Karnataka news paper

ಭಾರತದಲ್ಲಿ ಅಗ್ಗದ ಬೆಲೆಯಲ್ಲಿ ಲಭ್ಯವಾಗುವ ಬೆಸ್ಟ್‌ ಫಿಟ್ನೆಸ್‌ ಬ್ಯಾಂಡ್‌ಗಳು!


ಬ್ಯಾಂಡ್‌ಗಳು

ಹೌದು, ಸ್ಮಾರ್ಟ್‌ ಫಿಟ್ನೆಸ್‌ ಬ್ಯಾಂಡ್‌ಗಳು ನಮ್ಮ ಆರೋಗ್ಯದ ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಈ ಫಿಟ್ನೆಸ್‌ ಬ್ಯಾಂಡ್‌ಗಳು ಹೃದಯ ಬಡಿತದ ಮಾನಿಟರಿಂಗ್, ರಕ್ತದ ಆಮ್ಲಜನಕದ ಮಟ್ಟ ಮಾನಿಟರಿಂಗ್ ಮತ್ತು ಸ್ಲೀಪಿಂಗ್‌ ಮಾನಿಟರ್‌ ಫೀಚರ್ಸ್‌ ಅನ್ನು ಒಳಗೊಂಡಿವೆ. ಹಾಗಾದ್ರೆ ಮಾರುಕಟ್ಟೆಯಲ್ಲಿ ನೀವು 5,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ಕೆಲವು ಅತ್ಯುತ್ತಮ ಫಿಟ್‌ನೆಸ್ ಬ್ಯಾಂಡ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರೆಡ್ಮಿ ಬ್ಯಾಂಡ್ ಪ್ರೊ

ರೆಡ್ಮಿ ಬ್ಯಾಂಡ್ ಪ್ರೊ

ರೆಡ್ಮಿ ಬ್ಯಾಂಡ್ ಪ್ರೊ ಫಿಟ್ನೆಸ್ ಬ್ಯಾಂಡ್ ಸ್ಟ್ಯಾಂಡರ್ಡ್ ಫಿಟ್ನೆಸ್ ಬ್ಯಾಂಡ್ ವಿನ್ಯಾಸವನ್ನು ಹೊಂದಿದೆ. ಈ ಫಿಟ್ನೆಸ್‌ ಬ್ಯಾಂಡ್‌ 1.47 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು 450 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇನ್ನು ಈ ಬ್ಯಾಂಡ್ PPG ಹಾರ್ಟ್‌ಬೀಟ್‌ ಸೆನ್ಸಾರ್‌, ಲೈಟ್‌ ಸೆನ್ಸಾರ್‌, ವಾಟರ್‌ ಪ್ರೂಪ್‌ ಬಾಡಿ, 14 ದಿನದ ಬ್ಯಾಟರಿ ಬಾಳಿಕೆಯನ್ನು ಸಹ ನೀಡಲಿದೆ. ಇದು ಆಕರ್ಷಕ ಫೀಚರ್ಸ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಹೆಚ್ಚಿನ ಜನರನ್ನು ಆಕರ್ಷಿಸಿದೆ. ಪ್ರಸ್ತುತ ಅಮೆಜಾನ್‌ ಪ್ಲಾಟ್‌ಫಾರ್ಮ್‌ನಲ್ಲಿ 3,499ರೂ. ಬೆಲೆಯಲ್ಲಿ ಲಭ್ಯವಾಗಲಿದೆ.

