Source : ANI
ನವದೆಹಲಿ: ಭುವನ ಸುಂದರಿ (miss-universe) ಸ್ಪರ್ಧೆಯಲ್ಲಿ ವಿಜೇತರಾದ ಭಾರತದ ಹರ್ನಾಜ್ ಕೌರ್ ಸಂಧು ಇಂದು ಸ್ವದೇಶಕ್ಕೆ ಆಗಮಿಸಿದ್ದು, ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಇದನ್ನೂ ಓದಿ: ಭಾರತದ ಕೀರ್ತಿ ಪತಾಕೆ ಹಾರಿಸಿದ ಹಾಲಿ ಭುವನ ಸುಂದರಿ ಹರ್ನಾಜ್ ಸಂಧು ಯಾರು?
ಇಂದು ಸಂಜೆ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭುವನ ಸುಂದರಿ ‘ಹರ್ನಾಜ್ ಕೌರ್ ಸಂಧು’ರನ್ನು ಅಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ಅವರ ಬರುವಿಕೆಗಾಗಿಯೇ ಕಾದು ಕುಳಿತಿದ್ದ ಅಭಿಮಾನಿಗಳು, ಸ್ನೇಹಿತರು ಮತ್ತು ಬಂಧುಗಳುಹರ್ನಾಜ್ ಕೌರ್ ಸಂಧು ಪರ ಘೋಷಣೆಗಳನ್ನು ಕೂಗಿ ಸ್ವಾಗತಿಸಿದರು.
#WATCH Miss Universe 2021 winner Harnaaz Kaur Sandhu arrives in Mumbai after winning the pageant pic.twitter.com/H1Eh0A1mtY
— ANI (@ANI) December 15, 2021
21 ವರ್ಷಗಳ ಬಳಿಕ ಭಾರತಕ್ಕೆ ಭುವನ ಸುಂದರಿ ಪಟ್ಟ ತಂದುಕೊಟ್ಟ ಸುಂದರಿ
ಇನ್ನು ಪಂಜಾಬ್ ಮೂಲದ 21 ವರ್ಷದ ಸುಂದರಿ ಹರ್ನಾಜ್ ಕೌರ್ ಸಂಧು(Harnaaz Kaur Sandhu) 70ನೇ ಮಿಸ್ ಯೂನಿವರ್ಸ್ ಪಟ್ಟ ಒಲಿಸಿಕೊಂಡಿದ್ದರು. ಇದು ಬರೊಬ್ಬರಿ 21 ವರ್ಷಗಳ ಬಳಿಕ ಭಾರತಕ್ಕೆ ಒಲಿದುಬಂದ ಪಟ್ಟವಾಗಿದೆ. ಕೊನೆಯ ಬಾರಿ 2000ನೇ ಇಸವಿಯಲ್ಲಿ ಬಾಲಿವುಡ್ ನಟಿ ಲಾರಾ ದತ್ತ ಅವರಿಗೆ ಮಿಸ್ ಯೂನಿವರ್ಸ್ ಪಟ್ಟ ಒಲಿದಿತ್ತು. ಆ ಬಳಿಕ ಬರೋಬ್ಬರಿ 21 ವರ್ಷಗಳ ನಂತರ ಭಾರತದ ರ್ನಾಜ್ ಕೌರ್ ಸಂಧು ಈ ಕಿರೀಟವನ್ನು ಧರಿಸಿದ್ದಾರೆ.
ಇದನ್ನೂ ಓದಿ: 21 ವರ್ಷಗಳ ನಂತರ ಭಾರತಕ್ಕೆ ಭುವನ ಸುಂದರಿ ಪಟ್ಟ: ಕಿರೀಟ ತೊಟ್ಟ ಪಂಜಾಬ್ ಮೂಲದ ಹರ್ನಾಜ್ ಸಂಧು
ಇಸ್ರೇಲ್ ನ ಐಲಾಟ್ ನಲ್ಲಿ ನೆರವೇರಿದ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಪರಾಗ್ವೆ ಮತ್ತು ದಕ್ಷಿಣ ಆಫ್ರಿಕಾದ ಸುಂದರಿಯರನ್ನು ಹಿಂದಿಕ್ಕಿ ಕಿರೀಟ ಧರಿಸಿಕೊಂಡಿದ್ದಾರೆ.