PTI
ಮುಂಬೈ: ಆರ್ ಬಿಐ ವಿತ್ತೀಯ ನೀತಿ ಪ್ರಕಟವಾಗುತ್ತಿದ್ದಂತೆ ಮುಂಬೈ ಷೇರು ಮಾರುಕಟ್ಟೆಯ ಗುರುವಾರದ ಆರಂಭಿಕ ವಹಿವಾಟಿನಲ್ಲಿ 110 ಪಾಯಿಂಟ್ ಗಳಿಗೂ ಅಧಿಕ ಏರಿಕೆ ಕಂಡುಬಂದಿದೆ. ಇನ್ಫೋಸಿಸ್, ಹೆಚ್ ಡಿಎಫ್ ಸಿ, ಟಾಟಾ ಸ್ಟೀಲ್ ಗಳಲ್ಲಿ ಬಹುತೇಕ ಹೆಚ್ಚಳ ಕಂಡುಬಂದಿದೆ.
ಮುಂಬೈ ಷೇರು ಮಾರುಕಟ್ಟೆಯ ಆರಂಭಿಕ ವಹಿವಾಟಿನಲ್ಲಿ 111.34 ಪಾಯಿಂಟ್‌ಗಳು ಅಥವಾ 0.19 ಶೇಕಡಾ ಏರಿಕೆಯಾಗಿ 58,577.31 ಕ್ಕೆ ವಹಿವಾಟು ನಡೆಸುತ್ತಿದೆ. ಅಂತೆಯೇ, ನಿಫ್ಟಿ 34 ಪಾಯಿಂಟ್‌ಗಳು ಅಥವಾ 0.19ಗಳಷ್ಟು ಏರಿಕೆ ಕಂಡುಬಂದು 17,497.80 ಕ್ಕೆ ತಲುಪಿತು.
ಸೆನ್ಸೆಕ್ಸ್ ಹೆಚ್ಚಳದಲ್ಲಿ ಪವರ್‌ಗ್ರಿಡ್ ಅತಿ ಹೆಚ್ಚು ವಹಿವಾಟು ನಡೆಸಿದ್ದು, ಸುಮಾರು ಶೇಕಡಾ 2ರಷ್ಟು ಏರಿಕೆ ಕಂಡುಬಂದಿದೆ, ನಂತರ ಇನ್ಫೋಸಿಸ್, ಟಾಟಾ ಸ್ಟೀಲ್, ಎಚ್‌ಡಿಎಫ್‌ಸಿ ಬ್ಯಾಂಕ್, ಸನ್ ಫಾರ್ಮಾ, ಎಚ್‌ಡಿಎಫ್‌ಸಿ ಮತ್ತು ಎನ್‌ಟಿಪಿಸಿಗಳಲ್ಲಿ ಕೂಡ ಏರಿಕೆ ಕಂಡುಬಂದಿದೆ.
ಮತ್ತೊಂದೆಡೆ, ಮಾರುತಿ, ಏಷ್ಯನ್ ಪೇಂಟ್ಸ್, ಬಜಾಜ್ ಫಿನ್‌ಸರ್ವ್ ಮತ್ತು ಭಾರ್ತಿ ಏರ್‌ಟೆಲ್ ನಷ್ಟ ಅನುಭವಿಸಿವೆ. ಹಿಂದಿನ ಅವಧಿಯಲ್ಲಿ, 30-ಷೇರು ಸೂಚ್ಯಂಕವು 657.39 ಪಾಯಿಂಟ್‌ಗಳು ಅಥವಾ 1.14 ಶೇಕಡಾ ಏರಿಕೆಯಾಗಿ 58,465.97 ಕ್ಕೆ ಕೊನೆಗೊಂಡಿತು.
ಇದನ್ನೂ ಓದಿ: RBI-ಆರ್ ಬಿಐ ವಿತ್ತೀಯ ನೀತಿ ಪ್ರಕಟ, ಸತತ 10ನೇ ಬಾರಿ ರೆಪೊ ದರ ಯಥಾಸ್ಥಿತಿ ಮುಂದುವರಿಕೆ
ನಿಫ್ಟಿ 197.05 ಪಾಯಿಂಟ್‌ಗಳು ಅಥವಾ ಶೇಕಡಾ 1.14 ರಷ್ಟು ಜಿಗಿದು 17,463.80 ಕ್ಕೆ ತಲುಪಿದೆ. ಇದರೊಂದಿಗೆ, ಹಣಕಾಸು ವಿತ್ತೀಯ ನೀತಿ ಸಮಿತಿಯು ನಿಲುವನ್ನು ಬದಲಾಯಿಸುವ ಸಾಧ್ಯತೆಯಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ರಿಟೇಲ್ ರಿಸರ್ಚ್ ಮುಖ್ಯಸ್ಥ ದೀಪಕ್ ಜಸಾನಿ ಹೇಳಿದ್ದಾರೆ.
ಅಂತರರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 0.17 ಶೇಕಡಾ USD 91.39 ಕ್ಕೆ ಇಳಿದಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಮಾರಾಟಗಾರರಾಗಿ ಉಳಿದಿದ್ದಾರೆ, ನಿನ್ನೆ ವಿದೇಶಿ ಹೂಡಿಕೆದಾರರು 892.64 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಸ್ಟಾಕ್ ಎಕ್ಸ್‌ಚೇಂಜ್ ಡೇಟಾ ತಿಳಿಸಿದೆ.
Read more…
[wpas_products keywords=”deal of the day”]