Karnataka news paper

ಮಾರಕಾಸ್ತ್ರಗಳಿಂದ ವೃದ್ಧ ದಂಪತಿಯ ಬರ್ಬರ ಹತ್ಯೆ! ಭೀಕರ ಘಟನೆಗೆ ಬೆಚ್ಚಿಬಿದ್ದ ಶಿಡ್ಲಘಟ್ಟ!


ಶಿಡ್ಲಘಟ್ಟ: ಶಿಡ್ಲಘಟ್ಟದ ಕಾಮಾಟಿಗರ ಪೇಟೆಯ ವಾಸವಿ ಕಲ್ಯಾಣ ಮಂಟಪದ ಹಿಂಭಾಗದಲ್ಲಿ ವೃದ್ಧ ದಂಪತಿಯನ್ನು ಮಾರಕಾಯುಧಗಳಿಂದ ಕೊಲೆ ಮಾಡಲಾಗಿದೆ. ಶ್ರೀನಿವಾಸ್‌ ಅಲಿಯಾಸ್‌ ದೊಂತಿ ಸೀನಪ್ಪ(76), ಪತ್ನಿ ಪದ್ಮಾವತಿ(67) ಕೊಲೆಯಾದ ದುರ್ದೈವಿಗಳು.

ಮನೆಯಲ್ಲಿ ಇಬ್ಬರಷ್ಟೇ ವಾಸಿಸುತ್ತಿದ್ದು ಹಣ ಚಿನ್ನಾಭರಣಗಳಿಗಾಗಿ ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ. ಮನೆಯಲ್ಲಿನ ಬೀರು ಕಪಾಟುವನ್ನು ಕಿತ್ತು ಬಟ್ಟೆ ಬರೆಯನ್ನು ಚೆಲ್ಲಾಡಿದ್ದು ಹಣ ಚಿನ್ನಾಭರಣಗಳನ್ನು ಕದ್ದೊಯ್ಯಲಾಗಿದೆ. ಕಳ್ಳತನಕ್ಕೆ ಒಳಗಾಗಿರುವ ಚಿನ್ನಾಭರಣದ ಮೌಲ್ಯ ಎಷ್ಟು ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ. ಹಳೆಯ ಮನೆ ಇದಾಗಿದ್ದು ಮನೆಯ ಚಾವಣಿಯಲ್ಲಿನ ಗವಾಕ್ಷಿ ಮೂಲಕ ಮನೆಯೊಳಗೆ ಕಿರಾತಕರು ನುಸುಳಿ ಈ ದುಷ್ಕೃತ್ಯ ನಡೆಸಿದ್ದಾರೆ.
ಬಿಡದಿಯ ಈಗಲ್‌ ಟನ್‌ ರೆಸಾರ್ಟ್‌ನ ವಿಲ್ಲಾದಲ್ಲಿ ವೃದ್ದ ದಂಪತಿ ಬರ್ಬರ ಹತ್ಯೆ..!
ಪದ್ಮಾವತಿ ಅವರ ತಲೆ ಹಿಡಿದು ಬಾಗಿಲ ವಸಲಿಗೆ ಹಣೆಯನ್ನು ಚಚ್ಚಿದ ರೀತಿಯಲ್ಲಿದ್ದರೆ ಶ್ರೀನಿವಾಸ್‌ ಅವರ ತಲೆಗೆ ಮಾರಕಾಯುಧದಿಂದ ಹೊಡೆದ ರೀತಿಯಲ್ಲಿ ಇಬ್ಬರ ಹೆಣಗಳೂ ರಕ್ತದ ಮಡುವಿನಲ್ಲಿ ಬಿದ್ದಿದ್ದವು, ಶ್ರೀನಿವಾಸ್‌ ಅವರ ಮೈಮೇಲೆ ಬಟ್ಟೆಗಳು ಇರಲಿಲ್ಲ. ಬುಧವಾರ ರಾತ್ರಿ ಸುಮಾರು 10.30ರ ಆಸುಪಾಸಿನಲ್ಲಿ ಶ್ರೀನಿವಾಸ್‌ ಹಾಗೂ ಪದ್ಮಾವತಿ ದಂಪತಿ ಮನೆಯಲ್ಲಿ ಮಾತನಾಡಿಕೊಳ್ಳುವ ಸದ್ದು ಅಕ್ಕ ಪಕ್ಕದವರು ಸಹಜವಾಗಿ ಕೇಳಿಸಿಕೊಂಡಿದ್ದಾರೆ. ಹಾಗಾಗಿ ನಡು ರಾತ್ರಿಯ ನಂತರ ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ.

