Karnataka news paper

ವೇದಿಕೆಯಿಂದಲೇ ಅಭಿಮಾನಿಗಳತ್ತ ನಿಂಬೆ ಹಣ್ಣು ಉರುಳಿ ಬಿಟ್ಟ ಎಚ್‌ಡಿ ರೇವಣ್ಣ!


ಹಾಸನ: ಮಾಜಿ ಸಚಿವ ಎಚ್‌.ಡಿ ರೇವಣ್ಣ ಹಾಗೂ ನಿಂಬೆಹಣ್ಣಿಗೂ ಅವಿನಾಭಾವ ಸಂಬಂಧ ಇದೆ ಎಂದರೆ ತಪ್ಪೇನಿಲ್ಲ. ಬಹುತೇಕ ಎಲ್ಲ ಸಂದರ್ಭದಲ್ಲೂ ಅವರ ಬಳಿ ನಿಂಬೆಹಣ್ಣು ಇದ್ದೇ ಇರುತ್ತದೆ. ಇಂದು ನಡೆದ ಸಮಾರಂಭವೊಂದರಲ್ಲೂ ಒಂದಲ್ಲ ಹಲವು ನಿಂಬೆಹಣ್ಣುಗಳಿನ್ನು ಹಿಡಿದುಕೊಂಡು ಬಂದಿದ್ದ ಎಚ್‌ಡಿ ರೇವಣ್ಣ, ಅವುಗಳನ್ನು ಕಾರ್ಯಕರ್ತರ ಕಡೆಗೆ ಉರುಳಿಸಿದ ಘಟನೆ ನಡೆದಿದೆ.

ಕಾರ್ಯಕ್ರಮದಲ್ಲಿ ಶಾಸಕ ಶಿವಲಿಂಗೇಗೌಡರು ರೇವಣ್ಣಗೆ ಒಂದಷ್ಟು ನಿಂಬೆಹಣ್ಣುಗಳನ್ನು ಕೊಟ್ಟರು. ಆ ನಿಂಬೆಹಣ್ಣುಗಳನ್ನು ರೇವಣ್ಣ ಒಂದೊಂದಾಗಿ ಅಭಿಮಾನಿಗಳತ್ತ ಎಸೆದಿದ್ದು, ಅದನ್ನು ಅಭಿಮಾನಿಗಳು ಸಂಭ್ರಮದಿಂದಲೇ ಸ್ವೀಕರಿಸಿದ್ದಾರೆ. ಈ ವೇಳೆ ಮಾತನಾಡಿದ ಎಚ್‌ಡಿ ರೇವಣ್ಣ, ಚುನಾವಣೆ ಸಂದರ್ಭದಲ್ಲಿ ತಮ್ಮ ಹಿಂದಿರುವ ದೇವರ ಕುರಿತು ಕೂಡ ಇದೇ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನೇ ಬರ್ತೇನೆ: ಕುಮಾರಸ್ವಾಮಿ ರಾಜಕೀಯ ದಾಳ
‘ಮಾವಿನಕೆರೆ ಬೆಟ್ಟದ ರಂಗನಾಥ ಸ್ವಾಮಿಯನ್ನು ನಂಬಿ ಕೆಟ್ಟವರಿಲ್ಲ. ಹಿಂದೆ ದೇವೇಗೌಡರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ಕೈ ತಪ್ಪಿದಾಗ ಬೆಳಗ್ಗಿನ ಜಾವ ಮೂರು ಗಂಟೆಯಲ್ಲಿ ರಂಗನಾಥ ಸ್ವಾಮಿ ಕನಸಲ್ಲಿ ಬಂದು ಅರ್ಜಿ ಹಾಕು ಅಂತ ಹೇಳಿದರು. ರಂಗನಾಥ ಸ್ವಾಮಿ ಆಜ್ಞೆ ನಂತರವೇ ದೇವೇಗೌಡರು ಚುನಾವಣೆಗೆ ನಿಂತು ಗೆದ್ದಿದ್ದು, ಪ್ರತಿ ಚುನಾವಣೆಯಲ್ಲೂ ರಂಗನಾಥ ಸ್ವಾಮಿ ಬೆಟ್ಟದಲ್ಲಿ ಅರ್ಜಿಯನ್ನು ಪೂಜಿಸಿ ನಂತರವೇ ಚುನಾವಣೆಗೆ ಹೋಗುವುದು ಪದ್ಧತಿ. ಒಮ್ಮೆ ರಂಗನಾಥ ಸ್ವಾಮಿಗೆ ಅರ್ಜಿ ಇಟ್ಟು ಪೂಜಿಸದೇ ಹೋದಾಗ ಆ ಸಲ ನಾವು ಸೋತೆವು ಎಂದು ರೇವಣ್ಣ ರಹಸ್ಯವೊಂದನ್ನು ಸಭೆಯಲ್ಲಿ ಬಿಚ್ಚಿಟ್ಟರು.

ಹಾಸನ ಜಿಲ್ಲೆ ಅರಸೀಕೆರೆ ನಾಗರಹಳ್ಳಿ ತಿರುಮಲ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ. ರೇವಣ್ಣ, ಅರಸೀಕೆಗೆ ಶಾಸಕ ಶಿವಲಿಂಗೇಗೌಡ ಸೇರಿ ಹಲವರು ಭಾಗಿಯಾಗಿದ್ದರು.



Read more

[wpas_products keywords=”deal of the day sale today offer all”]