Karnataka news paper

ನಮ್ಮ ಮದುವೆ ಯಾವಾಗ? ಆಲಿಯಾ ಭಟ್ ಬಳಿ ರಣಬೀರ್ ಕಪೂರ್ ಪ್ರಶ್ನೆ


ಬೆಂಗಳೂರು: ‘ನಮ್ಮ ಮದುವೆ ಯಾವಾಗ?‘ ಈ ಪ್ರಶ್ನೆಯನ್ನು ಆಲಿಯಾ ಭಟ್ ಬಳಿ ಕೇಳಿದ್ದು ರಣಬೀರ್ ಕಪೂರ್!

ಬ್ರಹ್ಮಾಸ್ತ್ರ ಚಿತ್ರದ ಮೋಷನ್‌ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಆಲಿಯಾ ಬಳಿ ರಣಬೀರ್ ಹೀಗೆ ಕೇಳಿದ್ದಾರೆ. ಅದಕ್ಕೆ ಆಲಿಯಾ, ನನ್ನನ್ನು ಯಾಕೆ ಹೀಗೆ ಕೇಳುತ್ತಿದ್ದೀರಾ ಎಂದಿದ್ದಾರೆ.

ಲಾಕ್‌ಡೌನ್ ತೆರವಿನ ಬಳಿಕ ಸಾಲುಸಾಲು ಮದುವೆಗಳು ನಡೆಯುತ್ತಿವೆ. ಅದರಲ್ಲೂ ಈ ವರ್ಷ ಬಾಲಿವುಡ್‌ನಲ್ಲಿ ನಡೆಯುತ್ತಿರುವ ಮದುವೆಗಳು ಹೆಚ್ಚು ಸುದ್ದಿ ಮಾಡುತ್ತಿವೆ.

ಇದೇ ಸಂದರ್ಭದಲ್ಲಿ ಸಿನಿಮಾ ಸಮಾರಂಭದಲ್ಲಿ ಆಲಿಯಾ–ರಣಬೀರ್ ಬಳಿಯೂ ಕಾರ್ಯಕ್ರಮ ನಡೆಸುವವರು ಮದುವೆ ಕುರಿತು ಪ್ರಶ್ನೆ ಕೇಳಿದ್ದಾರೆ.

ಬಹಳಷ್ಟು ಸೆಲೆಬ್ರಿಟಿಗಳು ಮದುವೆಯಾಗುತ್ತಿದ್ದಾರೆ. ಹೀಗಾಗಿ ನೀವೂ ಬೇಗನೆ ಮದುವೆಯಾಗಿ ಎನ್ನುವ ಸಲಹೆಯನ್ನು ಅವರಿಗೆ ನೀಡಲಾಗಿದೆ.

ಆಲಿಯಾ ಮತ್ತು ರಣಬೀರ್ ಕಳೆದ ವರ್ಷವೇ ಮದುವೆಯಾಗುವ ಬಗ್ಗೆ ಯೋಚನೆ ಹೊಂದಿದ್ದರಾದರೂ ಕೋವಿಡ್ ಲಾಕ್‌ಡೌನ್‌ನಿಂದಾಗಿ ಅದನ್ನು ಮುಂದೂಡಿದ್ದರು.





Read More…Source link