ಮನೆ ಕೆಲಸದಾಕೆ ಗುರುವಾರ ಬೆಳಗ್ಗೆ ಬಂದು ಬಾಗಿಲು ಬಡಿದರೂ ಬಾಗಿಲು ತೆಗೆಯದೆ ಇದ್ದಾಗ ಹಿಂಬಾಗಿಲ ಮೂಲಕ ಮನೆಯೊಳಗೆ ತೆರಳಿದಾಗ ಶ್ರೀನಿವಾಸಪ್ಪ ಮನೆಯೊಳಗೆ ಬಿದ್ದಿದ್ದು ಕಂಡು ಭಯಗೊಂಡು ಹೊರಗೆ ಬಂದು ಅಕ್ಕ ಪಕ್ಕದವರಿಗೆ ತಿಳಿಸಿದ್ದಾಳೆ. ಅಕ್ಕಪಕ್ಕದವರು ಮನೆ ಒಳಗೆ ಹೋಗಿ ನೋಡಿದಾಗ ಶ್ರೀನಿವಾಸ್‌ ಪದ್ಮಾವತಿ ಸಹ ರಕ್ತದ ಮಡುವಿನಲ್ಲಿ ಬಿದ್ದಿದ್ದು ಕಂಡು ಘಟನೆ ಬೆಳಕಿಗೆ ಬಂದಿದೆ. ಪದ್ಮಾವತಿ ಶ್ರೀನಿವಾಸ್‌ ದಂಪತಿಗಳಿಗೆ ಹೆಣ್ಣು ಮಕ್ಕಳಿಬ್ಬರಿದ್ದು ಮದುವೆ ನಂತರ ಇಬ್ಬರೂ ಹೆಣ್ಣು ಮಕ್ಕಳು ಬೆಂಗಳೂರಲ್ಲಿ ನೆಲೆಸಿದ್ದಾರೆ. ಹಾಗಾಗಿ ವೃದ್ಧ ದಂಪತಿಗಳಿಬ್ಬರಷ್ಟೆ ಮನೆಯಲ್ಲಿ ವಾಸವಿದ್ದರು. ವಾಸವಿ ರಸ್ತೆಯಲ್ಲಿನ ಬಟ್ಟೆ ಅಂಗಡಿಯನ್ನು ನಡೆಸುತ್ತಿದ್ದ ಶ್ರೀನಿವಾಸ್‌ ಬಟ್ಟೆ ಅಂಗಡಿ ಸೀನಪ್ಪ ಎಂದೆ ಚಿರಪರಿಚಿತರಾಗಿದ್ದರು. ಶಿಡ್ಲಘಟ್ಟ ನಗರದಲ್ಲಿನ ತುಂಬಾ ಹಳೆಯದಾದ ದೊಂತಿಯವರ ಛತ್ರದ ಮಾಲೀಕರಲ್ಲಿ ಇವರೂ ಒಬ್ಬರಾಗಿದ್ದಾರೆ.
ಬಳ್ಳಾರಿಯ 12 ವರ್ಷಗಳ ಹಿಂದಿನ ಕೊಲೆ ಕೇಸ್ ಇನ್ನೂ ಜೀವಂತ..! ಕೇಂದ್ರದ ಅಂಗಳಕ್ಕೆ ಪದ್ಮಾವತಿ ಪ್ರಕರಣ..!
ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲಿಸಿದೆ. ಎಸ್ಪಿ ಮಿಥುನ್‌ ಕುಮಾರ್‌, ಡಿವೈಎಸ್ಪಿ ಚಂದ್ರಶೇಖರ್‌, ಸಿಪಿಐ ಪುರುಷೋತ್ತಮ್‌, ಎಸ್‌ಐ ಸತೀಶ್‌ ಇನ್ನಿತರರು ಭೇಟಿ ನೀಡಿ ಪರಿಶೀಲಿಸಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಹಿರಿಯ ದಂಪತಿಗಳಿಬ್ಬರ ಜೋಡಿ ಕೊಲೆ ವಿಚಾರ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಸಾವಿರಾರು ಮಂದಿ ಜಮಾಯಿಸಿದರು. ವೃದ್ಧ ದಂಪತಿಗಳ ಕೊಲೆಗೆ ಒಂದು ಕಡೆ ಅಚ್ಚರಿ ಇನ್ನೊಂದು ಕಡೆ ಆತಂಕದ ಮಾತುಗಳು ಕೇಳಿ ಬಂದವು.



Read more

[wpas_products keywords=”deal of the day sale today offer all”]