Karnataka news paper

ಆರ್‌ಬಿಐ ಬಡ್ಡಿ ದರ ನೀತಿ ಗುರುವಾರ ಪ್ರಕಟ, ರಿವರ್ಸ್‌ ರೆಪೊ 3.5%ಗೆ ಏರಿಕೆ ಸಂಭವ


ಮುಂಬಯಿ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತನ್ನ ಹಣಕಾಸು ನೀತಿಯನ್ನು ಸ್ಥಿರವಾಗಿಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದೆ. ಈ ನಿಟ್ಟಿನಲ್ಲಿ ಸರಕಾರದ ಮೆಗಾ ಸಾಲದ ವೆಚ್ಚವನ್ನು ಬೆಂಬಲಿಸುವ ಹಾಗೂ ಏಷ್ಯಾದ ಮೂರನೇ ಅತಿ ದೊಡ್ಡ ಆರ್ಥಿಕತೆಯನ್ನು ಚೇತರಿಸಲು ಪುಷ್ಟಿ ನೀಡಬೇಕಾಗಿದೆ.

ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ನೇತೃತ್ವದಲ್ಲಿ ಆರು ಸದಸ್ಯರ ಹಣಕಾಸು ನೀತಿ ಸಮಿತಿ ಫೆ. 10ರಂದು ನೀತಿ ನಿರ್ಣಯಗಳನ್ನು ಪ್ರಕಟಿಸಲಿದೆ. ಮೂರು ದಿನಗಳ ಪರಾಮರ್ಶೆ ಸಭೆ ಈಗಾಗಲೇ ಆರಂಭವಾಗಿದೆ.

ಆರ್‌ಬಿಐ ತನ್ನ ರಿವರ್ಸ್‌ ರೆಪೊ ದರವನ್ನು ಶೇ. 3.55ಕ್ಕೆ ಏರಿಸುವ ಹಾಗೂ ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವ ಸಾಧ್ಯತೆ ಇದೆ. ರಿವರ್ಸ್‌ ರೆಪೊ ದರ ಎಂದರೆ ಆರ್‌ಬಿಐ ಬ್ಯಾಂಕ್‌ಗಳಿಂದ ಸ್ವೀಕರಿಸುವ ಠೇವಣಿಗೆ ನೀಡುವ ಬಡ್ಡಿ ದರ. ರಿವರ್ಸ್‌ ರೆಪೊ ದರದಲ್ಲಿ ಏರಿಕೆಯಾದರೆ ವ್ಯವಸ್ಥೆಗೆ ಹಣದ ಪೂರೈಕೆ ಕಡಿಮೆಯಾಗುತ್ತದೆ. ಹಣದುಬ್ಬರ ಏರುಗತಿಯಲ್ಲಿ ಇದ್ದಾಗ ಆರ್‌ಬಿಐ ರಿವರ್ಸ್‌ ರೆಪೊ ದರವನ್ನು ಏರಿಸುತ್ತದೆ.

Repo Rate: ಆರ್‌ಬಿಐನಿಂದ ಮೂರು ದಿನಗಳ ಮಹತ್ವದ ಸಭೆ: ಗುರುವಾರ ಹಣಕಾಸು ನೀತಿ ಪ್ರಕಟ
ಮುಂಬಯಿನಲ್ಲಿ ಆರ್‌ಬಿಐ ಕಚೇರಿಯಲ್ಲಿ ಗುರುವಾರ ಬೆಳಗ್ಗೆ 10 ಗಂಟೆಗೆ ಗವರ್ನರ್‌ ಶಕ್ತಿಕಾಂತ ದಾಸ್‌ ಹಣಕಾಸು ನೀತಿಯನ್ನು ಪ್ರಕಟಿಸಲಿದ್ದು, ಎಲ್ಲರ ಗಮನ ಸೆಳೆದಿದೆ. ಕೋವಿಡ್‌ ಪೂರ್ವ ಹಣಕಾಸು ನೀತಿಯ ಸ್ಥಿರತೆಗೆ ಮರಳುವ ಸೂಚನೆಯನ್ನು ನೀಡಿದ್ದಾರೆ. ಅಂದರೆ ರೆಪೊ ದರ ಏರಿಕೆಯಾಗುವ ನಿರೀಕ್ಷೆ ಇದೆ.

