಸಿದ್ದು 929.50 ರೂ.ಗೆ ಇಳಿಕೆಯಾಗಿವೆ.
ಅಮೆರಿಕದ ಹಣದುಬ್ಬರದ ಜತೆಗೆ ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಧಾನಕ್ಕೆ ಜರ್ಮನ್ ನಡೆಸಿದ್ದ ಪ್ರಯತ್ನಗಳೂ ವಿಫಲವಾಗಿರುವುದು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಯಾವುದೇ ಕ್ಷಣದಲ್ಲಿ ಅಪಾಯ ಸಂಭವಿಸಬಹುದು ಎಂದು ಅಮೆರಿಕ ಸ್ಪಷ್ಟ ಎಚ್ಚರಿಕೆ ನೀಡಿದ್ದು, ತನ್ನ ದೇಶದ ನಾಗರಿಕರಿಗೆ ಉಕ್ರೇನ್ ಬಿಡುವಂತೆ ಸೂಚನೆ ನೀಡಿದೆ. ಹೀಗಾಗಿ ಉಕ್ರೇನ್ ಬಿಕ್ಕಟ್ಟು ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
ವಾಣಿಜ್ಯ ಕ್ಷೇತ್ರದ 20 ಕ್ಕೂ ಹೆಚ್ಚು ವಲಯಗಳಿಗೆ ಸಂಬಂಧಿಸಿದ ಅತ್ಯುತ್ತಮ ಲೇಖನಗಳು ಮತ್ತು ಉದ್ಯಮಕ್ಕೆ ಸಂಬಂಧಿಸಿದ ಆಳವಾದ ಮಾಹಿತಿಗಾಗಿ ನೀವು ಎಕನಾಮಿಕ್ ಟೈಮ್ಸ್ ಓದಬಹುದು. ಮಾಹಿತಿಯುಕ್ತ ಲೇಖನಗಳನ್ನು ಓದಲು ಎಕನಾಮಿಕ್ ಟೈಮ್ಸ್ ಇಲ್ಲಿ ಕ್ಲಿಕ್ ಮಾಡಿ.
Read more
[wpas_products keywords=”deal of the day sale today offer all”]