ನಾಯ್ಸ್‌ HRX X-Fit 1

ನಾಯ್ಸ್‌ HRX X-Fit 1

ನಾಯ್ಸ್‌ HRX X-Fit 1 ಫಿಟ್‌ನೆಸ್ ಬ್ಯಾಂಡ್ 5,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ಬ್ಯಾಂಡ್‌ಗಳಲ್ಲಿ ಒಂದಾಗಿದೆ. ಇದು ಫಿಟ್ನೆಸ್‌ ಬ್ಯಾಂಡ್‌ ವಿನ್ಯಾಸವನ್ನು ಹೊಂದಿರುವ ಸ್ಮಾರ್ಟ್‌ವಾಚ್‌ ಆಗಿದೆ. ಈ ಫಿಟ್ನೆಸ್‌ ಬ್ಯಾಂಡ್‌ 360×400 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯದ 1.52 ಇಂಚಿನ ಟ್ರೂವ್ಯೂ IPS LCD ಡಿಸ್‌ಪ್ಲೇ ಹೊಂದಿದೆ. ಇದು ಯಾವಾಗಲೂ ಆನ್ ಆಗಿರುವ SpO2 ಮಾನಿಟರ್, 24×7 ಮಾನಿಟರಿಂಗ್‌ ಹೊಂದಿರುವ ಹಾರ್ಟ್‌ಬೀಟ್‌ ಸೆನ್ಸಾರ್‌, ಸ್ಟ್ರೆಸ್‌ ಮಾನಿಟರ್, ವಾಟರ್‌ ಪ್ರೂಫ್‌ ಬಾಡಿ ಮತ್ತು 10 ದಿನಗಳ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ. ಪ್ರಸ್ತುತ ಈ ಫಿಟ್ನೆಸ್‌ ಬ್ಯಾಂಡ್‌ ಬೆಲೆ 2,999ರೂ.ಆಗಿದೆ.

ಹುವಾವೇ ಬ್ಯಾಂಡ್ 6

ಹುವಾವೇ ಬ್ಯಾಂಡ್ 6

ಹುವಾವೇ ಬ್ಯಾಂಡ್‌ 6 ಹಲವು ಆಕರ್ಷಕ ಫೀಚರ್ಸ್‌ಗಳನ್ನು ಹೊಂದಿರುವ ಬ್ಯಾಂಡ್‌ ಆಗಿದೆ. ಈ ಫಿಟ್ನೆಸ್‌ ಬ್ಯಾಂಡ್‌ ಬ್ಲಡ್‌ ಆಕ್ಸಿಜನ್‌ ಮಾನಿಟರ್, ಹಾರ್ಟ್‌ಬೀಟ್‌ ಸೆನ್ಸಾರ್‌, ಸ್ಲಿಪಿಂಗ್‌ ಮಾನಿಟರ್‌,ಲೈಪ್‌ಸ್ಟೈಲ್‌ಮಾನಿಟರ್ ನಂತಹ ಫೀಚರ್ಸ್‌ಗಳನ್ನು ಹೊಂದಿದೆ. ಇನ್ನು ಈ ಬ್ಯಾಂಡ್‌ 1.47 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಈ ಬ್ಯಾಂಡ್‌ ಹುವಾವೇ ಹೆಲ್ತ್‌ ಅಪ್ಲಿಕೇಶನ್ ಮೂಲಕ ಬೆಂಬಲಿಸಲಿದೆ. ಪ್ರಸ್ತುತ ಈ ಫಿಟ್ನೆಸ್‌ ಬ್ಯಾಂಡ್‌ ಬೆಲೆ 3,990ರೂ. ಆಗಿದೆ.

ರಿಯಲ್‌ಮಿ ಬ್ಯಾಂಡ್ 2

ರಿಯಲ್‌ಮಿ ಬ್ಯಾಂಡ್ 2

ರಿಯಲ್‌ಮಿ ಬ್ಯಾಂಡ್ 1.4-ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇ ಹೊಂದಿದೆ. ಇದು 12 ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಇನ್ನು ಈ ಫಿಟ್ನೆಸ್‌ ಬ್ಯಾಂಡ್‌ ಹೃದಯ ಬಡಿತ ಮಾನಿಟರ್, SpO2 ಮಾನಿಟರ್, ವಾಟರ್‌ ಫ್ರೂಪ್‌‌ ಬಾಡಿ ಮತ್ತು ಸ್ಮಾರ್ಟ್ AI ಡಿವೈಸ್‌ಗಳಿಗೆ ಬೆಂಬಲವನ್ನು ನೀಡಲಿದೆ. ಇದನ್ನು ಆಂಡ್ರಾಯ್ಡ್‌ ಮತ್ತು ಐಒಎಸ್‌ ಡಿವೈಸ್‌ಗಳಲ್ಲಿ ರಿಯಲ್‌ಮಿ ಲಿಂಕ್ ಅಪ್ಲಿಕೇಶನ್ ಮೂಲಕ ನಿಯಂತ್ರಿಸಬಹುದಾಗಿದೆ. ಈ ಬ್ಯಾಂಡ್‌ ಇದೀಗ 2,999ರೂ.ಗಳಲ್ಲಿ ಲಭ್ಯವಿದೆ.



Read more…

[wpas_products keywords=”smartphones under 15000 6gb ram”]