ಸರಕಾರದ ಸಾಲದ ವೆಚ್ಚವನ್ನು ತಗ್ಗಿಸುವ ನಿಟ್ಟಿನಲ್ಲಿ ಆರ್‌ಬಿಐ ಬಾಂಡ್‌ ಖರೀದಿಯನ್ನು ಹೆಚ್ಚಿಸಲಿದೆಯೇ ಎಂಬ ಕಾತರ ಬಾಂಡ್‌ ವಹಿವಾಟುದಾರರಲ್ಲಿ ಉಂಟಾಗಿದೆ. ಈ ಸಂಬಂಧ ಶಕ್ತಿಕಾಂತ ದಾಸ್‌ ಅವರಿಂದ ಸ್ಪಷ್ಟತೆಯನ್ನು ಅವರು ಬಯಸುತ್ತಿದ್ದಾರೆ. ಆರ್‌ಬಿಐ ಕಳೆದ ವರ್ಷ 2.2 ಲಕ್ಷ ಕೋಟಿ ರೂ. ಬಾಂಡ್‌ಗಳನ್ನು ಖರೀದಿಸಿತ್ತು. ಹಣದುಬ್ಬರವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಆರ್‌ಬಿಐ ಸಹಕರಿಸಬೇಕಾಗಿದೆ. ಆರ್‌ಬಿಐ ಪ್ರಕಾರ ಹಣದುಬ್ಬರ ಗರಿಷ್ಠ ಶೇ. 6ರ ತನಕ ಇರಬಹುದು. ಅದಕ್ಕೂ ಹೆಚ್ಚಿದರೆ ಅಪಾಯದ ಮಟ್ಟದಲ್ಲಿದೆ ಎಂದರ್ಥ.

ಭಾರತ 2021-22ರಲ್ಲಿ ದಾಖಲೆಯ ಶೇ. 9.2 ಮತ್ತು 2022-23ರಲ್ಲಿ ಶೇ. 8-8.5ರ ಜಿಡಿಪಿ ಬೆಳವಣಿಗೆ ದಾಖಲಿಸುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾದ ಹಣಕಾಸು ನೀತಿಯನ್ನು ಆರ್‌ಬಿಐ ನೀಡಬೇಕಾಗಿದೆ.

ರಾಗಿ, ಸಿರಿ ಧಾನ್ಯಗಳ ರಫ್ತು ಹೆಚ್ಚಳ ಸಂಭವ

ಹೊಸದಿಲ್ಲಿ: ಭಾರತದಿಂದ ರಾಗಿ ಮತ್ತು ಇತರ ಸಿರಿ ಧಾನ್ಯಗಳ ರಫ್ತಿನಲ್ಲಿ ಗಣನೀಯ ಹೆಚ್ಚಳ ನಿರೀಕ್ಷಿಸಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಇವುಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ಇದಕ್ಕೆ ಕಾರಣ.

ಪ್ರಸ್ತುತ ಭಾರತ ವಿಶ್ವದಲ್ಲೇ 5ನೇ ಅತಿ ದೊಡ್ಡ ಸಿರಿಧಾನ್ಯ ರಫ್ತುದಾರ ರಾಷ್ಟವಾಗಿದೆ. 2020-21ರಲ್ಲಿ ಭಾರತ 26.97 ದಶಲಕ್ಷ ಡಾಲರ್‌ ಮೌಲ್ಯದ ಸಿರಿಧಾನ್ಯಗಳನ್ನು ರಫ್ತು ಮಾಡಿತ್ತು. 2019-20ರಲ್ಲಿ 28.5 ದಶಲಕ್ಷ ಡಾಲರ್‌ ಮೌಲ್ಯದ ಸಿರಿಧಾನ್ಯ ರಫ್ತು ಮಾಡಿತ್ತು.

ಅಮೆರಿಕ, ರಷ್ಯಾ, ಉಕ್ರೇನ್‌, ಭಾರತ, ಚೀನಾ, ನೆದರ್ಲೆಂಡ್‌, ಫ್ರಾನ್ಸ್‌, ಪೋಲೆಂಡ್‌, ಅರ್ಜೆಂಟೀನಾ ಸಿರಿ ಧಾನ್ಯಗಳನ್ನು ಮಾರಾಟ ಮಾಡುವ ಪ್ರಮುಖ ರಾಷ್ಟಗಳಾಗಿವೆ. 2020ರಲ್ಲಿ 466 ದಶಲಕ್ಷ ಡಾಲರ್‌ ಮೌಲ್ಯದ ಸಿರಿಧಾನ್ಯಗಳ ರಫ್ತು ಆಗಿತ್ತು. ಮುಖ್ಯವಾಗಿ ಸೌದಿ ಅರೇಬಿಯಾ, ಯುಎಇ, ನೇಪಾಳ ಭಾರತದಿಂದ ಸಿರಿಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಲಿಬಿಯಾ, ಟುನಿಷಿಯಾ, ಮೊರೊಕ್ಕೊ, ಬ್ರಿಟನ್‌, ಯೆಮೆನ್‌, ಒಮಾನ್‌, ಅಲ್ಜೀರಿಯಾ ಕೂಡ ಆಮದು ಮಾಡಿಕೊಳ್ಳುತ್ತಿವೆ. ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದೆ. ಜಾಗತಿಕ ಸಿರಿ ಧಾನ್ಯ ಉತ್ಪಾದನೆಯಲ್ಲಿ ಶೇ. 41 ಪಾಲನ್ನು ಭಾರತ ಹೊಂದಿದೆ.



Read more…

[wpas_products keywords=”deal of the day”]