‘ಕೋವಿಡ್ ಹೊಡೆತದಿಂದಾಗಿ ಹೆಚ್ಚು ಜನ ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುತ್ತಿಲ್ಲ. ಹಿಂದಿನಂತೆ ಜನ ಮುಕ್ತವಾಗಿ ಬಿಎಂಟಿಸಿಯಲ್ಲಿ ಸಂಚಾರ ಮಾಡಬೇಕೆನ್ನುವುದು ನಮ್ಮ ಆಶಯ. ಇಲಾಖೆ ನಷ್ಟದಲ್ಲಿದ್ದರೂ ಸದ್ಯ ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆ ಮಾಡುವ ಪ್ರಸ್ತಾಪವಿಲ್ಲ. ಕೋವಿಡ್‌ನಿಂದಾಗಿ ಸಂಚಾರ ಸ್ಥಗಿತಗೊಂಡಿರುವ ವೋಲ್ವೊ ಬಸ್‌ಗಳನ್ನೂ ಸಾಮಾನ್ಯ ದರದಲ್ಲಿ ಸಂಚಾರಕ್ಕೆ ಅನುವು ಮಾಡಲಾಗಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಇನ್ನೂ 800 ವೋಲ್ವೊ ಬಸ್‌ಗಳನ್ನೂ ಕಾರ್ಯಾಚರಣೆಗೊಳಿಸಲಾಗುವುದು’ ಎಂದು ಸಚಿವರು ಹೇಳಿದರು.
‘ಸಾರಿಗೆ ಇಲಾಖೆಗೆ ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲಾಗುತ್ತಿದೆ. ಎಲೆಕ್ಟ್ರಿಕ್ ಬಸ್‌ಗಳಿಗೆ ಖಾಸಗಿ ಚಾಲಕರನ್ನು ಬಳಸಿದರೂ ಬಿಎಂಟಿಸಿ ಚಾಲಕರ ಹುದ್ದೆಗೆ ಯಾವುದೇ ಚ್ಯುತಿಯಾಗುವುದಿಲ್ಲ. ಕೇಂದ್ರ ಸರಕಾರದ ಮಾರ್ಗಸೂಚಿಯನ್ವಯ ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲಾಗುತ್ತಿದೆ’ ಎಂದು ತಿಳಿಸಿದರು.
ನಿತ್ಯ ಎರಡು ಕೋಟಿ ರೂ. ನಷ್ಟ
ಬಿಎಂಟಿಸಿ ಸಂಸ್ಥೆ ನಿತ್ಯ 2 ಕೋಟಿ ರೂ. ನಷ್ಟ ಅನುಭವಿಸುತ್ತಿದೆ. ಸಂಸ್ಥೆಯ ನಿಯಮಗಳನ್ನು ನೌಕರರು ಪಾಲಿಸಬೇಕು. ಯಾವುದೇ ಸಂಘ ಸಂಸ್ಥೆಗಳೊಂದಿಗೆ ಹೋರಾಟಕ್ಕಿಳಿಯುವುದು ಸರಿಯಲ್ಲ. ಸಂಸ್ಥೆಯು ಯಾವಾಗಲೂ ನೌಕರರ ಪರವಾಗಿದೆ ಎಂಬುದನ್ನು ಅರಿಯಬೇಕು ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ಹೇಳಿದರು.
ವಜಾಗೊಂಡಿದ್ದ ಬಿಎಂಟಿಸಿಯ 100 ಮಂದಿಗೆ ಮರು ನೇಮಕ ಆದೇಶ
ಬೆಂಗಳೂರು: ನಾನಾ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ನಡೆಸಿ ವಜಾಗೊಂಡಿದ್ದ ಬಿಎಂಟಿಸಿಯ ಚಾಲಕರು ಮತ್ತು ನಿರ್ವಾಹಕರ ಪೈಕಿ 100 ಮಂದಿಗೆ ಸಚಿವ ಬಿ. ಶ್ರೀರಾಮುಲು ಗುರುವಾರ ಮರುನೇಮಕ ಆದೇಶ ನೀಡಿದರು.
ಲೋಕ ಅದಾಲತ್ ಮೂಲಕ ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಯಿತು. ‘ನೌಕರರು ಮುಷ್ಕರ ನಡೆಸುವುದು ಬೇಡ ಎನ್ನುವುದಿಲ್ಲ. ಆದರೆ ಅದಕ್ಕೂ ಮೊದಲು ಸಂಬಂಧಪಟ್ಟ ಸಚಿವರು, ಸಿಎಂ ಜತೆಗೆ ಚರ್ಚಿಸಬೇಕು. ಮುಷ್ಕರ ನಡೆಸಿ ಅಮಾನತುಗೊಂಡಿದ್ದ 1500 ಮಂದಿಯನ್ನು ವಾಪಸ್ ಪಡೆಯಲಾಗಿದೆ. 1353 ಮಂದಿ ವಜಾಗೊಂಡಿದ್ದು, ಮರುನೇಮಕಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ಮಾನವೀಯತೆ ದೃಷ್ಟಿಯಿಂದ ಮರು ನೇಮಕ ಆದೇಶ ನೀಡಲಾಗುತ್ತಿದೆ’ ಎಂದು ಸಿಎಂ ಹೇಳಿದರು.
‘ಮಾಸಾಂತ್ಯದೊಳಗೆ 700 ಮಂದಿಗೆ ನೇಮಕಾತಿ ಪತ್ರ ನೀಡಲಾಗುವುದು. ಇನ್ನು ಮುಂದೆ ವಿವೇಚನೆರಹಿತ ಮುಷ್ಕರ ನಡೆಸಿದರೆ ರಕ್ಷಣೆ ಮಾಡುವುದು ಕಷ್ಟವಾಗಲಿದೆ. ಸರಕಾರದ ಬಗ್ಗೆ ನೌಕರರಿಗೆ ಗೌರವವಿರಬೇಕು. ಇನ್ನು ಮುಂದೆ ಪ್ರತಿ ತಿಂಗಳು ಸಂಬಳ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
Read more
[wpas_products keywords=”deal of the day sale today offer all”]